ಶಾಸಕರ ಬರ್ತ್ ಡೇ ಕಾರ್ಯಕ್ರಮದಲ್ಲಿ ಕಳ್ಳರ ಕೈಚಳಕ! ಜೇಬು ಕತ್ತರಿಸಿ ಲಕ್ಷ ಹಣ ಎಗರಿಸಿದ ಖದೀಮರು

theft case
Published on

ದಾವಣಗೆರೆ: ಶಾಸಕರ ಬರ್ತ್ ಡೇ ಕಾರ್ಯಕ್ರಮದಲ್ಲಿ ಜನಸಂದಣಿಯನ್ನೇ ಬಂಡವಾಳ ಮಾಡಿಕೊಂಡ ಖದೀಮರು ಇಬ್ಬರ ಜೇಬು ಕತ್ತರಿಸಿ ಒಂದು ಲಕ್ಷ ರೂ. ಎಗರಿಸಿದ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ಸಂಭವಿಸಿದೆ.

ಜಗಳೂರ ಶಾಸಕ ಎಸ್.ವಿ. ರಾಮಚಂದ್ರಪ್ಪ ಅವರ ಜನ್ಮದಿನದ ಪ್ರಯುಕ್ತ ಬುಧವಾರ ನಗರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಶಾಸಕರಿಗೆ ಶುಭಕೋರಿ ಫೋಟೋ ತೆಗೆಸಿಕೊಳ್ಳುವ ನೆಪದಲ್ಲಿ ವೇದಿಕೆ ಏರಿದ ಖತರ್ನಾಕ್ ಕಳ್ಳರು, ಶಾಸಕರ ಆಪ್ತ ಸಹಾಯಕ ಸಂತೋಷ ಮತ್ತು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಶಾಲಾಕ್ಷಿ ಅವರ ಪತಿ ಓಬಳೇಶ್ ಜೇಬಿಗೆ ಕತ್ತರಿ ಹಾಕಿದ್ದಾರೆ.

ವೈಟ್ ಆ್ಯಂಡ್ ವೈಟ್ ಬಟ್ಟೆ ಹಾಕಿಕೊಂಡು ಪಕ್ಕಾ ಕಾರ್ಯಕರ್ತರಂತೆ ಬಂದಿದ್ದ ಕಳ್ಳರು, ಸಂತೋಷ್​ರ ಜೇಬಿನಿಂದ 50 ಸಾವಿರ ರೂ., ಓಬಳೇಶ್​ರ ಜೇಬಿನಿಂದ 50 ಸಾವಿರ ರೂ. ಕಳ್ಳತನ ಮಾಡಿ ಎಸ್ಕೇಪ್​ ಆಗಿದ್ದಾರೆ. ಕಳ್ಳರ ಕೃತ್ಯ ಕಾರ್ಯಕ್ರಮದ ಸ್ಟೇಜ್ ಕ್ಯಾಮರಾದಲ್ಲಿ ಸೆರೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net