ಜಾಕ್‌ಲೀನ್ ಎಐ ಅವತಾರ : ವೈಯಕ್ತಿಕ ಮಾಹಿತಿ ಹಂಚಿಕೊಳ್ಳಲು ‘ಜಾಕೀಸ್ ಕಾರ್ನರ್’ ವೇದಿಕೆ ಆರಂಭಿಸಿದ ನಟಿ

ಜಾಕಲೀನ್ ಫರ್ನಾಂಡೀಸ್​
ಜಾಕಲೀನ್ ಫರ್ನಾಂಡೀಸ್​
Published on

ಪ್ರಮುಖ ಮುಖ್ಯಾಂಶಗಳು

  • ಕಾಲಕ್ಕೆ ತಕ್ಕಂತೆ ಹೆಜ್ಜೆ ಹಾಕಿದ ನಟಿ ಜಾಕ್​ ಲೀನ್
  • ಎಐ ವೇದಿಕೆ ಆರಂಭಿಸಿದ ಮೊದಲ ಬಾಲಿವುಡ್ ನಟಿ
  • ಎಐ ಜಾಕೀಸ್ ಕಾರ್ನರ್ ನಲ್ಲಿ ನಟಿಯ ಇಷ್ಟ-ಕಷ್ಟಗಳ ಮಗ್ಗೆ ಮಾಹಿತಿ ಸಿಗಲಿದೆ
ಸಿನಿಮಾ ಸೇರಿ ಎಲ್ಲ ಕ್ಷೇತ್ರಗಳಲ್ಲೂ ಕೃತಕ ಬುದ್ಧಿಮತ್ತೆ (ಎಐ) ತನ್ನ ಪ್ರಾಬಲ್ಯ ಸಾಧಿಸುತ್ತಿದೆ. ಈ ಹಿಂದೆ ಸಿನಿಮಾಗಳಲ್ಲಿ ಕೇವಲ ಒಂದು ದೃಶ್ಯ, ಧ್ವನಿ ಅಳವಡಿಕೆಗೆ ಮಾತ್ರ ಎಐ ಬಳಕೆಯಾಗುತ್ತಿತ್ತು. ಆದರೆ, ಇದೀಗ ಇಡೀ ಚಿತ್ರವೇ ಎಐ ಮೂಲಕ ತಯಾರಾಗುತ್ತಿದೆ. ಹೀಗಿರುವಾಗ, ಸಿನಿಮಾ ನಟ-ನಟಿಯರು ಕಾಲಕ್ಕೆ ತಕ್ಕಂತೆ ಅಪ್‌ಡೇಟ್ ಆಗುತ್ತಿದ್ದು, ಇದೀಗ ತಮ್ಮ ವೈಯಕ್ತಿಕ ಮಾಹಿತಿ ಹಾಗೂ ಪ್ರಚಾರಕ್ಕಾಗಿ ಎಐ ಆಧಾರಿತ ವೇದಿಕೆಗಳನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ. ಇಂತಹ ಆಧುನಿಕ ತಂತ್ರಜ್ಞಾನದ ಮೊದಲ ಪ್ರಯತ್ನಕ್ಕೆ ಮುಂದಾದವರು ನಟಿ ಜಾಕ್‌ಲೀನ್ ರ್ನಾಂಡಿಸ್. ಹೌದು, ವೈಯಕ್ತಿಕ ಮತ್ತು ದೈನಂದಿನ ವಿಚಾರಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳಲು ನಟಿ ‘ಜಾಕೀಸ್ ಕಾರ್ನರ್’ ಎಐ ವೇದಿಕೆ ಆರಂಭಿಸಿದ್ದಾರೆ. ಅದರಲ್ಲಿ ತಮಗೆ ಸಂಬಂಧಿಸಿದ ವಿಚಾರಗಳು, ಆಸಕ್ತಿ, ಓದುವ ಪುಸ್ತಕ, ಇಷ್ಟವಾದ ಆಹಾರ ಹೀಗೆ ಎಲ್ಲ ಮಾಹಿತಿ ನೀಡಲಿದ್ದಾರೆ. ‘ಕೆಲ ದಿನಗಳಿಂದ ಎಐ ಮೂಲಕ ಇಂತಹ ವೇದಿಕೆ ಆರಂಭಿಸಲು ಬಯಸುತ್ತಿದ್ದೆ. ಇದೀಗ ಅದು ಸಾಧ್ಯವಾಗಿದೆ. ‘ಜಾಕೀಸ್ ಕಾರ್ನರ್’ ನಾನು ಇಷ್ಟಪಡುವ ವಿಚಾರಗಳು, ಯೋಚಿಸುವ ಸಂಗತಿಗಳು, ಸೇರಿ ಹಲವು ವಿಷಯಗಳನ್ನು ಹಂಚಿಕೊಳ್ಳುತ್ತೇನೆ. ಯಾವುದೇ ಅಜೆಂಡಾ, ವೈಯಕ್ತಿಕ ಹಿತಾಸಕ್ತಿ ಇಲ್ಲ. ಸದಾ ನಾನು ನನ್ನ ಅಭಿಮಾನಿಗಳೊಂದಿಗೆ ಇರಲು ಈ ವೇದಿಕೆ ಅನುಕೂಲವಾಗುತ್ತದೆ’ ಎಂದು ಜಾಕ್‌ಲೀನ್ ಖುಷಿ ಹಂಚಿಕೊಂಡಿದ್ದಾರೆ. ಸದ್ಯ ಅವರು ಹಿಂದಿಯ ಹಾರರ್ ಚಿತ್ರಕ್ಕಾಗಿ ಸಿದ್ಧತೆ ನಡೆಸುತ್ತಿದ್ದಾರೆ. -ಏಜೆನ್ಸೀಸ್.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net