ಆರ್ ಎಂಎಂ ಮನೆಗಳ ಮೇಲೆ ಇಡಿ ದಾಳಿ ಖಂಡಿಸಿ ಜನಪರ ಹೋರಾಟ ಸಮಿತಿ ಪ್ರತಿಭಟನೆ

janapra horata samiti protest
ಜನಪರ ಹೋರಾಟ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ನರಸಿಂಹ, ಎಸ್.ಬಸವರಾಜ್, ಬಿ.ಆರ್.ಸಂತೋಷ್, ಕೆ.ವೈ.ರಾಮಚಂದ್ರ, ದಿವಾಕರ್, ಎನ್.ಶಾಮೀರ್‌ಖಾನ್ ಇದ್ದರು.
Published on

ಶಿವಮೊಗ್ಗ: ಡಿಸಿಸಿ ಬ್ಯಾಂಕ್ ಅಧ್ಯಕ ಮಂಜುನಾಥಗೌಡ ಅವರ ತೀರ್ಥಹಳ್ಳಿಯ ಬೆಟಮಕ್ಕಿ, ಹಣಗೆರೆ ಸಮೀಪದ ಕರುಕುಚ್ಚಿ ಮತ್ತು ಶಿವಮೊಗ್ಗ ಶರಾವತಿ ನಗರದ ಮನೆಗಳ ಮೇಲೆ ಇಡಿ(ಜಾರಿ ನಿರ್ದೇಶನಾಲಯ) ದಾಳಿ ಮಾಡಿರುವುದು ದುರುದ್ದೇಶಪೂರ್ವಕವಾಗಿದೆ ಎಂದು ಆರೋಪಿಸಿ ಜನಪರ ಹೋರಾಟ ಸಮಿತಿ ಪದಾಧಿಕಾರಿಗಳು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಆರ್.ಎಂ.ಮಂಜುನಾಥಗೌಡ ಅವರು 10 ಬಾರಿ ಡಿಸಿಸಿ ನಿರ್ದೇಶಕರಾಗಿ, ಆರು ಬಾರಿ ಅಧ್ಯಕ್ಷರಾಗಿದ್ದವರು. ಗೌಡರ ಏಳಿಗೆಯನ್ನು ಸಹಿಸದ ಕೆಲವರು ಇಡಿ ಮೂಲಕ ಅವರ ಮನೆಗಳ ಮೇಲೆ ದಾಳಿ ಮಾಡಿಸಿ ಬೆದರಿಸುವ ತಂತ್ರ ಅನುಸರಿಸುತ್ತಿದ್ದಾರೆ. ಈ ದಾಳಿ ರಾಜಕೀಯ ಪ್ರೇರಿತವಾಗಿದೆ ಎಂದು ದೂರಿದರು.
ಮಂಜುನಾಥಗೌಡರ ವರ್ಚಸ್ಸನ್ನು ಸಹಿಸದ ಬಿಜೆಪಿ ನಾಯಕರು ದುರುದ್ದೇಶದಿಂದ ಕೇಂದ್ರ ಸರ್ಕಾರದ ಮೂಲಕ ದಾಳಿ ಮಾಡಿಸಿರುವುದು ಅತ್ಯಂತ ಖಂಡನೀಯ. ಬಿಜೆಪಿ ನಾಯಕರು ಮಂಜುನಾಥಗೌಡರ ಮನೆಗಳ ಮೇಲೆ ದಾಳಿ ಮಾಡಿಸಿ ಅವರ ಹೆಸರಿಗೆ ಮಸಿ ಬಳಿಯುವ ಹುನ್ನಾರ ನಡೆಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಹಿಂದೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದ ಅವರನ್ನು ನಿರ್ದೇಶಕ ಸ್ಥಾನದಿಂದ ವಜಾಗೊಳಿಸಲಾಗಿತ್ತು. ಅವರು ನ್ಯಾಯಾಲಯದ ತೀರ್ಪಿನ ಪ್ರಕಾರ ಮತ್ತೆ ಅಧ್ಯಕ್ಷರಾಗಿದ್ದಾರೆ. ಈ ಹಿಂದೆ ಬ್ಯಾಂಕ್ ಅವ್ಯವಹಾರ ಪ್ರಕರಣದಲ್ಲಿ ಸಿಒಡಿ ತನಿಖೆಯಾಗಿತ್ತು. ಅದರಲ್ಲಿ ಗೌಡರಿಗೆ ಕ್ಲೀನ್ ಚೀಟ್ ನೀಡಲಾಗಿತ್ತು. ಅಷ್ಟಾದರೂ ಮತ್ತೆ ಇಡಿ ದಾಳಿ ನಡೆಸುವ ಮೂಲಕ ಅವರನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡಿದ್ದಾರೆ ಎಂದು ಕಿಡಿಕಾರಿದರು.
ಮೇಯರ್ ನಾಗರಾಜ್ ಕಂಕಾರಿ, ಮಾಜಿ ಉಪ ಮೇಯರ್ ಎಚ್.ಪಾಲಾಕ್ಷಿ, ಪಾಲಿಕೆ ಮಾಜಿ ಸದಸ್ಯರಾದ ಎಸ್‌ಎನ್‌ಮಹೇಶ್, ಎಂ.ರಾಜಣ್ಣ, ಬಿ.ಎನ್.ಅನಿಲ್ಕುಮಾರ್, ಎನ್.ಎಸ್.ಆನಂದ, ಎಸ್.ಕೆ.ಭಾಸ್ಕರ್, ಡಿ.ಶಾಮು, ಎಸ್.ಡಿ.ಪ್ರಸನ್ನಕುಮಾರ್, ನರಸಿಂಹ, ಎಸ್.ಬಸವರಾಜ್, ಬಿ.ಆರ್.ಸಂತೋಷ್, ಕೆ.ವೈ.ರಾಮಚಂದ್ರ, ದಿವಾಕರ್, ಎನ್.ಶಾಮೀರ್‌ಖಾನ್ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net