ಸಮಯವಾಗಿತ್ತು! ಈ ಸಮಯದಲ್ಲಿ ನನ್ನ ಮತ್ತು ಆಕೆಯ ನಡುವೆ ಬಹಳ ವಿಶೇಷವಾದ ಸಂವಾದವೇ ನಡೆದಿತ್ತು!

cover page
Published on
‘ಎಲ್ಲಿಂದ ಬಂದಿದ್ದೀರಿ? ಈಗ ಕಾರಿನ ಬಳಿ ಹೋದವರು ನಿಮ್ಮ ಮಗನೇ?’ ಎಂಬ ಉಭಯ ಕುಶಲೋಪರಿಯಿಂದ ಆರಂಭವಾದ ಮಾತು ಬೇರೆಯೇ ದಿಕ್ಕಿನತ್ತ ಹೊರಳಿತು. ‘ನಾವು ಬಹಳ ದೂರದಿಂದ, ರೇಣುಕಾ ಮಾತೆಯನ್ನು ನೋಡಲೆಂದು ಬಂದಿರುವೆವು, ನಿಮ್ಮ ಬಳಿ ದೇವಸ್ಥಾನದ ಕೀ ಇದೆಯಾ?’ ಎನ್ನುತ್ತಾ, ಒಳಗಿನ ಮೂರ್ತಿಯನ್ನು ಮುಚ್ಚಿದ್ದ ಸರಳಿನಂಥ ಬಾಗಿಲ ಸಂದಿಯಿಂದ ಇಣುಕಿ ನೋಡಲು ಪ್ರಯತ್ನಿಸಿದೆ. ಒಳಗೆ ಕತ್ತಲಿತ್ತು. ದೀಪದ ಮಂದ ಬೆಳಕಿನಲ್ಲಿ ಮೂರ್ತಿ ಸರಿಯಾಗಿ ಕಾಣುತ್ತಿರಲಿಲ್ಲ. ‘ಇಲ್ಲಿಂದ ಸರಿಯಾಗಿ ಭಗವತಿ ಕಾಣುತ್ತಿಲ್ಲ, ನಿಮ್ಮ ಬಳಿ ಕೀ ಇದ್ದಿದ್ದರೆ, ಬಾಗಿಲು ತೆರೆದರೆ ದೇವಿಯ ದರ್ಶನ ಮಾಡಬಹುದಿತ್ತು’ ಎನ್ನುತ್ತಾ ಆಕೆಯೆಡೆಗೆ ತಿರುಗಿದೆ. ನನ್ನ ಮುಖವನ್ನೇ ದಿಟ್ಟಿಸಿದ ಆಕೆ, ‘ಅಂದರ್ ಬೈಠೀ ಹುಯೀ ಮಾ ಬಾಹರ್ ನಹೀ ಆ ಸಕ್ತೀ ಹೈ ಕ್ಯಾ?’ ಅಂದರೆ, ಒಳಗೆ ಕುಳಿತಿರುವ ತಾಯಿ, ಹೊರಗೆ ಬರಲಾರಳೇ? ಎಂದು ನಕ್ಕಳು!

- ಇದು ‘ಹಿಮಾಲಯ ಋಷಿಗಳ ದಿವ್ಯ ಸಂದೇಶಗಳು - ಸಕಾಲಿಕ ಮತ್ತು ಕಾಲಾತೀತ’ ಕೃತಿಯ ಬರೆಹದ ಒಂದು ಮಾದರಿ. ಈ ಕೃತಿಯನ್ನು ಶ್ರೀವಿದ್ಯಾ ಯೋಗ ಸಾಧಕಿ ಶ್ರೀ ಗುರು ಸಕಲಮಾ (ಜ್ಯೋತಿ ಪಟ್ಟಾಭಿರಾಮ್) ಅವರು ರಚಿಸಿದ್ದಾರೆ. ಸೆ. 22 ರ ಭಾನುವಾರ ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಗಾಯನ ಸಮಾಜದಲ್ಲಿ ಕೃತಿ ಲೋಕಾರ್ಪಣೆಯಾಗಲಿದೆ.

ಕೃತಿಯಲ್ಲೇನಿದೆ ?: ದೇಹ ಅಳಿದು ಹಲವು ವರ್ಷಗಳಾದರೂ ನೆನೆದಾಗ ಕಾಣಿಸಿಕೊಂಡು ಮಾರ್ಗದರ್ಶನ ಮಾಡುವ ಹಿಮಾಲಯದ ಯೋಗಿ ಸ್ವಾಮಿ ರಾಮ, ತಮಿಳುನಾಡಿನ ಪ್ರಾಚೀನ ದೇವಾಲಯದಲ್ಲಿ ಕಾಣಿಸಿಕೊಂಡು ಆಧ್ಯಾತ್ಮಿಕ ರಹಸ್ಯಪಥ ಚಂದ್ರವಿದ್ಯೆಯ ಕುರುಹು ತೋರಿದ ಋಷಿ ಅಗಸ್ತ್ಯರು, ರೈಲಿನಲ್ಲಿ ಕಾಣಿಸಿಕೊಂಡು ಎಚ್ಚರಿಸಿದ ಪರಮಹಂಸ ಯೋಗಾನಂದರು. ಕೋಪವಿಲ್ಲದ ಕರುಣಾಮೂರ್ತಿಯಾಗಿ ಕಾಣಿಸಿಕೊಳ್ಳುವ ಅತ್ರಿನಂದನ ಮುನಿ ದೂರ್ವಾಸರು. ಅಕ್ಷರಶಃ ರುಂಡ ಕಡಿದ ಅನುಭವ ದಯಪಾಲಿಸುವ ಛಿನ್ನಮಸ್ತಾ ದೇವಿಯ ರಹಸ್ಯ- ಹೀಗೆ ಮೈ ನವಿರೇಳಿಸುವ ಆಧ್ಯಾತ್ಮಿಕ ಅನುಭವಗಳು ಕೃತಿಯುದ್ದಕ್ಕೂ ಸಾಲುಗಟ್ಟಿ ಬರುತ್ತವೆ. ಕರ್ನಾಟಕದ ಮಲೆನಾಡಿನ ಸಾಮಾನ್ಯ ಕುಟುಂಬವೊಂದರಲ್ಲಿ ಜನಿಸಿದ ಹೆಣ್ಣು ಮಗಳು ಹಿಮಾಲಯದ ಯೋಗಿಗಳ ಶಿಷ್ಯೆಯಾಗಿ, ಅಧ್ಯಾತ್ಮ ಸಾಧಕಿಯಾಗಿ, ಶ್ರೀವಿದ್ಯೆಯ ಶ್ರೇಷ್ಠ ಗುರುವಾಗಿ ಹೊಮ್ಮಿದ ಕಥನ ಈ ಪುಸ್ತಕದಲ್ಲಿದೆ. ತಮ್ಮ ದೈವಿಕ ಸಾಧನೆಯ ಪಥದಲ್ಲಿ ಅವರು ಕಂಡುಂಡ ಹಲವು ಅನುಭವಗಳು, ಭೇಟಿ ಮಾಡಿದ ಯೋಗಿಗಳು- ಋಷಿಗಳು, ಸಾಧಿಸಿದ ಸಿದ್ಧಿಗಳು- ಇವೆಲ್ಲದರ ರಸಪಾಕವೇ ಈ ಕೃತಿ. ಗುರು ಸಕಲಮಾ ಯಾರು?

‘ಹಿಮಾಲಯ ಋಷಿಗಳ ದಿವ್ಯ ಸಂದೇಶಗಳು - ಸಕಾಲಿಕ ಮತ್ತು ಕಾಲಾತೀತ’ ಕೃತಿಯ ಲೇಖಕಿ ಗುರು ಸಕಲಮಾ (ಜ್ಯೋತಿ ಪಟ್ಟಾಭಿರಾಮ್) ಹಿಮಾಲಯ ಗುರು ಪರಂಪರೆಯ ಯೋಗಸಾಧಕಿ. ಈ ಶತಮಾನದ ಶ್ರೇಷ್ಠ ಯೋಗಿ ಸ್ವಾಮಿ ರಾಮ ಅವರ ನೇರ ಶಿಷ್ಯೆ. ಉತ್ತರದ ಹಿಮಾಲಯನ್ ಭಾರತೀ ಪರಂಪರೆ ಹಾಗೂ ದಕ್ಷಿಣದ ಶ್ರೀ ವಿದ್ಯಾರಣ್ಯ ಭಾರತೀ ಪರಂಪರೆಗಳ ಪ್ರತಿನಿಧಿ. ಸಾವಿರಾರು ಶಿಷ್ಯರಿಗೆ ಆಧ್ಯಾತ್ಮಿಕ ಹಾದಿ ತೋರಿದ ಶ್ರೀವಿದ್ಯಾ ಗುರು. ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯ ವಿಭಾಗದಲ್ಲಿ ಪ್ರೊಫೆಸರ್ ಆಗಿ ಮೂರು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದವರು. ಭರತನಾಟ್ಯ ಗುರುವಾಗಿ ಸಾವಿರಾರು ನಾಟ್ಯಾಸಕ್ತ ವಿದ್ಯಾರ್ಥಿಗಳಿಗೆ ನೃತ್ಯ ಶಿಕ್ಷಣ ನೀಡಿದ್ದಾರೆ. ಇವರ ಆತ್ಮಕಥನ ’ಮೆಸೇಜಸ್ ಫ್ರಮ್ ದ ಹಿಮಾಲಯನ್ ಮಾಸ್ಟರ್ಸ್ - ಟೈಮ್‌ಲೀ ಆ್ಯಂಡ್ ಟೈಮ್‌ಲೆಸ್’ ಇಂಗ್ಲೀಷ್ ಅವತರಣಿಕೆ ಇತ್ತೀಚೆಗೆ ಬಿಡುಗಡೆಯಾಗಿ ಜನಪ್ರಿಯವಾಗುತ್ತಿದೆ. ಕನ್ನಡದ ಮೂಲಕೃತಿ ’ಹಿಮಾಲಯ ಋಷಿಗಳ ದಿವ್ಯ ಸಂದೇಶಗಳು - ಸಕಾಲಿಕ ಮತ್ತು ಕಾಲಾತೀತ’ ಈಗ ಬಿಡುಗಡೆಯಾಗುತ್ತಿದೆ. ಯೋಗ, ಭರತನಾಟ್ಯ ಹಾಗೂ ಅಧ್ಯಾತ್ಮದ ಬೆಳಕನ್ನು ಪಸರಿಸುವ ಬೆಂಗಳೂರಿನ ’ಸಾಧನ ಸಂಗಮ ಟ್ರಸ್ಟ್’, ರಾಮನಗರದ ಸ್ವಾಮಿ ರಾಮ ಸಾಧನ ಧಾಮ ಅಧ್ಯಾತ್ಮ ಕೇಂದ್ರ ಹಾಗೂ ಸಾಧನಾ ವಿದ್ಯಾಲಯ ಇವುಗಳ ಸಂಸ್ಥಾಪಕರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net