

ಕರ್ನಾಟಕ ವಿಧಾನ ಪರಿಷತ್ ಚುನಾವಣೆ ಎನ್ಡಿಎಗೆ ಭರ್ಜರಿ ಜಯ.
ಇಟ್ಸ್ ಡನ್ ಬ್ರೋ ಎಂದು ಸಿಎಂ ಡಿಕೆ ಶಿವಕುಮಾರ್ ವಿರುದ್ಧ ಬಿಜೆಪಿ ವ್ಯಂಗ್ಯ.
ಸಿಎಂ ಡಿಕೆ ಶಿವಕುಮಾರ್ ಅವರು ಕಿವಿಗೆ ಹೂ ಮುಡಿದ ಫೋಟೋ ಹಂಚಿಕೊಂಡು ಲೇವಡಿ.
ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ನ ನಾಲ್ಕು ಪದವೀಧರರು ಮತ್ತು ಶಿಕ್ಷಕರ ಕ್ಷೇತ್ರದ ದೈ ವಾರ್ಷಿಕ ಚುನಾವಣೆಯ ಮತ ಎಣಿಕೆ ಮಂಗಳವಾರ ನಡೆದಿದ್ದು, ಎನ್ ಡಿಎ ಅಭ್ಯರ್ಥಿಗಳು ಎರಡು ಕ್ಷೇತ್ರಗಳಲ್ಲಿ ಜಯಗಳಿಸಿದ್ದಾರೆ. ಆಡಳಿತರೂಢ ಕಾಂಗ್ರೆಸ್ ಪಕ್ಷವು ಭಾರಿ ಸೋಲನ್ನು ಕಂಡಿದೆ. ಸದ್ಯ ಈ ಬಗ್ಗೆ ಬಿಜೆಪಿ 'ಡಿಕೆ ಇಟ್ಸ್ ಡನ್ ಬ್ರೋ' ಎಂದು ಲೇವಡಿ ಮಾಡಿದ್ದು, ಎಕ್ಸ್ನಲ್ಲಿ ವೈರಲ್ ಆಗಿದೆ.
ದೈ ವಾರ್ಷಿಕ ಚುನಾವಣೆಯ ಮತ ಎಣಿಕೆ ಮಂಗಳವಾರ ನಡೆದಿದ್ದು, ಎನ್ ಡಿಎ ಅಭ್ಯರ್ಥಿಗಳು ಎರಡು ಕ್ಷೇತ್ರಗಳಲ್ಲಿ ಜಯಗಳಿಸಿದ್ದಾರೆ. ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ, ಇನ್ನೆರಡು ಕ್ಷೇತ್ರಗಳಲ್ಲಿ ಕೂಡ ಎನ್ಡಿಎ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದರು.
ಬಿಜೆಪಿ ಕರ್ನಾಟಕವು ಎಕ್ಸ್ನಲ್ಲಿ ಸಿಎಂ ಡಿಕೆ ಶಿವಕುಮಾರ್ ಅವರು, ಕಿವಿಗೆ ಹೂವಿಟ್ಟುಕೊಂಡಿರುವ ಫೋಟೋವನ್ನು ಹಂಚಿಕೊಂಡು, 'ಇಟ್ಸ್ ಡನ್, ಬ್ರೋ! ಎನ್ಡಿಎ ಎಂಎಲ್ಸಿ ಚುನಾವಣೆಯಲ್ಲಿ 4/4 ಕ್ಷೇತ್ರಗಳನ್ನು ಗೆದ್ದು ಬೀಗಿದೆ!' ಎಂದು ವ್ಯಂಗ್ಯವಾಗಿ ಬರೆದುಕೊಂಡಿದೆ.
ಫೆಬ್ರವರಿ 2023 ರಲ್ಲಿ ಬಸವರಾಜ ಬೊಮ್ಮಾಯಿ ಮಂಡಿಸಿದ ರಾಜ್ಯ ಬಜೆಟ್ ವಿರುದ್ಧ ವಿಧಾನಸೌಧದ ಒಳಗೆ ಡಿಕೆ ಶಿವಕುಮಾರ್ ತಲೆಗೆ ಚೆಂಡು ಹೂವುಗಳನ್ನು ಮುಡಿಕೊಂಡು ವಿನೂತನ ಪ್ರತಿಭಟನೆ ನಡೆಸಿದ್ದ ಹಳೆಯ ಫೋಟೋವನ್ನು ಮರುಬಳಕೆ ಮಾಡುವ ಮೂಲಕ ಕಾಂಗ್ರೆಸ್ ನಾಯಕನ ಕಾಲೆಳೆದಿದೆ.
ಈಶಾನ್ಯ ಶಿಕ್ಷಕರ ಕ್ಷೇತ್ರ ಕಲಬುರಗಿ (ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ನೆಲ) ವ್ಯಾಪ್ತಿಗೆ ಬರುವ ಈ ಕ್ಷೇತ್ರದಲ್ಲಿ ಬಿಜೆಪಿಯ ಹಾಲಿ ಎಂಎಲ್ಸಿ ಶಶಿಲ್ ಜಿ. ನಮೋಶಿ ಅವರು ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರ್ ಅವರನ್ನು ಸೋಲಿಸುವ ಮೂಲಕ ಐದನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ಎನ್ಡಿಎ ಅಭ್ಯರ್ಥಿ ಎಸ್.ವಿ.ಸಂಕನೂರು ಪಶ್ಚಿಮ ಪದವೀಧರ ಕ್ಷೇತ್ರ ಗೆದ್ದು ಕೊಂಡರು. ಇನ್ನು ಆಗ್ನೆಯ ಪದವೀಧರ ಕ್ಷೇತ್ರ ಎನ್ಡಿಎ ಅಭ್ಯರ್ಥಿ ಕೆ.ಎಂ.ಸುರೇಶ್ ದಕ್ಕಿಸಿಕೊಂಡರು.
ಅಕ್ಟೋಬರ್ 23 ರಂದು ಮತಪತ್ರಗಳ ಮೂಲಕ ನಡೆದ ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ತನ್ನಲ್ಲಿದ್ದ ಏಕೈಕ ಸ್ಥಾನವನ್ನು ಉಳಿಸಿಕೊಳ್ಳುವುದರ ಜೊತೆಗೆ ಇನ್ನುಳಿದ ಕ್ಷೇತ್ರಗಳಲ್ಲೂ ಗೆಲುವು ಸಾಧಿಸುವ ವಿಶ್ವಾಸ ಹೊಂದಿತ್ತು. ಆದರೆ ಈ ಚುನಾವಣಾ ಫಲಿತಾಂಶವು ಆ ಪಕ್ಷಕ್ಕೆ ತೀವ್ರ ಹಿನ್ನಡೆಯನ್ನುಂಟು ಮಾಡಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತವರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶಶಿಲ್ ಜಿ.ನಮೋಶಿ ಕಾಂಗ್ರೆಸ್ನ ಶರಣಪ್ಪ ಮಟ್ಟೂರು ವಿರುದ್ಧ 3297 ಮತಗಳ ಅಂತರದಿಂದ ಭರ್ಜರಿ ಜಯಗಳಿಸುವ ಮೂಲಕ ಐದನೇ ಬಾರಿಗೆ ವಿಧಾನ ಪರಿಷತ್ ಪ್ರವೇಶಿಸಿದ್ದಾರೆ. ಚಲಾವಣೆಯಾದ 30,253 ಮತಗಳಲ್ಲಿ ಶಶೀಲ್ ಜಿ.ನಮೋಶಿ 15,596 ಮತ ಪಡೆದರೆ, ಪ್ರತಿಸ್ಪರ್ಧಿ ಶರಣಪ್ಪ ಮಟ್ಟೂರು 12,299 ಮತ ಪಡೆದರು. ಮತ ಎಣಿಕೆಯ ಮೊದಲ ಸುತ್ತಿನಿಂದ ಅಂತಿಮ ಸುತ್ತಿನವರೆಗೂ ನಮೋಶಿ ಮುನ್ನಡೆ ಸಾಧಿಸುತ್ತ ಬಂದರು. ಕಾಂಗ್ರೆಸ್, ಬಿಜೆಪಿ ಹೊರತುಪಡಿಸಿ ಸ್ಪರ್ಧಿಸಿದ್ದ 11 ಪಕ್ಷೇತರ ಅಭ್ಯರ್ಥಿಗಳು 485 ಮತಗಳನ್ನಷ್ಟೇ ಪಡೆದರು. ಒಟ್ಟು 1873 ಮತಗಳು ಅಸಿಂಧುವಾಗಿವೆ.
ಚುನಾವಣಾ ಫಲಿತಾಂಶದ ಬೆನ್ನಲ್ಲೇ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಇವಿಎಂ ದೂರುಗಳ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ. 'ದೂಷಿಸಲು ಯಾವುದೇ ಇವಿಎಂ ಇಲ್ಲ, ರಾಜ್ಯ ಯಂತ್ರೋಪಕರಣಗಳು ನಿಮ್ಮ ಕೈಯಲ್ಲಿವೆ, ಮತ್ತು ಚುನಾವಣೆಗಳು ಕಾಗದದ ಮತಪತ್ರಗಳ ಮೂಲಕ ನಡೆದಿವೆ' ಎಂದು ಎಕ್ಸ್ನಲ್ಲಿ ಬರೆದುಕೊಂಡು ಟಾಂಗ್ ಕೊಟ್ಟರು, (ಏಜೆನ್ಸೀಸ್).