

ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಜೈಲು ಸೇರಿರುವ ಸುಕೇಶ್ ಚಂದ್ರಶೇಖರ್ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಹುಟ್ಟುಹಬ್ಬದ ಸಂದರ್ಭದಲ್ಲಿ ವಿಶೇಷ ಉಡುಗೊರೆಯನ್ನು ಕಳುಹಿಸುವುದಾಗಿ ಬಹಿರಂಗಪಡಿಸಿ ನಟಿಯನ್ನು ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿಸುತ್ತಿದ್ದಾರೆ.
ಸುಕೇಶ್ ಚಂದ್ರಶೇಖರ್ ಮತ್ತೊಮ್ಮೆ ಜೈಲಿನಿಂದಲೇ ಜಾಕ್ವೆಲಿನ್‌ಗೆ ಪತ್ರ ಬರೆದಿದ್ದಾರೆ. ಜಾಕ್ವೆಲಿನ್‌ಗೆ ಹುಟ್ಟುಹಬ್ಬದ ಉಡುಗೊರೆಯಾಗಿ ದುಬಾರಿ ಹಡಗನ್ನು ಕಳುಹಿಸುವುದಾಗಿ ಹೇಳಿ ಸಂಚಲನ ಮೂಡಿಸಿರುವ ಪತ್ರವೊಂದನ್ನು ಬಿಡುಗಡೆ ಮಾಡಿದ್ದಾರೆ.
200 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಸೇರಿರುವ ಸುಕೇಶ್ ಆಗಾಗ ಜಾಕ್ವೆಲಿನ್ ಗೆ ಪತ್ರ ಬರೆಯುತ್ತಾರೆ. ಈ ಹಿಂದೆ ಸುಕೇಶ್ ನೀಡಿದ ಉಡುಗೊರೆಗಳಿಂದ ಜಾಕ್ವೆಲಿನ್ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದರು. ಆಕೆಯೂ ಇಡಿ ವಿಚಾರಣೆಗೆ ಹಾಜರಾಗಬೇಕಿತ್ತು. ಈ ಬರ್ತಡೆಗೆ ನಟಿಗೆ ಸುಕೇಶ್ ಕಡೆಯಿಂದ 'ಲೇಡಿ ಜಾಕ್ವೆಲಿನ್' ಹೆಸರಿನ ದುಬಾರಿ ವಿಹಾರ ನೌಕೆಯನ್ನು ಉಡುಗೊರೆಯಾಗಿ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಹಡಗಿಗೆ ಲೇಡಿ ಜಾಕ್ವೆಲಿನ್ ಎಂದು ನಾಮಕರಣ ಮಾಡಲಾಗಿದೆ ಅಂತೆ.
2021 ರಲ್ಲಿ, ಜಾಕ್ವೆಲಿನ್ ತನ್ನ ಆಯ್ಕೆಯ ಐಷಾರಾಮಿ ವಿಹಾರ ನೌಕೆಯನ್ನು ಉಡುಗೊರೆಯಾಗಿ ನೀಡುವುದಾಗಿ ಹೇಳಿದ್ದೇನು. ಆದರೆ, ಈ ತಿಂಗಳು ನೌಕೆ ಬರಲಿದ್ದು, ಈಗಾಗಲೇ ಎಲ್ಲ ತೆರಿಗೆ ಪಾವತಿಸಲಾಗಿದೆ. ಬೆಂಗಳೂರಿನಲ್ಲಿ ಜಾಕ್ವೆಲಿನ್‌ಗೆ ಉಡುಗೊರೆಯಾಗಿ ನೀಡಿದ ಪಿಇಟಿ ಆಸ್ಪತ್ರೆ ಈ ವರ್ಷ ಪೂರ್ಣಗೊಳ್ಳುತ್ತಿದೆ. ವಯನಾಡ್ ಭೂಕುಸಿತ ದುರಂತದ ಸಂತ್ರಸ್ತರ ಕುಟುಂಬಗಳಿಗೆ ರೂ 15 ಕೋಟಿ ಮತ್ತು 300 ಮನೆಗಳನ್ನು ದೇಣಿಗೆ ನೀಡಲಾಗುತ್ತದೆ. ಜಾಕ್ವೆಲಿನ್ ಕಾಣಿಸಿಕೊಂಡಿರುವ 'ಯಿಮ್ಮಿ ಯಿಮ್ಮಿ' ಹಾಡನ್ನು ಸೂಪರ್ ಹಿಟ್ ಮಾಡಿದವರಿಗೆ 100 iPhone 15 Pro ಅನ್ನು ಘೋಷಿಸಿದ್ದಾರೆ. ಸುಕೇಶ್ ಅವರ ಇತ್ತೀಚಿನ ಉಡುಗೊರೆಗೆ ಜಾಕ್ವೆಲಿನ್ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡೋಣ.