ಕೇಂದ್ರ ಬಜೆಟ್​ 2020: ರಾಷ್ಟ್ರದ ಎಲ್ಲ ಜಿಲ್ಲೆಗಳಿಗೂ 2024ರ ವೇಳೆಗೆ ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳ ವಿಸ್ತರಣೆ

Janaushadhi Kendra feb 01 2020
Published on

ಬೆಂಗಳೂರು: ಜನಪ್ರಿಯಗೊಂಡಿರುವ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳನ್ನು 2024ರ ವೇಳೆಗೆ ರಾಷ್ಟ್ರದ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸುವುದಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಹೇಳಿದ್ದಾರೆ.

ರಾಷ್ಟ್ರದಲ್ಲಿ ಈಗ 6 ಸಾವಿರ ಜನೌಷಧಿ ಕೇಂದ್ರಗಳು ಇವೆ. 2024ರ ವೇಳೆಗೆ ಈ ಕೇಂದ್ರಗಳನ್ನು ರಾಷ್ಟ್ರದ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು. ಕೇಂದ್ರಗಳಲ್ಲಿ ವಿವಿಧ ಬಗೆಯ 2 ಸಾವಿರ ಔಷಧಿಗಳು ಲಭ್ಯ ಇದೆ ಎಂದು ಅವರು ಬಜೆಟ್​ ಭಾಷಣದಲ್ಲಿ ತಿಳಿಸಿದರು.

ಕೇಂದ್ರಗಳಲ್ಲಿ ಗುಣಮಟ್ಟದ ಔಷಧಿಗಳು ಕೈಗೆಟುಕುವ ದರದಲ್ಲಿ ದೊರೆಯುತ್ತವೆ. ಹೀಗಾಗಿ ಈ ಕೇಂದ್ರಗಳು ಬಡವರಿಗೆ ಪ್ರಯೋಜನಕಾರಿಯಾಗಿವೆ ಎಂದು ಅವರು ಹೇಳಿದರು (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net