ಜೈಲು ಸೇರಿದ ಶಾಸಕನ ಸುರಕ್ಷತೆಗಾಗಿ ರಾಷ್ಟ್ರಪತಿ ಮೊರೆ ಹೋದ ಪತ್ನಿ

MLA
Published on

ಬಲ್ಲಿಯಾ: ಜೈಲು ಸೇರಿರುವ ಬಿಎಸ್​ಪಿ ಶಾಸಕ ಮುಖ್ತರ್​ ಅನ್ಸಾರಿಯ ಪತ್ನಿ ರಾಷ್ಟ್ರಪತಿ ರಾಮನಾಥ ಕೋವಿಂದ್​ ಅವರಿಗೆ ಪತ್ರ ಬರೆದು, ತಮ್ಮ ಕುಟುಂಬಕ್ಕೆ ರಕ್ಷಣೆ ಒದಗಿಸುವಂತೆ ಮನವಿ ಮಾಡಿದ್ದಾರೆ.

ಈ ಮೊದಲು ಗ್ಯಾಂಗ್​ಸ್ಟರ್​ ಆಗಿದ್ದ ಮುಖ್ತಾರ್ ಅನ್ಸಾರಿ ನಂತರ ರಾಜಕಾರಣ ಪ್ರವೇಶಿಸಿ, ಬಿಎಸ್​ಪಿಯಿಂದ ಸ್ಪರ್ಧಿಸಿ ಗೆದ್ದು ಶಾಸಕರಾಗಿದ್ದರು. ಅದಾದ ಬಳಿಕವೂ ಸುಲಿಗೆ ಪ್ರಕರಣವೊಂದರಲ್ಲಿ ಪಂಜಾಬ್​​ನಲ್ಲಿ ಜೈಲು ಸೇರಿದ್ದಾರೆ. ಇನ್ನೂ ಹಲವು ಪ್ರಕರಣಗಳಲ್ಲಿ ಅನ್ಸಾರಿ ಆರೋಪಿಯಾಗಿದ್ದು, ಅವರನ್ನು ಉತ್ತರ ಪ್ರದೇಶಕ್ಕೆ ಕರೆತರಲು ಇಲ್ಲಿನ ಪೊಲೀಸರು ಪ್ರಯತ್ನ ಮಾಡುತ್ತಿದ್ದಾರೆ.

ಇದೀಗ ಅವರ ಪತ್ನಿ ಅಫ್ಶಾನ್​ ಅನ್ಸಾರಿ ರಾಷ್ಟ್ರಪತಿ ರಾಮನಾಥ್ ಕೋವಿಂದ್​ಗೆ ಪತ್ರ ಬರೆದಿದ್ದು, ತನ್ನ, ಪತಿ, ಪುತ್ರರ ಸುರಕ್ಷತೆಗೆ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದ್ದಾರೆ. ಹಾಗೇ ತನ್ನ ಪತಿಯನ್ನು ವಿಚಾರಣೆಗೆಂದು ಕೋರ್ಟ್​ಗೆ ಕರೆತರಬೇಡಿ. ವಿಡಿಯೋ ಕಾನ್ಫರೆನ್ಸ್​ ಮೂಲಕವೇ ಪ್ರಕ್ರಿಯೆ ನಡೆಸಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ಮುಖ್ತಾರ್ ಅನ್ಸಾರಿ ಸಹೋದರ, ಸಂಸದ ಅಫ್ಜಲ್ ಅನ್ಸಾರಿ ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net