

ಬೆಂಗಳೂರು: ಕನ್ನಡದ ನಟಿಮಣಿಯರಿಗೆ ಪರಭಾಷೆಗಳಲ್ಲೂ ಬೇಡಿಕೆ ಹೆಚ್ಚಿದೆ. ರಶ್ಮಿಕಾ ಮಂದಣ್ಣ, ಶ್ರೀಲೀಲಾ, ನಭಾ ನಟೇಶ್, ಆಶಿಕಾ ರಂಗನಾಥ್, ಸಂಜನಾ ಆನಂದ್ ಸೇರಿ ಹಲವು ನಟಿಯರು ಹಿಂದಿ, ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ಈ ಸಾಲಿಗೆ ಹೊಸ ಸೇರ್ಪಡೆ ಇತಿ ಆಚಾರ್ಯ.
ಈ ಚಿತ್ರಕ್ಕೆ ಸಂಜಯ್ ಚರಣ್ ಆ್ಯಕ್ಷನ್-ಕಟ್ ಹೇಳುತ್ತಿದ್ದು, ನಾಯಕ ಫೈಸಲ್ ರಶೀದ್‌ಗೆ ಇತಿ ನಾಯಕಿಯಾಗಿದ್ದಾರೆ. ಚಿತ್ರದ ಬಗ್ಗೆ, ’ನಾನು ಈ ಸಿನಿಮಾದ ಭಾಗವಾಗಿರುವುದಕ್ಕೆ ಖುಷಿ ಇದ್ದು, ಪಾತ್ರ ನಿರ್ವಹಣೆಗೆ ಉತ್ಸುಕಳಾಗಿದ್ದೇನೆ. ಈ ಪಯಣದಲ್ಲಿ ಸಾಕಷ್ಟು ಕಲಿಯುವುದು ಇದೆ. ಇದೊಂದು ವಿಭಿನ್ನ ಕಥೆಯಾಗಿದ್ದು, ಟೆಕ್ನಿಕಲ್ ಸಿನಿಮಾ’ ಎಂದು ಸಂತಸ ಹಂಚಿಕೊಂಡಿದ್ದಾರೆ. ಕೆಲವೇ ದಿನಗಳಲ್ಲಿ ‘ದ ಶೂ ಐ ವೋರ್’ ಚಿತ್ರೀಕರಣ ಪ್ರಾರಂಭವಾಗಲಿದೆ.- ಏಜೆನ್ಸೀಸ್
2016ರಲ್ಲಿ ಮಿಸ್ ಸೌತ್ ಇಂಡಿಯಾ ಕಿರೀಟ ಧರಿಸಿದ್ದ ಇತಿ, ಮಾಡೆಲಿಂಗ್ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ಬಳಿಕ ಕನ್ನಡದ ‘ಕವಚ’, ‘ಡೀಲ್‌ರಾಜಾ’, ‘ಪಂಗನಾಮ’ ಸೇರಿ ತೆಲುಗು, ತಮಿಳು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. 2016ರ ‘ಸತ್ಯವತಿ’ ಮೂಲಕ ಬಾಲಿವುಡ್‌ಗೆ ಎಂಟ್ರಿಯಾಗಿದ್ದ ಇತಿ, ಬಳಿಕ ‘ಆಶಿಕಿ ಫಿರ್ ಏಕ್ ಬಾರ್’ ಚಿತ್ರದಲ್ಲೂ ನಟಿಸಿದ್ದರು. ಇದೀಗ ‘ದ ಶೂ ಐ ವೋರ್’ ಎಂಬ ಮತ್ತೊಂದು ಬಾಲಿವುಡ್ ಚಿತ್ರಕ್ಕೆ ಆಯ್ಕೆಯಾಗಿದ್ದು, ಸೋಮವಾರ ತಮ್ಮ ಹುಟ್ಟುಹಬ್ಬದಂದೇ ಆ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.