

ಮುಂಬೈ: ಬಾಲಿವುಡ್ ನಟಿ ಜಾನ್ವಿ ಕಪೂರ್ (Janhvi Kapoor) ಅವರು ಸಿನಿಮಾ ಪ್ರಚಾರದ ಭಾಗವಾಗಿ ಇತ್ತೀಚೆಗೆ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ 'ಭಾರತ್ ಮಾತಾ ಕಿ ಜೈ' ಎಂದು ಹೇಳುವ ಮೂಲಕವಾಗಿ ಟ್ರೋಲ್ಗೆ ಒಳಗಾಗಿದ್ದರು. ಈ ಕುರಿತಾಗಿ ನಟಿ ಇದೀಗ ಸ್ಪಷ್ಟನೆ ನೀಡಿದ್ದಾರೆ.
ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ನಟಿಸಿರುವ ತಮ್ಮ ಮುಂಬರುವ ಚಿತ್ರ 'ಪರಮ್ ಸುಂದರಿ'ಯ ( Param Sundari ) ಪ್ರಚಾರಕ್ಕಾಗಿ ಜಾನ್ವಿ .. ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ದಹಿ ಹಂಡಿ ಮೆರವಣಿಗೆ ಪ್ರಾರಂಭವಾಗುತ್ತಿದ್ದಂತೆ ಜಾನ್ವಿ 'ಭಾರತ್ ಮಾತಾ ಕಿ ಜೈ' ಎಂದು ಜೋರಾಗಿ ಕೂಗಿದರು. ಜನ್ಮಾಷ್ಟಮಿಯಂದು ಯಾಕೆ ಈ ಘೋಷಣೆ ಕೂಗಿದ್ದಾರೆ? ಕೆಲವರು ಅವರನ್ನು ಅಪಹಾಸ್ಯ ಮಾಡುತ್ತಿದ್ದರು, ಅವರು ಜನ್ಮಾಷ್ಟಮಿಯನ್ನು ಸ್ವಾತಂತ್ರ್ಯ ದಿನಾಚರಣೆಯೊಂದಿಗೆ ಬೆರೆಸಿದ್ದಾರೆ ಎಂದು ತಮಾಷೆ ಮಾಡುತ್ತಾ ನೆಟ್ಟಿಗರು ಟ್ರೋಲ್ ಕೂಡಾ ಮಾಡಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಜಾನ್ವಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಗಳಲ್ಲಿ, ನಿಜವಾದ ವೀಡಿಯೊವನ್ನು ಹಂಚಿಕೊಂಡು ಈ ಕುರಿತಾಗಿ ಸ್ಪಷ್ಟನೆ ನೀಡಿದ್ದಾರೆ.
ಆ ಕಾರ್ಯಕ್ರಮದ ಸಂಪೂರ್ಣ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೊದಲ್ಲಿ, ದಹಿ ಹಂಡಿ ಮೆರವಣಿಗೆ ಪ್ರಾರಂಭವಾಗುತ್ತಿದ್ದಂತೆ ಮೊದಲು ಬಿಜೆಪಿ ಸಂಸದ ರಾಮ್ ಕದಮ್ ಭಾರತ್ ಮಾತಾ ಕಿ ಜೈ ಎಂದು ಹೇಳುವುದನ್ನು ಕಾಣಬಹುದು. ಜಾನ್ವಿ ಅವರ ನಂತರ ಅದನ್ನು ಪುನರಾವರ್ತಿಸುತ್ತಾರೆ. ಜಾನ್ವಿ 'ಭಾರತ್ ಮಾತಾ ಕಿ ಜೈ' ಎಂದು ಜೋರಾಗಿ ಕೂಗಿದರು....ನಾನು ಅವರ ನಂತರ ಘೋಷಣೆಯನ್ನು ಹೇಳದಿದ್ದರೆ, ಅದು ಸಮಸ್ಯೆಯಾಗುತ್ತಿತ್ತು, ಮತ್ತು ಈಗ ನಾನು ಅದನ್ನು ಹೇಳಿದ ನಂತರ, ವೀಡಿಯೊವನ್ನು ಕತ್ತರಿಸಿ ಅದನ್ನು ಮೀಮ್ ಮಾಡುತ್ತೀದ್ದಿರಾ?..ಜನ್ಮಾಷ್ಟಮಿಯಂದು ಮಾತ್ರವಲ್ಲ, ನಾನು ಪ್ರತಿ ದಿನವೂ ಭಾರತ್ ಮಾತಾ ಕಿ ಜೈ ಎಂದು ಹೇಳುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಜಾನ್ವಿ ಕಪೂರ್ ಅವರ 'ಪರಮ್ ಸುಂದರಿ' ಚಿತ್ರ ಶೀಘ್ರದಲ್ಲೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಜಾನ್ವಿ ಕಪೂರ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಜಾನ್ವಿ ಕಪೂರ್ ಅವರ ಈ ಚಿತ್ರ ಆಗಸ್ಟ್ 29 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಜಾನ್ವಿ ಅವರ ಈ ಚಿತ್ರವನ್ನು ತುಷಾರ್ ಜಲೋಟಾ ನಿರ್ದೇಶಿಸಿದ್ದಾರೆ.