

ರಿಪ್ಪನ್‌ಪೇಟೆ:‘ಮುಳುಗಡೆ ಸಂತ್ರಸ್ತರಾಗಿ ಇಲ್ಲಿಗೆ ಬಂದು ಹುಲ್ಲಿನ ಗುಡಿಸಲು ಕಟ್ಟಿಕೊಂಡು ವಾಸಮಾಡಿದ್ದೇವೆ. ಆಗ ಕರೆಂಟ್ ಇರಲಿಲ್ಲ. ಚಿಮಣಿ ಬುಡ್ಡಿಗಳೇ ನಮಗೆ ಬೆಳಕಿನ ಆಸರೆ. ಅರಿವಿಗೆ ಬಾರದೆ ಬುಡ್ಡಿಯಿಂದ ಮನೆಗೆ ಬೆಂಕಿ ತಗುಲಿ ಅನೇಕ ಗುಡಿಸಲುಗಳು ಸುಟ್ಟು ಹೋಗಿವೆ. ಜೀವ ಉಳಿಸಿಕೊಳ್ಳಲು ಉಟ್ಟಬಟ್ಟೆಯಲ್ಲೇ ಮನೆಯಿಂದ ಹೊರಗೋಡಿಬಂದು ಬದುಕಿದ್ದೇವೆ’
ಇದು ಬೆಳ್ಳೂರು ಗ್ರಾಮ ಪಂಚಾಯಿತಿ ಬುಕ್ಕಿವರೆ ಗ್ರಾಮದಲ್ಲಿ ಆಯೋಜಿಸಿದ್ದ ಸಮಾಲೋಚನಾ ಸಭೆಯಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಎದುರು ಮುಳುಗಡೆ ಸಂತ್ರಸ್ತರು ಮತ್ತು ಬಗರ್‌ಹುಕುಂ ರೈತರು ಬಿಚ್ಚಿಟ್ಟ ಬದುಕಿನ ಕಹಿ ಘಟನೆಗಳು.
ಅದೆಷ್ಟೋ ದಿನ ಗೆಡ್ಡೆ ಗೆಣಸು ತಿಂದು ಬದುಕಿದ್ದೇವೆ. ಅಂತಹ ಪರಿಸ್ಥಿತಿಯಲ್ಲಿ ಜೀವ ಉಳಿಸಿಕೊಂಡಿದ್ದೇ ಹೆಚ್ಚು. ನಿಮಗೆಲ್ಲಿಂದ 75 ವರ್ಷಗಳ ದಾಖಲಾತಿ ನೀಡಬೇಕು ಎಂದು ಅರಣ್ಯಾಧಿಕಾರಿಗಳನ್ನು ಪ್ರಶ್ನಿಸಿದರು.
ಸಭೆಯಲ್ಲಿ ಮುಳುಗಡೆ ಸಂತ್ರಸ್ತರ ಗೋಳು ಮಾರ್ದನಿಸಿತು. ಶರಾವತಿ ಮುಳುಗಡೆ ಸಂತ್ರಸ್ತರು ತಮ್ಮ ಬದುಕನ್ನು ಕಳೆದುಕೊಂಡು ಇಲ್ಲಿಗೆ ಬಂದಿದ್ದಾರೆ. ಆದರೆ ಇಂದಿಗೂ ನೆಮ್ಮದಿ ಕಾಣಲು ಸಾಧ್ಯವಾಗಿಲ್ಲ. ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿ ಪ್ರತಿದಿನ ಒಕ್ಕಲೆಬ್ಬಿಸುವ ಆತಂಕದಲ್ಲಿಯೇ ಬದುಕುತ್ತಿದ್ದೇವೆ. ರಾಜಕಾರಣಿಗಳ ಭರವಸೆಯ ಮಾತುಗಳು ಅಪಥ್ಯವಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಸಂತ್ರಸ್ತರ ರಕ್ಷಣೆಗಾಗಿ ಅರಣ್ಯ, ಕಂದಾಯ, ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ ನಡೆಸಿದ್ದು, ಸುಪ್ರೀಂ ಕೋರ್ಟಿನಲ್ಲಿ ಸಮರ್ಥವಾಗಿ ವಾದ ಮಂಡಿಸಲು ವಿಶೇಷ ವಕೀಲರನ್ನು ನೇಮಿಸಲಾಗಿದೆ. ಅಧಿಕಾರಿಗಳೆಗೇ ಯಾವುದೇ ಕಾರಣಕ್ಕೆ ಈಗಿರುವ ಜಾಗದಲ್ಲಿ ವಾಸಿಸಲು ಜನರಿಗೆ ತೊಂದರೆ ನೀಡಬೇಡಿ. ಅಂತಹ ಅಚಾತುರ್ಯಗಳು ನಡೆದರೆ ಸುಮ್ಮನಿರಲು ಸಾಧ್ಯವಿಲ್ಲವೆಂದು ಎಂದರು.
ಸಭೆಯಲ್ಲಿ ಎಸಿಎ್ ಸುರೇಶ್, ಆರ್‌ಎ್ಒ ಪವನ್‌ಕುಮಾರ್, ಮುಖಂಡರಾದ ಕಲಗೋಡು ರತ್ನಾಕರ, ಬಂಡಿ ರಾಮಚಂದ್ರ, ದೇವೇಂದ್ರಗೌಡ, ಉಮಾಕರ, ರವಿ ಮಸ್ಕಾನಿ, ಷಣ್ಮುಖ, ರಾಜೇಶ, ಆರ್‌ಐ ಅ್ರೋಜ್ ಖಾನ್, ಪಿಎಸ್‌ಐ ಪ್ರವೀಣ್, ಇತರರಿದ್ದರು.