ಜಪಾನ್ ಪ್ರಧಾನಿ ಶಿಂಜೋ ಅಬೆ ಆಸ್ಪತ್ರೆಗೆ ದಾಖಲು

shinjo
Published on

ಟೋಕಿಯೊ: ಜಪಾನ್ ಪ್ರಧಾನಿ ಶಿಂಜೊ ಅಬೆ ಆರೋಗ್ಯ ತಪಾಸಣೆಗಾಗಿ ಟೋಕಿಯೊದ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಿಯೊ ವಿಶ್ವವಿದ್ಯಾಲಯದ ಆಸ್ಪತ್ರೆಯಲ್ಲಿ ಅವರು ಒಂದು ದಿನದ ಆರೋಗ್ಯ ತಪಾಸಣೆಗೆ ಒಳಗಾಗುತ್ತಿದ್ದಾರೆ ಎಂದು ಮಾಹಿತಿ ಪಡೆದ ಸರ್ಕಾರಿ ಅಧಿಕಾರಿಯೊಬ್ಬರು ಸೋಮವಾರ ಹೇಳಿದ್ದಾರೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

ಮಾಜಿ ಆರ್ಥಿಕ ಸಚಿವ ಅಕಿರಾ ಅಮರಿ ಪ್ರಧಾನಮಂತ್ರಿಯವರಿಗೆ ವಿಶ್ರಾಂತಿ ಅಗತ್ಯವಿದೆ ಎಂದು ಟಿವಿ ಕಾರ್ಯಕ್ರಮವೊಂದಕ್ಕೆ ಹೇಳಿದ ಒಂದು ದಿನದ ನಂತರ ಅಬೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಆ ಸುದ್ದಿ ಸಂಸ್ಥೆ ವರದಿ ಮಾಡಿದೆ, ಅವರು ಆಯಾಸದಿಂದ ಬಳಲುತ್ತಿರುವ ಶಂಕೆ ಇದೆ.

2006ರ ಸೆಪ್ಟೆಂಬರ್ ನಂತರ ಅವರ ಪ್ರಧಾನಿ ಹುದ್ದೆ ಅವಧಿ ಪ್ರಾರಂಭವಾಗಿತ್ತು. ಆದರೆ 2007ರಲ್ಲಿ ದೀರ್ಘಕಾಲದ ಕರುಳು ಸಂಬಂಧಿ ಕಾಯಿಲೆಯಿಂದಾಗಿ ಹುದ್ದೆಯಿಂದ ಕೆಳಗಿಳಿದಿದ್ದರು.

ಈ ತಿಂಗಳ ಆರಂಭದಲ್ಲಿ, ಜಪಾನ್‌ನ ಉನ್ನತ ಸರ್ಕಾರಿ ವಕ್ತಾರ ಮುಖ್ಯ ಕ್ಯಾಬಿನೆಟ್ ಕಾರ್ಯದರ್ಶಿ ಯೋಶಿಹೈಡ್ ಸುಗಾ, ಅಬೆ ಎದುರಿಸಬಹುದಾದ ಯಾವುದೇ ಆರೋಗ್ಯ ಸಮಸ್ಯೆಗಳ ಬಗ್ಗೆ ನಿಗಾ ವಹಿಸಿದ್ದಾರೆ.

"ನಾನು ಪ್ರತಿದಿನ ಪ್ರಧಾನ ಮಂತ್ರಿಯವರನ್ನು ನೋಡುತ್ತಿದ್ದೇನೆ ಮತ್ತು ಅವರು ತಮ್ಮ ಕರ್ತವ್ಯಗಳನ್ನು ಸುಗಮವಾಗಿ ನಿರ್ವಹಿಸುತ್ತಿರುವುದರಿಂದ ಅವರಿಗೆ ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net