ಮಹೇಶ್​ಬಾಬು SSMB29 ಚಿತ್ರದ ಶೂಟ್​ಗೆ ಕೀನ್ಯಾಗೆ ಹೊರಟ ಜಕ್ಕಣ್ಣ | SSMB29

SSMB29
Published on

ಹೈದರಾಬಾದ್: RRR ಸಿನಿಮಾದ ಭಾರಿ ಯಶಸ್ಸಿನ ಬಳಿಕ ನಿರ್ದೇಶಕ ಎಸ್.ಎಸ್. ರಾಜಮೌಳಿ ಮಹೇಶ್​ ಬಾಬು ಅವರೊಂದಿಗೆ ಸಿನಿಮಾ( SSMB29)ಘೋಷಿಸಿದ್ದು, ಯೋಜನೆಗಳೊಂದಿಗೆ ಪ್ರಯಾಣವನ್ನು ಆರಂಭಿಸಿದ್ದಾರೆ.

ಈ ಚಿತ್ರಕ್ಕೆ SSMB29 ಎಂದು ತಾತ್ಕಾಲಿಕ ಶೀರ್ಷಿಕೆಯನ್ನು ಇಡಲಾಗಿದ್ದು, ಪ್ರೀ-ಪ್ರೊಡಕ್ಷನ್​ ಹಂತದಲ್ಲಿದೆ. ಸದ್ಯ ಶೂಟಿಂಗ್​ಗೆ ಸಂಬಂಧಿಸಿದಂತೆ ಚಿತ್ರತಂಡ ಕೀನ್ಯಾಗೆ ತೆರಳಿದ್ದು, ನಿರ್ದೇಶಕ ರಾಜಮೌಳಿ ಅವರ ಫೋಟೋ ಸಖತ್​ ವೈರಲ್​ ಆಗಿದೆ.

ಕೀನ್ಯಾದ ಅಂಬೋಸೆಲಿ ರಾಷ್ಟೀಯ ಉದ್ಯಾನವನದಲ್ಲಿ ರಾಜಮೌಳಿ ಟಿ-ಶರ್ಟ್​ ಹಾಗೂ ಪ್ಯಾಂಟ್​ ಧರಿಸಿ ವಾಕಿಂಗ್​​ ಮಾಡುತ್ತಿದ್ದು, ಜೀಬ್ರಾಗಳ ದಂಡಿನ ನಡುವೆ ನಿಂತು ಪೋಸ್​ ನೀಡಿದ್ದಾರೆ. ಇದಕ್ಕೆ ಟ್ರೊಟ್ಟಿಂಗ್​ ಟು ಡಿಸ್ಕವರ್ ಎಂದು ಅಡಿಬರಹವನ್ನು ನೀಡಿದ್ದಾರೆ.

ಸಿನಿಮಾ ವಿಚಾರಕ್ಕೆ ಬಾರುವುದಾದರೆ, ಜಪಾನ್​ನಲ್ಲಿ RRR ಸಿನಿಮಾದ ವಿಶೇಷ ಪ್ರದರ್ಶನಕ್ಕೆ ಹಾಜರಾಗಿದ್ದ ವೇಳೆ ಜಕ್ಕಣ್ಣ ತಮ್ಮ ಮುಂದಿನ ಸಿನಿಮಾದ ಕುರಿತು ಹೇಳಿದ್ದರು. 'ನಾನು ನನ್ನ ಮುಂದಿನ ಸಿನಿಮಾವನ್ನು ಆರಂಭಿಸಿದ್ದೇನೆ, ಜತೆಗೆ ಕಥೆ ಬರವಣಿಗೆ ಕೂಡ ಪೂರ್ಣಗೊಂಡಿದೆ. ನಮ್ಮ ಚಿತ್ರ ತಂಡ ಪ್ರಿ ಪ್ರೊಡಕ್ಷನ್​ ಹಂತದಲ್ಲಿದೆ. ಈ ಚಿತ್ರದ ನಾಯಕ ಯಾರು ಎಂಬುವುದು ನಿಮಗೆ ಗೊತ್ತಿದೆ. ಸಿನಿಮಾ ಅದಷ್ಟು ಸಾಧ್ಯವಾದಷ್ಟು ಬೇಗ ಮುಗಿಸಲು ಪ್ರಯತ್ನಿಸುವೆ, ಚಿತ್ರ ಬಿಡುಗಡೆ ವೇಳೆ ಆ ನಾಯಕ ನಟನನ್ನು ಇಲ್ಲಿಗೆ ಕರೆ ತರುತ್ತೇನೆ ಎಂದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net