Commonwealth Games: ಪಾಕಿಸ್ತಾನ ಬಾಕ್ಸರ್​ ವಿರುದ್ಧದ ವಿಜಯವನ್ನು ಕಾರ್ಗಿಲ್​ ಯೋಧರಿಗೆ ಅರ್ಪಿಸಿದ ಜಾದುಮಣಿ

Commonwealth Games: ಪಾಕಿಸ್ತಾನ ಬಾಕ್ಸರ್​ ವಿರುದ್ಧದ ವಿಜಯವನ್ನು ಕಾರ್ಗಿಲ್​ ಯೋಧರಿಗೆ ಅರ್ಪಿಸಿದ ಜಾದುಮಣಿ
Commonwealth Games: ಪಾಕಿಸ್ತಾನ ಬಾಕ್ಸರ್​ ವಿರುದ್ಧದ ವಿಜಯವನ್ನು ಕಾರ್ಗಿಲ್​ ಯೋಧರಿಗೆ ಅರ್ಪಿಸಿದ ಜಾದುಮಣಿ
Published on
ಗ್ಲಾಸ್ಗೋ: ಭಾರತದ ಬಾಕ್ಸರ್​ ಜಾದುಮಣಿ ಸಿಂಗ್ (Jadumani Singh) ಕಾಮನ್ವೆಲ್ತ್ ಗೇಮ್ಸ್​ನಲ್ಲಿ​ (Commonwealth Games) ಭಾನುವಾರ ತಡರಾತ್ರಿ ನಡೆದ ಪುರುಷರ 55 ಕೆಜಿ ವಿಭಾಗದ ಪ್ರಿ ಕ್ವಾರ್ಟರ್​ಫೈನಲ್​ನಲ್ಲಿ ಪಾಕಿಸ್ತಾನದ ಸುಮಮ ರೆಹಮಾನ್​ ಎದುರು 5-0 ಅಂತರದಿಂದ ಏಕಪಕ್ಷೀಯ ಗೆಲುವು ದಾಖಲಿಸಿದರು. ಕಾರ್ಗಿಲ್​ ವಿಜಯ ದಿವಸದಂದು (Kargil Vijay Diwas) ಬಂದ ಈ ಗೆಲುವನ್ನು ಅವರು ಕಾರ್ಗಿಲ್​ ವೀರರಿಗೆ ಅರ್ಪಿಸುವುದಾಗಿ ಹೇಳಿದರು.

ಮಣಿಪುರದ 22 ವರ್ಷದ ಜಾದುಮಣಿ, "ಪಾಕ್​ ಬಾಕ್ಸರ್​ ವಿರುದ್ಧ ಬಂದಿರುವ ಈ ಗೆಲುವು ಶ್ರೇಷ್ಠವಾದುದು' ಎಂದರು. ಅವರು ಕ್ವಾರ್ಟರ್​ಫೈನಲ್​ ಪಂದ್ಯವನ್ನು ಗೆದ್ದರೆ ಪದಕ ಖಚಿತಪಡಿಸಿಕೊಳ್ಳುವ ಅವಕಾಶ ಹೊಂದಿದ್ದಾರೆ. ಭಾನುವಾರ 65 ಕೆಜಿ ವಿಭಾಗದ 16ರ ಟ್ಟದಲ್ಲಿ ಸ್ಪರ್ಧಿಸಿದ ಭಾರತದ ಮತ್ತೋರ್ವ ಬಾಕ್ಸರ್​ ಆದಿತ್ಯ ಪ್ರತಾಪ್​ ಸಿಂಗ್​ ಉಗಾಂಡದ ಬ್ಯಾಟ್ಟೆ ಎದುರು 2&3ರಿಂದ ಪರಾಭವಗೊಂಡು ಹೊರಬಿದ್ದರು.
ಬಾಕ್ಸಿಂಗ್​ 8ರ ಘಟ್ಟಕ್ಕೆ ಸಚಿನ್​, ಅಂಕುಶ್​
ಮಾಜಿ ವಿಶ್ವ ಯೂತ್​ ಚಾಂಪಿಯನ್​ ಸಚಿನ್​ ಸಿವಾಚ್​ ಮತ್ತು ಯುವ ಬಾಕ್ಸರ್​ ಅಂಕುಶ್​ ಬಾಕ್ಸಿಂಗ್​ ಸ್ಪರ್ಧೆಯಲ್ಲಿ ಕ್ರಮವಾಗಿ ಪುರುಷರ 60 ಮತ್ತು 80 ವಿಭಾಗದಲ್ಲಿ ಕ್ವಾರ್ಟರ್​ಫೈನಲ್​ ಪ್ರವೇಶಿಸಿದ್ದಾರೆ. 26 ವರ್ಷದ ಸಚಿನ್​ ಸೋಮವಾರ ನಡೆದ 16ರ ಘಟ್ಟದ ಪಂದ್ಯದಲ್ಲಿ ಇಂಗ್ಲೆಂಡ್​ನ ವಿಲಿಯಮ್​ ಹೆವಿಟ್​ ವಿರುದ್ಧ 4-1ರಿಂದ ಗೆಲುವು ದಾಖಲಿಸಿದರು. ಐವರು ತೀರ್ಪುಗಾರರಲ್ಲಿ ನಾಲ್ವರು ಸಚಿನ್​ ಪರವಾಗಿ ತೀರ್ಪು ನೀಡಿದರು. ಸಚಿನ್​ 8ರ ಘಟ್ಟದಲ್ಲಿ ಬೋತ್ಸವಾನದ ಟ್ರೆಷರ್​ ಮೊರೆಮಿ ವಿರುದ್ಧ ಸೆಣಸಲಿದ್ದಾರೆ. ಹರಿಯಾಣದ 20 ವರ್ಷದ ಅಂಕುಶ್​ 16ರ ಘಟ್ಟದಲ್ಲಿ ಆಂಟಿಗಾದ ಜಾನ್​ ಜಲಾನ್​ ವಿರುದ್ಧ 5&0 ಅಂತರದಿಂದ ಏಕಪಕ್ಷೀಯ ಗೆಲುವು ಸಾಧಿಸಿದರು. ಇವರಿಬ್ಬರು ಈಗ ಪದಕ ಖಚಿತಪಡಿಸಿಕೊಳ್ಳುವುದರಿಂದ ಕೇವಲ ಒಂದು ಗೆಲುವು ದೂರದಲ್ಲಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net