

ನವದೆಹಲಿ: ಕರೊನಾ ವೈರಸ್ ರಾಷ್ಟ್ರದಲ್ಲಿ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಬಹುರಾಷ್ಟ್ರೀಯ ಕಂಪನಿ ಐಟಿಸಿ ಸ್ಯಾನಿಟೈಜರ್ ದರ ಕಡಿಮೆ ಮಾಡಿದೆ.
ಐಟಿಸಿ ಕಂಪನಿ ಉತ್ಪಾದನೆಯ 55 ಎಂಎಲ್ನ ಸಾವ್ಲಾನ್ ಸ್ಯಾನಿಟೈಜರ್ ಅನ್ನು ಕೇವಲ 27 ರೂಪಾಯಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 55 ಎಂಎಲ್ ಸಾವ್ಲಾನ್ ಸ್ಯಾನಿಟೈಜರ್ ಬೆಲೆ 77 ರೂಪಾಯಿ ಇತ್ತು. 57 ರೂಪಾಯಿ ಕಡಿತ ಮಾಡಿ ಎಲ್ಲರಿಗೂ ಸುಲಭವಾಗಿ ಸಿಗುವಂತೆ ಕಂಪನಿ ಈ ನಿರ್ಧಾರಕ್ಕೆ ಬಂದಿದೆ.
ಕರೊನಾ ವೈರಸ್ ಹರಡುತ್ತಿದ್ದಂತೆ ಸ್ಯಾನಿಟೈಜರ್ಗೆ ಬೇಡಿಕೆ ಅಧಿಕವಾಗಿ ಬೆಲೆ ದಿಢೀರ್ ಏರಿಕೆಯಾಗಿತ್ತು. ಅಂಗಡಿಗಳಲ್ಲಿ ದುಪ್ಪಟ್ಟು ದರ ಪಡೆದು ಮಾರಾಟ ಮಾಡುತ್ತಿದ್ದರು. ಸರ್ಕಾರ ಕೂಡಲೇ ಮಧ್ಯ ಪ್ರವೇಶ ಮಾಡಿ ಅಧಿಕ ದರ ಪಡೆಯುವ ಅಂಗಡಿ ಮಾಲೀಕರ ವಿರುದ್ಧ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ಕೂಡ ನೀಡಿತ್ತು.
ಈಗ ಐಟಿಸಿ ಕಂಪನಿ ಸ್ಯಾನಿಟೈಜರ್ ಬೆಲೆ ಕಡಿಮೆ ಮಾಡಿ ಕರೊನಾ ವೈರಸ್ ಹರಡುವುದನ್ನು ತಪ್ಪಿಸುವ ಹೋರಾಕ್ಕೆ ಕೈಜೋಡಿಸಿದೆ. (ಏಜೆಸ್ಸೀಸ್)