ಪಿಂಚಣಿ ಸಲುವಾಗಿ ತಾಯಿಯ ಶವವನ್ನು 6 ವರ್ಷಗಳ ಕಾಲ ಇಟ್ಟುಕೊಂಡಿದ್ದ ಮಗ

GermanLady
Published on

ಇಟಲಿ: ಸರ್ಕಾರದಿಂದ ಸಿಗುವ ಪಿಂಚಣಿ ಸಲುವಾಗಿ ತಾಯಿಯ ಶವವನ್ನು ಆರು ವರ್ಷಗಳ ಕಾಲ ಇಟ್ಟುಕೊಂಡಿರುವ ಘಟನೆ ಇಟಲಿಯಲ್ಲಿ ನಡೆದಿದೆ.

ಹೆಲ್ಗಾ ಮಾರಿಯಾ ಹೆಂಗ್‌ಬಾರ್ತ್ ಎಂಬಾಕೆ ಸುಮಾರು ಆರು ವರ್ಷಗಳ ಹಿಂದೆ, ತನ್ನ 86ನೇ ವಯಸ್ಸಿನಲ್ಲಿ ನಿಧನಳಾಗಿದ್ದಳು. ಆದರೆ ಆಕೆಯ ಮಗ ಆರು ವರ್ಷಗಳ ಕಾಲ ಅದನ್ನ ಸಂರಕ್ಷಿಸಿ ಇಟ್ಟು, ತನ್ನ ತಾಯಿಯ ಶವದೊಂದಿಗೆ ವಾಸಿಸುತ್ತಿದ್ದ.ಜತೆಗೆ ಹೆಲ್ಗಾ ಜರ್ಮನಿಗೆ ತೆರಳಿದ್ದಾಳೆಂದು ನೆರೆಹೊರೆಯವರಿಗೆ ನಂಬಿಸಿ, ಈತನು ಜರ್ಮನಿಗೆ ಆಗಾಗ ಹೋಗಿ ಬರುತ್ತಿದ್ದ.

ಹೀಗೆ ಮೊನ್ನೆ ಮೇ 25ರಂದು ಜರ್ಮನಿಗೆ ತೆರಳಿದ್ದ ವೇಳೆ ಕೊಳೆತ ಶವದಿಂದ ವಾಸನೆ ಬರಲಾರಂಭಿಸಿತ್ತು. ಕೊನೆಗೆ ಪೊಲೀಸರು ಹೆಣದ ಅವಶೇಷಗಳನ್ನು ಪತ್ತೆ ಹಚ್ಚಿದ್ದು, ಆಕೆ ಕಳೆದ ಹಲವು ವರ್ಷಗಳಿಂದ ಯಾವುದೇ ಆರೋಗ್ಯ ವಿಮೆಗಳನ್ನು ಕ್ಲೈಮ್‌ ಮಾಡದಿದ್ದಾಗ ಘಟನೆ ಬೆಳಕಿಗೆ ಬಂದಿದೆ. ನಂತರ ಸುದ್ದಿ ತಿಳಿದ ಮಗ ತಾನಾಗಿಯೇ ಬಂದು ಪೊಲೀಸರಿಗೆ ಶರಣಾಗಿದ್ದಾನೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net