ಜಲಪಾತ ಟ್ರೇಲರ್ ಬಿಡುಗಡೆ; ರಮೇಶ್ ಬೇಗಾರ್ ನಿರ್ದೇಶನದ ಮಲೆನಾಡ ಕಥೆ

jalapata-1
Published on

ಬೆಂಗಳೂರು: ‘ವೈಶಂಪಾಯನ ತೀರ’ ಬಳಿಕ ರಮೇಶ್ ಬೇಗಾರ್ ಆ್ಯಕ್ಷನ್-ಕಟ್ ಹೇಳುತ್ತಿರುವ ಸಿನಿಮಾ ‘ಜಲಪಾತ’. ಚಿತ್ರಕ್ಕೆ ಭೂ ರಮೆಯ ಸ್ವಗತ ಎಂಬ ಅಡಿಬರಹವಿದ್ದು, ಪರಿಸರ ಕಾಳಜಿಯ ಕುರಿತ ಕಥೆಯಿದು. ಸಂಪೂರ್ಣವಾಗಿ ಮಲೆನಾಡ ಭಾಗದಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಅಲ್ಲಿನ ಭಾಷೆ ಮತ್ತು ಸಂಸ್ಕೃತಿಯ ಕುರಿತು ಬೆಳಕು ಚೆಲ್ಲಿದೆ.

ಚಿತ್ರಕ್ಕೆ ರಜನೀಶ್ ನಾಯಕ ಹಾಗೂ ನಾಗಶ್ರೀ ಬೇಗಾರ್ ನಾಯಕಿಯಾಗಿದ್ದಾರೆ. ಇತ್ತೀಚೆಗಷ್ಟೆ ಸಾಹಿತಿ, ಪತ್ರಕರ್ತರಾದ ಜೋಗಿ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದರು. ‘ನಿಜವಾದ ಸಿನಿಮಾ ಪ್ರೀತಿ ಕಂಟೆಂಟ್ ಆಧಾರಿತ ಚಿತ್ರಗಳನ್ನು ಮಾಡುವವರಲ್ಲಿ ಹೆಚ್ಚು ಆಪ್ತವಾಗಿರುತ್ತದೆ. ಇಂತಹ ಸಿನಿಮಾಗಳು ಹೃದಯ ಗೆಲ್ಲುತ್ತವೆ’ ಎಂದು ಹೇಳಿದರು ಜೋಗಿ. ಜತೆಗೆ ನಟ ಪೃಥ್ವಿ ಶಾಮನೂರು ಚಿತ್ರತಂಡಕ್ಕೆ ಶುಭಕೋರಿದರು. ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಿರುವ ಪ್ರಮೋದ್ ಶೆಟ್ಟಿ, ‘ಈ ತಂಡದ ಜತೆಗೆ ಇದು ನನ್ನ ಎರಡನೇ ಸಿನಿಮಾ’ ಎಂದು ಹೇಳಿಕೊಂಡರು. ಅಕ್ಟೋಬರ್ ಮೊದಲ ವಾರ ಚಿತ್ರ ಬಿಡುಗಡೆಗೊಳಿಸುವ ಆಲೋಚನೆ ಚಿತ್ರತಂಡದ್ದು.

ನಾಗಶ್ರೀ ಹಾಗೂ ರಜನೀಶ್ ಜತೆಗೆ ಅಭಿಷೇಕ್, ಕಾರ್ತಿಕ್, ರಶ್ಮಿ, ಯಶವಂತ್, ಚಿದಾನಂದ ಹೆಗ್ಗಾರ್, ಸುಧಾಕರ್ ಶೆಟ್ಟಿ ತಾರಾಬಳಗದಲ್ಲಿದ್ದಾರೆ. ಸಾದ್ವಿನಿ ಕೊಪ್ಪ ಸಂಗೀತ ಹಾಗೂ ಶಶೀರ ಛಾಯಾಗ್ರಹಣ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net