ಶಿಖರ್ ಹೆಸರಿನ ಪೆಂಡೆಂಟ್ ಧರಿಸಿರುವ ಜಾಹ್ನವಿ! ಡೇಟಿಂಗ್ ಪಕ್ಕಾ?

janhvi
Published on

ನಟಿ ಜಾಹ್ನವಿ ಕಪೂರ್ ಸದ್ಯ ಜೂ. ಎನ್‌ಟಿಆರ್ ಜತೆ ‘ದೇವರ’ ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಟಾಲಿವುಡ್ ಡೆಬ್ಯೂ ಚಿತ್ರದ ರಿಲೀಸ್‌ಗೆ ಎದುರು ನೋಡುತ್ತಿರುವ ಜಾಹ್ನವಿ ಡೇಟಿಂಗ್ ವಿಷಯವಾಗಿ ಸುದ್ದಿಯಲ್ಲಿದ್ದಾರೆ. ಜಾಹ್ನವಿ ಕಪೂರ್ ಹಾಗೂ ಶಿಖರ್ ಪಹರಿಯಾ ಡೇಟ್ ಮಾಡುತ್ತಿದ್ದಾರೆ ಎಂಬ ಸುದ್ದಿ ಆಗಾ ಕೇಳಿಬರುತ್ತದೆ.

ಈ ಹಿಂದೆ ಕರಣ್ ಜೋಹರ್ ಕಾರ್ಯಕ್ರಮದಲ್ಲಿ ‘ೆನಿನ ಸ್ಪೀಡ್ ಡಯಲ್‌ನಲ್ಲಿ ಯಾರ ನಂಬರ್ ಇದೆ? ಎಂಬ ಪ್ರಶ್ನೆಗೆ ಜಾಹ್ನವಿ ಶಿಖರ್ ಹೆಸರು ಹೇಳಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಹಾಗೇ ಹಲವು ಬಾರಿ ಇಬ್ಬರೂ ಒಟ್ಟಿಗೆ ಪ್ರವಾಸಕ್ಕೆ ತೆರಳಿದ್ದ ೆಟೋಗಳು ವೈರಲ್ ಆಗಿದ್ದವು. ಆದರೆ, ಜಾಹ್ನವಿ ಮಾತ್ರ ಎಲ್ಲಿಯೂ ರಿಲೇಷನ್‌ಶಿಪ್ ವಿಷಯವನ್ನು ಹೇಳದೇ ಗುಟ್ಟಾಗಿ ಇಟ್ಟಿದ್ದರು. ಇವೆಲ್ಲದರ ನಡುವೆಯೇ ಇತ್ತೀಚೆಗೆ ಜಾಹ್ನವಿ ಕಪೂರ್ ಕುತ್ತಿಗೆಯಲ್ಲಿ ಶಿಖರ್ ಹೆಸರಿನ ಪೆಂಡೆಂಟ್ ಇರುವ ಸರವನ್ನು ಧರಿಸಿರುವ ೆಟೋ ಜಾಲತಾಣದಲ್ಲಿ ವೈರಲ್ ಆಗಿದ್ದು, ಇವರಿಬ್ಬರೂ ರಿಲೇಷನ್‌ಶಿಪ್‌ನಲ್ಲಿದ್ದಾರೆ ಎಂಬ ಸುದ್ದಿಗೆ ಬಲ ಸಿಕ್ಕಂತಾಗಿದೆ.

ಸದ್ಯ ಜಾಹ್ನವಿ ‘ಉಲಜ್’, ‘ಮಿಸ್ಟರ್ ಆೃಂಡ್ ಮಿಸಸ್ ಮಾಹಿ’ ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net