ನೀಟ್ ಫಲಿತಾಂಶ ಸಿಬಿಐ ತನಿಖೆಯಾಗಲಿ ಎಂದು ಎಬಿವಿಪಿ ಹೇಳಿದ್ದು ಇದೇ ಕಾರಣಕ್ಕೆ

ABVP protest neet
Published on

ಬೆಂಗಳೂರು ವೈದ್ಯಕೀಯ ಪ್ರವೇಶಕ್ಕಾಗಿ ಈ ಬಾರಿ ನಡೆಸಿದ ನೀಟ್ ಪರೀಕ್ಷೆ ಪ್ರಕ್ರಿಯೆ ಮತ್ತು ಫಲಿತಾಂಶವನ್ನು ಸಿಬಿಐ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಎಬಿವಿಪಿ ಸಂಘಟನೆಯು ಆಗ್ರಹಿಸಿದೆ.

ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ಒತ್ತಾಯಿಸಿತು. ಯಾವ ಉದ್ದೇಶದಿಂದ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು (ಎನ್‌ಟಿಎ) ಲೋಕಸಭಾ ಚುನಾವಣೆಯ ದಿನವೇ ನೀಟ್ ಲಿತಾಂಶವನ್ನು ಪ್ರಕಟಿಸಿತು ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.

ಆದ್ದರಿಂದ ನೀಟ್ ಪರೀಕ್ಷೆಯ ಸಂಪೂರ್ಣ ಪ್ರಕ್ರಿಯೆಯನ್ನು ಸಿಬಿಐನಿಂದ ತನಿಖೆ ನಡೆಸಬೇಕು. ದೇಶದ ಹಲವು ಪ್ರದೇಶಗಳಿಂದ ಪರೀಕ್ಷಾ ಅಕ್ರಮವು ವರದಿಯಾಗಿದೆ. ಈ ನಿಟ್ಟಿನಲ್ಲಿ ಅನ್ಯಾಯದ ವಿರುದ್ಧ ಎಬಿವಿಪಿ ಹೋರಾಟ ನಡೆಸಲಿದೆ ಎಂದು ಒಕ್ಕೋರಲವಾಗಿ ಆಗ್ರಹಿಸಿದರು.

ಪರೀಕ್ಷೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳದಿರುವುದರಿಂದ ವಿದ್ಯಾರ್ಥಿಗಳು ಯಾವ ರೀತಿಯಲ್ಲಿ ಎನ್‌ಟಿಎ ಅನ್ನು ನಂಬುವುದು ಎಂಬ ಅನುಮಾನ ವ್ಯಕ್ತವಾಗಿದೆ. ಈ ಅಕ್ರಮವನ್ನು ಬಯಲಿಗೆಳೆದು ಅರ್ಹರಿಗೆ ನ್ಯಾಯ ಒದಗಿಸಲು ಸಿಬಿಐನಿಂದ ಮಾತ್ರ ಸಾಧ್ಯವಾಗಿದೆ. ಹೀಗಾಗಿ ಸಿಬಿಐ ತನಿಖೆ ಅನಿವಾರ್ಯ ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net