ಕನ್ನಡದ ಕಾಮಿಡಿ ಎಂಟರ್ಟೈನರ್‌ ಜಗ್ಗೇಶ್‌ ನಟನೆಯ ʼತೋತಾಪುರಿ 2ʼರಿಲೀಸ್

jmixxx
Published on

ಜಗ್ಗೇಶ್​​ ಅವರ ಬಹುನಿರೀಕ್ಷಿತ ʼತೋತಾಪುರಿ 2ʼ ಸಿನಿಮಾ ನಿನ್ನೆ ರಿಲೀಸ್​​ ಆಗಿದೆ. ಸೆಪ್ಟೆಂಬರ್​​ 28 ರಂದು ಸಿನಿಮಾ ತೆರೆ ಕಂಡಿದ್ದು, ನಿರ್ದೇಶಕ ವಿಜಯಪ್ರಸಾದ್‌ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಸಿನಿಮಾ ಸುರೇಶ ಆರ್ಟ್ಸ್‌ ಹಾಗೂ ಮೋನ್‌ ಫ್ಲಿಕ್ಸ್‌ ಸ್ಟುಡಿಯೋಸ್‌ ಅಡಿಯಲ್ಲಿ ಈ ಸಿನಿಮಾ ರಿಲೀಸ್‌ ಆಗಿದೆ.
ತೋತಾಪುರಿ ಸಿನಿಮಾವನ್ನ ಒಂದೇ ಪಾರ್ಟ್ ನಲ್ಲಿ ತೋರಿಸಿ ಬಿಡಿ ಎಂದು ಜಗ್ಗೇಶ್ ಹೇಳಿದ್ದರು. ಆದರೆ ಎಷ್ಟೇ ಕಟ್ ಮಾಡಿದ್ರೂ ಚಿತ್ರದ ಅವಧಿ ಹೆಚ್ಚಾಗುತ್ತದೆ ಅಂತ ಅಂದೇ ಡೈರೆಕ್ಟರ್ ವಿಜಯ್ ಪ್ರಸಾದ್ ಅವರು ಜಗ್ಗೇಶ್ ಅವರಿಗೆ ಹೇಳಿದರು. ಆ ಪ್ರಕಾರ ತೋತಾಪುರಿ ಸಿನಿಮಾ ಸರಣಿ ಸಿನಿಮಾ ಆಗಿಯೇ ಬದಲಾಯಿತು.


ಮೊದಲ ಭಾಗದಲ್ಲಿ ಪಾತ್ರದಲ್ಲಿ ಕೇವಲ ಪಾತ್ರಗಳ ಪರಿಚಯ ಇದೆ. ಎರಡನೇ ಭಾಗದಲ್ಲಿ ಅಸಲಿ ಕಥೆ ಶುರು ಆಗುತ್ತದೆ.
ಅಂಧ ಆಚಾರ-ವಿಚಾರಗಳ ವಿರುದ್ಧ ನೇರವಾಗಿಯೇ ಹೇಳೋ ಕೆಲಸ ಈ ಒಂದು ಭಾಗದಲ್ಲಿ ಆಗಿದೆ.
ಮೊದಲ ಭಾಗದಲ್ಲಿದ್ದ ಪಾತ್ರಗಳೇ ಈ ಸಿನಿಮಾದಲ್ಲಿಯೂ ಮುಂದುವರಿದಿದ್ದು, ದತ್ತಣ್ಣ, ವೀಣಾ ಸುಂದರ್‌, ಹೇಮಾದತ್‌ ಹಾಗೂ ಸುಮನ್‌ ರಂಗನಾಥ್‌ ಅಭಿನಯಸಿದ್ದಾರೆ. ಸಿನಿಮಾ ತಂಡವು ಪ್ರೇಕ್ಷಕರಿಗೆ ಇಷ್ಟವಾಗುವ ನಿರೀಕ್ಷೆಯಲ್ಲಿದ್ದಾರೆ.
ಗ್ಗೇಶ್‌ ನಟನೆಯ ಸಿನಿಮಾಯೆಂದರೆ ಅದು ಹಾಸ್ಯದಿಂದಲೇ ಕೂಡಿರುತ್ತದೆ. ಹಾಗೇಯೇ ಈ ಸಿನಿಮಾದಲ್ಲಿಯೂ ಕೂಡ ಜಗ್ಗೇಶ್‌ ಕಾಮಿಡಿ ಹೈಲೆಟ್‌. ಚಿತ್ರದ ನಿರ್ಮಾಣವನ್ನ ಸುರೇಶ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net