ಪ್ರಾಣತ್ಯಾಗ ಮಾಡಿದವರ ಸ್ಮರಣೆ ನಮ್ಮ ಕರ್ತವ್ಯ

KOREGAON
ಕೋರೆಗಾಂವ್ ವಿಜಯೋತ್ಸವದ ಅಂಗವಾಗಿ ಚಿಕ್ಕಮಗಳೂರಿನಲ್ಲಿ ದಲಿತ ಸಂಘಟನೆಗಳ ಒಕ್ಕೂಟದಿಂದ ಆಯೋಜಿಸಿದ್ದ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಜನಸ್ತೋಮ.
Published on

ಚಿಕ್ಕಮಗಳೂರು: ಪೇಶ್ವೆಗಳ ವಿರುದ್ಧ ಮಹರ್ ಸಮುದಾಯದ ಮುಖಂಡ ಸಿದ್ದನಾಕ ನೇತೃತ್ವದಲ್ಲಿ 1818ರಲ್ಲಿ ನಡೆದ ಭೀಮಾ ಕೋರೆಗಾಂವ್ ಕದನ ಸ್ವಾಭಿಮಾನ, ಅಸ್ಮಿತೆಯ ಪ್ರತೀಕ. ಆ ಯುದ್ಧದಲ್ಲಿ ಪ್ರಾಣ ತ್ಯಾಗ ಮಾಡಿದವರನ್ನು ಸ್ಮರಿಸುವುದು ನಮ್ಮ ಕರ್ತವ್ಯ ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.

ದಲಿತ ಸಂಘಟನೆಗಳ ಒಕ್ಕೂಟದಿಂದ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಆಯೋಜಿಸಿದ್ದ ಭೀಮಾ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಂದಿನ ಕಾಲದಲ್ಲಿ ಅಸಮಾನತೆ, ಅಸ್ಪಶ್ಯತೆ ತಾಂಡವವಾಡುತ್ತಿತ್ತು. 10 ಸಾವಿರಕ್ಕೂ ಅಧಿಕ ಮರಾಠ ಸೈನಿಕರ ವಿರುದ್ಧ ಮಹರ್ ಸಮುದಾಯದ ಕೇವಲ 500 ಮಂದಿ ಹೋರಾಟ ನಡೆಸಿ ಜಯಗಳಿಸಿದ್ದು ಇತಿಹಾಸದ ಪುಟಗಳಲ್ಲಿ ದಾಖಲೆಯಾಗಿದೆ ಎಂದು ಹೇಳಿದರು.
ಕೋರೆಗಾಂವ್ ವಿಜಯೋತ್ಸವವನ್ನು ನೂರಾರು ವರ್ಷಗಳ ನಂತರ ಡಾ. ಬಿ.ಆರ್.ಅಂಬೇಡ್ಕರ್ ದುಂಡು ಮೇಜಿನ ಪರಿಷತ್‌ನಲ್ಲಿ ಪ್ರಸ್ತಾಪಿಸುವ ಮೂಲಕ ಮಹರ್ ಸೈನಿಕರ ಶೈರ್ಯದ ಇತಿಹಾಸವನ್ನು ಜೀವಂತವಾಗಿಸಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ರೂವಾರಿ ವಕೀಲ ಅನಿಲ್‌ಕುಮಾರ್ ಮಾತನಾಡಿ, ಸಮಸಮಾಜ ನಿರ್ಮಾಣದ ಬಸವಣ್ಣನವರ ಕನಸನ್ನು ನಿಜಗುಣಾನಂದ ಶ್ರೀಗಳು ನನಸಾಗಿಸುತ್ತಿದ್ದಾರೆ ಎಂದು ಹೇಳಿದರು.
ಮಹಾನಾಯಕ ಧಾರಾವಾಹಿಯ ಬಾಲ ಅಂಬೇಡ್ಕರ್ ಪಾತ್ರಧಾರಿ ಆಯುಷ್ಯ ಬನಸಾಲಿ, ಭೀಮ್‌ರಾವ್ ಪಾತ್ರಧಾರಿ ನಿವಲ್ ಜಗನ್ನಾಥ್ ಗುಣೆ ತಮ್ಮ ಪಾತ್ರದ ಸಂಭಾಷಣೆ ಹೇಳುವ ಮೂಲಕ ಗಮನ ಸೆಳೆದರು.
ಫಾದರ್ ಮಾರ್ಷಲ್ ಪಿಂಟೋ, ಮಾಜಿ ಸಚಿವರಾದ ಬಿ.ಬಿ.ನಿಂಗಯ್ಯ, ಮೋಟಮ್ಮ, ಬಿಎಸ್‌ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ಹೊನ್ನೇಶ್, ಕಾಂಗ್ರೆಸ್ ಮುಖಂಡ ಸುಧೀರ್‌ಕುಮಾರ್ ಮೂರಳ್ಳಿ, ಡಿಎಸ್‌ಎಸ್ ರಾಜ್ಯ ಸಂಘಟನಾ ಸಂಚಾಲಕ ದಂಟರಮಕ್ಕಿ ಶ್ರೀನಿವಾಸ್, ಮುಖಂಡರಾದ ಮರ್ಲೆ ಅಣ್ಣಯ್ಯ, ಕೃಷ್ಣಮೂರ್ತಿ, ವಸಂತಕುಮಾರ್, ಚಂದ್ರು, ರಮೇಶ್, ಲಕ್ಷ್ಮಣ, ಮಂಜುನಾಥ್, ಕೆ.ಭರತ್, ರಮೇಶ್, ಚಂದ್ರಶೇಖರ್, ಮಂಜೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net