

ಬೆಂಗಳೂರು: ಬಿಬಿಎಂಪಿ ಮಾಜಿ ಸದಸ್ಯ ವೇಲುನಾಯ್ಕರ್‌ಗೆ ಜಾತಿ ನಿಂದನೆ ಮಾಡಿದ ಪ್ರಕರಣ ಸಂಬಂಧ ಶಾಸಕ ಮುನಿರತ್ನ ವಿರುದ್ಧ ನ್ಯಾಯಾಲಯಕ್ಕೆ ಸಿಐಡಿ ಆರೋಪಪಟ್ಟಿ ಸಲ್ಲಿಸಿದೆ. ನಿಂದನೆ ಮಾಡಿರುವ ಧ್ವನಿ ಮುನಿರತ್ನ ಅವರದೇ ಎಂದು ವಿಧಿವಿಜ್ಞಾನ ಪ್ರಯೋಗಾಲಯ ವರದಿಯಲ್ಲಿ ಸಾಬೀತಾಗಿದೆ.
ಬಿಬಿಎಂಪಿ ಮಾಜಿ ಸದಸ್ಯ ವೇಲುನಾಯ್ಕರ್, ಜಾತಿ ನಿಂದನೆ ಆರೋಪದಡಿ ನೀಡಿದ ದೂರಿನ ಮೇರೆಗೆ ವೈಯಾಲಿಕಾವಲ್ ಪೊಲೀಸರು ಮುನಿರತ್ನ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ಎ್ಐಆರ್ ದಾಖಲಿಸಿದ್ದರು. ಸೂಕ್ಷ್ಮ ಪ್ರಕರಣವಾದ ಹಿನ್ನೆಲೆಯಲ್ಲಿ ಸರ್ಕಾರ ತನಿಖೆಯನ್ನು ಸಿಐಡಿಯ ಎಸ್‌ಐಟಿಗೆ ವರ್ಗಾವಣೆ ಮಾಡಿತ್ತು.
ತನಿಖೆ ನಡೆಸಿದ ಎಸ್‌ಐಟಿ ಅಧಿಕಾರಿಗಳು, 53 ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಿ ಆರೋಪಿಯ ವಿರುದ್ಧ 157 ದಾಖಲೆಗಳನ್ನು ಸಂಗ್ರಹಿಸಿದ್ದರು. ಒಟ್ಟಾರೆ 590 ಪುಟಗಳ ಸಾಕ್ಷಾೃಧಾರಗಳನ್ನು ಕ್ರೋಡೀಕರಿಸಿದ್ದಾರೆ. ಇದರಲ್ಲಿ ಮೂವರು ಪ್ರತ್ಯಕ್ಷದರ್ಶಿ ಸಾಕ್ಷಿದಾರರನ್ನು ನ್ಯಾಯಾಧೀಶರ ಮುಂದೆ ಹೇಳಿಕೆಯನ್ನು ನೀಡಿರುತ್ತಾರೆ. ಆರೋಪಿಯ ಜಾತಿ ನಿಂದನೆ ಮಾಡಿರುವ ಬಗ್ಗೆ ಆಡಿಯೋ ಕ್ಲಿಪ್ಪಿಂಗ್ ಅನ್ನು ಸಂಗ್ರಹ ಮಾಡಿ ಆರೋಪಿ ಮತ್ತು ಸಾಕ್ಷಿದಾರರ ಮಾದರಿ ಧ್ವನಿಯನ್ನು ಎ್ಎಸ್‌ಎಲ್‌ಗೆ ರವಾನೆ ಮಾಡಲಾಗಿತ್ತು.
ತಜ್ಞರು ಪರೀಕ್ಷಿಸಿದಾಗ ಆರೋಪಿಯ ಮಾದರಿ ಧ್ವನಿಯು ಮತ್ತು ದೂರುದಾರರಿಗೆ ಜಾತಿನಿಂದನೆ ಮಾಡಿ ನಿಂದಿಸಿರುವ ಧ್ವನಿಗೆ ಹೋಲಿಕೆ ಆಗಿರುವುದಾಗಿ ವರದಿ ನೀಡಿದ್ದಾರೆ. ಹಾಗಾಗಿ ಸಂಗ್ರಹಿಸಿದ ಎಲ್ಲ ದಾಖಲೆಗಳು ಮತ್ತು ವಿಚಾರಣೆಗೆ ಒಳಪಡಿಸಿದ ಸಾಕ್ಷಿದಾರರ ಹೇಳಿಕೆ, ವೈಜ್ಞಾನಿಕ ಸಾಕ್ಷಾೃಧಾರಗಳಿಂದ ತನಿಖೆಯಲ್ಲಿ ಆರೋಪಿಯ ವಿರುದ್ಧ ಸಾರ್ವಜನಿಕವಾಗಿ ಜಾತಿ ನಿಂದನೆ ಮಾಡಿದ ಬಗ್ಗೆ ಸಾಕ್ಷಿದಾರರಿಗೆ ಆವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕಿರುವ ಬಗ್ಗೆ ಮತ್ತು ಜಾತಿ- ಜಾತಿಗಳ ನಡುವೆ ವೈಷಮ್ಯ ಉಂಟುಮಾಡಿರುವುದು ಸಾಬೀತಾಗಿದೆ.
ಆದರಿಂದ ಆರೋಪಿ ಮುನಿರತ್ನ ವಿರುದ್ಧ ಸಿಸಿಎಚ್ 82ನೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಲಾಗಿದೆ ಎಂದು ಸಿಐಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.