

ಹೈದರಾಬಾದ್: ಸೂಪರ್್ಹಿಟ್ ಸಿನಿಮಾ ಧಡಕ್ ಮೂಲಕ ನಟಿ ಜಾನ್ವಿ ಕಪೂರ್ ಬಾಲಿವುಡ್ಗೆ ಪದಾರ್ಪಣೆ ಮಾಡಿದರು. ಬಿಟೌನ್ಗೆ ತಕ್ಕಂತೆ ಗ್ಲಾಮರಸ್ ಪಾತ್ರಗಳನ್ನು ಮಾಡುತ್ತಾ ಇದ್ದ ಜಾಹ್ನವಿ ದಕ್ಷಿಣ ಸಿನಿಮಾರಂಗಕ್ಕೂ ಎಂಟ್ರಿ ಕೊಟ್ಟಿರುವುದು ಗೊತ್ತೆ ಇದೆ. ದಕ್ಷಿಣದ ಮೊದಲ ಸಿನಿಮಾದಲ್ಲೇ ಸ್ಟಾರ್ ಹೀರೋ ಜೂನಿಯರ್ ಎನ್ ಟಿಆರ್ ಎದುರು ಅವಕಾಶ ಗಿಟ್ಟಿಸಿಕೊಂಡರು. ಕೊರಟಾಲ ಶಿವ ಕಾಂಬಿನೇಷನ್‌ನಲ್ಲಿ ತಯಾರಾಗುತ್ತಿರುವ ದೇವರ ಎನ್ಟಿಆರ್ಗೆ ನಾಯಕಿಯಾಗಿ ಅಭಿನಯಿಸಿದ್ದಾರೆ. ಈ ಸಿನಿಮಾ ಚಿತ್ರ ಸೆಪ್ಟೆಂಬರ್ 27 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
ಟಾಲಿವುಡ್ನಲ್ಲಿ ತಮ್ಮ ಮೊದಲ ಸಿನಿಮಾ ದೇವರ ಬಿಡುಗಡೆಗೂ ಮುನ್ನವೇ ಜಾಹ್ನವಿ ಸಾಲು ಸಾಲು ಸಿನಿಮಾಗಳಲ್ಲಿ ಬಿಸಿಯಾಗಿದ್ದಾರೆ. ಮೆಗಾ ಪವರ್ಸ್ಟಾರ್ ರಾಮ್ ಚರಣ್ಗೆ ಜೋಡಿಯಾಗಿ ನಿರ್ದೇಶಕ ಬುಚ್ಚಿ ಬಾಬು (RC16) ಚಿತ್ರದಲ್ಲಿ ನಟಿಸಲಿದ್ದಾರೆ. ಎನ್‌ಟಿಆರ್ ಅವರ ದೇವರ ಭಾಗ 1 ಚಿತ್ರೀಕರಣ ಜುಲೈನಲ್ಲಿ ಮುಕ್ತಾಯವಾಗಲಿದೆ. ನಂತರ ಬುಚ್ಚಿ ಬಾಬು ನಿರ್ದೇಶನದ ರಾಮ್ ಚರಣ್, ಜಾನ್ವಿ ಕಪೂರ್ ಅಭಿನಯದ ಸಿನಿಮಾ ಆಗಸ್ಟ್ನಿಂದ ಸೆಟ್ಟೇರಲಿದೆ. ಈ ಸಿನಿಮಾ ಅಲ್ಲದೆ ಜಾಹ್ನವಿ ತೆಲುಗಿನಲ್ಲಿ ಮತ್ತೊಂದು ಸಿನಿಮಾಕ್ಕೆ ಸಹಿ ಹಾಕಿದ್ದಾರೆ. ಎಂದು ಹೇಳಲಾಗುತ್ತಿದೆ.
ಸದ್ಯ 'ಸರಿಪೋಧಾ ಸನಿವಾರಮ್' ಚಿತ್ರದ ಶೂಟಿಂಗ್ನಲ್ಲಿರುವ ನ್ಯಾಚುರಲ್ ಸ್ಟಾರ್ ನಾನಿ ಈ ಸಿನಿಮಾದ ನಂತರ 'ದಸರಾ' ಖ್ಯಾತಿಯ ಶ್ರೀಕಾಂತ್ ನಿರ್ದೇಶನದಲ್ಲಿ ಮುಂದಿನ ಸಿನಿಮಾ ಮಾಡಲಿದ್ದಾರೆ. ಅಕ್ಟೋಬರ್ ನಲ್ಲಿ ಈ ಸಿನಿಮಾ ಸೆಟ್ಟೇರಲಿದೆ. ನಾನಿ-ಶ್ರೀಕಾಂತ್ ಕಾಂಬಿನೇಷನ್‌ನಲ್ಲಿ ಮೂಡಿಬರಲಿರುವ ಈ ಸಿನಿಮಾದಲ್ಲಿ ಜಾನ್ವಿ ಕಪೂರ್ ನಾಯಕಿಯಾಗಿ ಫೈನಲ್ ಆಗಿದ್ದಾರೆ. ತಮ್ಮ ಪಾತ್ರವನ್ನು ಮೆಚ್ಚಿಕೊಂಡಿದ್ದರಿಂದ ಜಾಹ್ವನಿ ತಕ್ಷಣ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಚಿತ್ರತಂಡದಿಂದ ಇನ್ನೂ ಯಾವುದೇ ಅಧಿಕೃತ ಮಾಹಿತ ಹೊರಬಂದಿಲ್ಲ.
ಟಾಲಿವುಡ್ ಮಂದಿ ಮಾತ್ರ ತೆಲುಗಿನಲ್ಲಿ ನಾಯಕಿಯರ ಕೊರತೆಯಿರುವ ಸಮಯದಲ್ಲಿ ಜಾನ್ವಿ ಎಂಟ್ರಿ ಕೊಟ್ಟಿರುವುದು ಅವರಿಗೆ ವರದಾನವಾಗಿ ಪರಿಣಮಿಸುತ್ತಿದೆ ಎನ್ನುತ್ತಿದ್ದಾರೆ. (ಏಜೆನ್ಸೀಸ್)