

Masood Azhar: ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ, ಜೈಶ್-ಎ-ಮೊಹಮ್ಮದ್(Jaish-e-Mohammed) ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್(Masood Azhar), ಪಾಕ್ ಆಕ್ರಮಿತ ಕಾಶ್ಮೀರ(POK)ದ ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶದ ಬಹಾವಲ್ಪುರ್(Bahawalpur) ಭದ್ರಕೋಟೆಯಿಂದ 1,000 ಕಿ.ಮೀ ದೂರದಲ್ಲಿ ಕಾಣಿಸಿಕೊಂಡಿದ್ದಾನೆ ಎಂದು ಗುಪ್ತಚಾರ ವರದಿ ತಿಳಿಸಿವೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಉಗ್ರ ಅಜರ್, ಇತ್ತೀಚೆಗೆ ಸದ್ಪರಾ ಪ್ರದೇಶದ ಸುತ್ತಮುತ್ತ ಕಾಣಿಸಿಕೊಂಡಿದ್ದಾನೆ. ಈ ಪ್ರದೇಶವು ಕನಿಷ್ಠ ಎರಡು ಮಸೀದಿಗಳು, ಅಂಗಸಂಸ್ಥೆಗಳು, ಮದರಸಾಗಳು ಮತ್ತು ಹಲವಾರು ಖಾಸಗಿ ಮತ್ತು ಸರ್ಕಾರಿ ಅತಿಥಿ ಗೃಹಗಳನ್ನು ಹೊಂದಿದೆ.
ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ(Bilawal Bhutto Zardari) ಇತ್ತೀಚೆಗೆ ಅಜರ್ ಅಫ್ಘಾನಿಸ್ತಾನದಲ್ಲಿರಬಹುದು ಎಂದು ಹೇಳಿಕೆ ನೀಡಿದ ನಂತರ ಈ ಬಹಿರಂಗವಾಗಿದೆ. ಪಾಕಿಸ್ತಾನದ ನೆಲದಲ್ಲಿ ಅಜರ್ ಕಂಡುಬಂದರೆ ಇಸ್ಲಾಮಾಬಾದ್ ಅವರನ್ನು ಭಾರತಕ್ಕೆ ಹಸ್ತಾಂತರಿಸುತ್ತದೆ ಎಂದು ಅವರು ಸೂಚಿಸಿದ್ದರು.
"ಮಸೂದ್ ಅಜರ್ ಪಾಕಿಸ್ತಾನಿ ನೆಲದಲ್ಲಿದ್ದಾರೆ ಎಂಬ ಮಾಹಿತಿಯನ್ನು ಭಾರತ ಸರ್ಕಾರ ನಮ್ಮೊಂದಿಗೆ ಹಂಚಿಕೊಂಡರೆ, ನಾವು ಅವರನ್ನು ಬಂಧಿಸಲು ಸಂತೋಷಪಡುತ್ತೇವೆ" ಎಂದು ಭುಟ್ಟೋ ಇತ್ತೀಚಿನ ಸಂದರ್ಶನದಲ್ಲಿ ತಿಳಿಸಿದರು.
2016ರ ಪಠಾಣ್‌ಕೋಟ್ ವಾಯುನೆಲೆಯ ದಾಳಿ ಮತ್ತು 40ಕ್ಕೂ ಹೆಚ್ಚು ಸೈನಿಕರನ್ನು ಬಲಿತೆಗೆದುಕೊಂಡ 2019ರ ಪುಲ್ವಾಮಾ ದಾಳಿ ಸೇರಿದಂತೆ ಭಾರತದಲ್ಲಿ ಹಲವಾರು ಭಯೋತ್ಪಾದಕ ಚಟುವಟಿಕೆಗಳ ಮಾಸ್ಟರ್ ಮೈಂಡ್ ಅಜರ್ ಆಗಿದ್ದಾನೆ.(ಏಜೆನ್ಸೀಸ್)