

ಆಂಧ್ರಪ್ರದೇಶ: ತೆಲುಗು ಚಿತ್ರರಂಗದ ಮೆಗಾ ಸ್ಟಾರ್ ಚಿರಂಜೀವಿ ನಟನೆಯ 'ಜಗದೇಕ ವೀರುಡು ಅತಿಲೋಕ ಸುಂದರಿ' ಚಿತ್ರ 1990 ರಲ್ಲಿ ಬಿಡುಗಡೆಗೊಂಡಿತ್ತು. ಈ ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿ, ದಾಖಲೆಯನ್ನು ನಿರ್ಮಿಸಿತ್ತು. ಇದೀಗ ಈ ಚಿತ್ರವನ್ನು ಮೆಗಾ ಸ್ಟಾರ್ ಅವರ ಅಭಿಮಾನಿಗಳಿಗಾಗಿ ಮತ್ತೊಮ್ಮೆ ತೆರೆಯ ಮೇಲೆ ತರಲು ಚಿತ್ರತಂಡ ಸಜ್ಜಾಗಿದೆ.
'ಜಗದೇಕ ವೀರುಡು ಅತಿಲೋಕ ಸುಂದರಿ' ಒಂದು ಕ್ಲಾಸಿಕಲ್ ಬ್ಲಾಕ್ಬಸ್ಟರ್ ಹಿಟ್ ಚಿತ್ರವಾಗಿದ್ದು, ಈ ಸಿನಿಮಾ ಮರು ಬಿಡುಗಡೆಗೊಳ್ಳುತ್ತಿರುವ ಸುದ್ದಿ ಇದೀಗ ಚಿರಂಜೀವಿ ಅವರ ಅಭಿಮಾನಿಗಳಿಗೆ ಸಾಕಷ್ಟು ಸಂತಸ ಮೂಡಿಸಿದೆ. ಸಿನಿಮಾ 1990 ರಲ್ಲಿ ರಿಲೀಸ್ ಆದ್ದ ಕಾರಣ, 4K ರೀಮಾಸ್ಟರಿಂಗ್ ಕೆಲಸಗಳು ಈಗ ನಡೆಯುತ್ತಿದ್ದು, ಶೀಘ್ರದಲ್ಲೇ ಚಿತ್ರವನ್ನು ಅದ್ಧೂರಿಯಾಗಿ ರಿ-ರಿಲೀಸ್ ಮಾಡಲು ನಿರ್ಮಾಪಕರು ಮತ್ತು ವೈಜಯಂತಿ ಮೂವೀಸ್ ತಂಡ ಶ್ರಮಿಸುತ್ತಿದೆ.
ಸದ್ಯ ಸಿನಿಮಾದ ಮರು ಬಿಡುಗಡೆ ಖಚಿತವಾದರೂ, ಯಾವ ದಿನಾಂಕದಂದು ರಿಲೀಸ್ ಆಗಲಿದೆ ಎಂಬುದರ ಕುರಿತು ಇಲ್ಲಿಯವರೆಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಶೀಘ್ರದಲ್ಲೇ ಜಾಲತಾಣಗಳಲ್ಲಿ ಈ ಬಗ್ಗೆ ಅಧಿಕೃತ ಪ್ರಕಟಣೆಯನ್ನು ಚಿತ್ರತಂಡ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.
ಇನ್ನು ಮೆಗಾಸ್ಟಾರ್ ಚಿರಂಜೀವಿ ತಮ್ಮ ಹುಟ್ಟುಹಬ್ಬವನ್ನು ಆಗಸ್ಟ್ 22 ರಂದು ಆಚರಿಸಿಕೊಳ್ಳಲಿದ್ದಾರೆ ಎಂಬುದು ಫ್ಯಾನ್ಸ್ಗೆ ತಿಳಿದಿರುವ ಸಂಗತಿ. ಹಾಗಾಗಿ 'ಜಗದೇಕ ವೀರುಡು ಅತಿಲೋಕ ಸುಂದರಿ' ಚಿತ್ರವನ್ನು ಅವರ ಜನ್ಮದಿನದಂದೇ ಬಿಡುಗಡೆಗೊಳಿಸಲಿದ್ದಾರೆ ಎಂದು ಊಹಿಸಲಾಗಿದೆ,(ಏಜೆನ್ಸೀಸ್).