ಅಸಂಘಟಿತ ಕಾರ್ವಿುಕರಿಗೆ 10 ಸಾವಿರ ರೂ. ಕೊಡಿ: ಡಿಕೆಶಿ ಆಗ್ರಹ- ಜನರಿಗೆ ಜನಧನ ಹಣ ತಲುಪಿಸಿ

dk shivakumar
Published on

ಬೆಂಗಳೂರು: ನರೇಗಾ ಯೋಜನೆಯಡಿ 10 ಸಾವಿರ ಕೋಟಿ ರೂ. ಇದ್ದು, ಅದನ್ನು ಬಳಸಿ ಅಸಂಘಟಿತ ವಲಯದ ಪ್ರತಿ ಕಾರ್ವಿುಕರಿಗೆ ಕನಿಷ್ಠ 10 ಸಾವಿರ ರೂ. ಕೊಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಲಾಕ್​ಡೌನ್ ಬಳಿಕ ಪ್ರಧಾನಿ ಮೋದಿ ಹಲವು ಬಾರಿ ಮಾತನಾಡಿದ್ದನ್ನು ಗಮನಿಸಿದ್ದೇನೆ. ಆದರೆ, ಅಸಂಘಟಿತ ವಲಯದ ಬಗ್ಗೆ ತುಟಿಪಿಟಿಕ್ ಎಂದಿಲ್ಲ. ಸವಿತಾ ಸಮಾಜದವರು, ಹಮಾಲಿಗಳು, ರ್ದಜಿಗಳು, ಬಡಗಿ, ಕಮ್ಮಾರ, ಕುಂಬಾರ, ಮೀನುಗಾರ ಸಮಾಜದವರು, ಆಟೋ, ಕ್ಯಾಬ್, ಲಾರಿ ಚಾಲಕರು, ಕ್ಲೀನರ್​ಗಳು ಅನೇಕ ಕಾರ್ವಿುಕ ವಲಯ ಇದೆ. ಇಂತಹ ಸಣ್ಣ ಕಾರ್ವಿುಕರ ಬಗ್ಗೆ ಯಾರೂ ಮಾತನಾಡಿಲ್ಲ. ಇದು ಬಹಳ ನೋವು ತಂದಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನಿನ್ನ ನಂಬರ್ ಕೊಡಣ್ಣ: ಕೃಷಿ ಭೂಮಿ ಯಲ್ಲೇ ತರಕಾರಿ, ಹೂವು, ಹಣ್ಣು ನಾಶ ವಾಗುತ್ತಿದೆ. ಈವರೆಗೂ ಅಧಿಕಾರಿಗಳು ಸಮೀಕ್ಷೆ ಮಾಡಿಲ್ಲ. ಸಮಸ್ಯೆಗಳಿದ್ದರೆ ಸರ್ಕಾರದ ಗಮನಕ್ಕೆ ತನ್ನಿ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳುತ್ತಾರೆ. ‘ಅಣ್ಣಾ, ಬಿ.ಸಿ. ಪಾಟೀಲಣ್ಣ... ನಿನ್ನ ನಂಬರ್ ಕೊಡಣ್ಣ, ಯಾರು ಯಾರಿಗೆ ಗಮನಕ್ಕೆ ತರಬೇಕು’ ಎಂದು ಡಿಕೆಶಿ ಪ್ರಶ್ನಿಸಿದರು.

ಜೂನ್​ವರೆಗೂ ಶಾಲೆ ಕಾಲೇಜು ತೆರೆಯುವಂತಿಲ್ಲ, ಆನ್​ಲೈನ್​ನಲ್ಲೇ ಪಾಠ ಮಾಡಿ ಎಂದಿದ್ದಾರೆ ಶಿಕ್ಷಣ ಸಚಿವ ಸುರೇಶ್​ಕುಮಾರ್. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆನ್​ಲೈನ್ ಪಾಠ ಹೇಗೆ ತಲುಪಲು ಸಾಧ್ಯ? ಸರ್ಕಾರ ಅವರಿಗೆ ಲ್ಯಾಪ್​ಟಾಪ್, ಅಂತರ್ಜಾಲ ಸಂಪರ್ಕ ನೀಡಿದೆಯೇ? ಅದನ್ನು ಬಳಸಲು ತಿಳಿವಳಿಕೆ ಇದೆಯೇ?

| ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net