

ತಿ.ನರಸೀಪುರ: ಕೊಳತ್ತೂರು ಕೆರೆಯನ್ನು ಜೀವನೋದ್ಧಾರಗೊಳಿಸಿ, ನೀರು ತುಂಬಿಸುವ 2 ಕೋಟಿ ರೂ.ಗಳ ಯೋಜನೆಯನ್ನು ರೂಪಿಸಲಾಗಿದ್ದು, ಹಣವನ್ನು ರಾಜ್ಯ ಸರ್ಕಾರ ಮಂಜೂರು ಮಾಡಿದೆ. ಗ್ರಾಮಕ್ಕೆ ಸರ್ಕಾರಿ ಸಾರಿಗೆ ಬಸ್‌ಗಳ ಸಂಚಾರ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದ ಸುನೀಲ್ ಬೋಸ್ ಭರವಸೆ ನೀಡಿದರು.
ತಾಲೂಕಿನ ಕೊಳತ್ತೂರು ಗ್ರಾಮದಲ್ಲಿ ಬುಧವಾರ 25 ಲಕ್ಷ ರೂ.ಗಳ ವಿಶೇಷ ಘಟಕ ಯೋಜನೆ ಅನುದಾನದಲ್ಲಿ ಸಿಮೆಂಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿ ಮಾತನಾಡಿದ ಅವರು, ಮುಂಗಾರು ಉತ್ತಮವಾಗಿ ಆಗಿರುವುದರಿಂದ ನಾಲೆಗಳಿಗೆ ನೀರು ಹರಿಸುವುದರ ಜತೆಗೆ ಕೆರೆಗಳನ್ನು ತುಂಬಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಶಾಸಕರಾಗಿ ಪ್ರತಿನಿಧಿಸುವ ನರಸೀಪುರ ಕ್ಷೇತ್ರದ ಸೋಸಲೆ ಹೋಬಳಿಯ ಹಳ್ಳಿಗಳ ಪ.ಜಾತಿ ಸಮುದಾಯಗಳ ಬಡಾವಣೆಗಳ ಸಮಗ್ರ ಅಭಿವೃದ್ಧಿಗೆ ವಿಶೇಷ ಘಟಕ ಯೋಜನೆಯಡಿ ಅನುದಾನ 12 ಕೋಟಿ ರೂ.ಗಳನ್ನ ಮಂಜೂರು ಮಾಡಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ ಕ್ಷೇತ್ರದಲ್ಲಿ ನೂರಾರು ಕೋಟಿ ರೂ.ಗಳ ಅನುದಾನವನ್ನು ತಂದು ಅಭಿವೃದ್ಧಿಪಡಿಸಲಾಗಿದೆ ಎಂದರು.
ಮೈಮುಲ್ ಅಧ್ಯಕ್ಷ ಆರ್.ಚಲುವರಾಜು, ಡೇರಿ ಅಧ್ಯಕ್ಷ ಕೆ. ಎನ್.ಕುಮಾರ, ತಾಪಂ ಮಾಜಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನಸ್ವಾಮಿ, ಎಚ್.ಎನ್.ಉಮೇಶ್, ಕಾಂಗ್ರೆಸ್ ಯುವ ಮುಖಂಡ ಲಕ್ಷ್ಮೀನಾರಾಯಣ್, ತಾಪಂ ಸಾಮಾಜಿಕ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಕುಕ್ಕೂರು ಗಣೇಶ್, ರಾಮಲಿಂಗಯ್ಯ, ಪಿಎಸಿಸಿಎಸ್ ಅಧ್ಯಕ್ಷ ಮುಸುವಿನಕೊಪ್ಪಲು ಶಿವರಾಮು, ಮಾಜಿ ಅಧ್ಯಕ್ಷ ಎಂ.ಪರಶಿವಮೂರ್ತಿ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಬಿ.ಎಂ.ಶಿವಮಲ್ಲಪ್ಪ, ಗ್ರಾಪಂ ಅಧ್ಯಕ್ಷರಾದ ಶೈಲಜಾ ಮಹೇಶ್, ರವಿಪ್ರಸಾದ್, ಮಂಜುಳಾ ಶಿವಸ್ವಾಮಿ, ಉಪಾಧ್ಯಕ್ಷೆ ಮಮತಾ, ಮಾಜಿ ಅಧ್ಯಕ್ಷರಾದ ಆರ್.ಸೋಮಣ್ಣ, ಕೆ.ಶಂಕರ, ಎಂ.ಮಹೇಶ, ದ್ವಾರಿ ಪುಟ್ಟಸ್ವಾಮಿ, ತೇಜು, ಡಾ.ಡಿ.ಮಹದೇವಸ್ವಾಮಿ, ಹೊರಳಹಳ್ಳಿ ಷಡಕ್ಷರಿ, ಚಿದರವಳ್ಳಿ ಚಂದ್ರಶೇಖರ, ಮಹೇಶ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಚನ್ನಕೇಶವ, ಮಹಿಳಾ ಅಧ್ಯಕ್ಷೆ ವೀಣಾ ಶಿವಕುಮಾರ್, ನರಗ್ಯಾತನಹಳ್ಳಿ ಶಿವಮ್ಮ, ಮುಖಂಡರಾದ ದೊಡ್ಡನಹುಂಡಿ ನಂಜುಂಡಸ್ವಾಮಿ, ಪರಮೇಶ್ ಪಟೇಲ್, ಸಂಸದರ ಆಪ್ತ ಸಹಾಯಕ ಬಸವರಾಜು, ಜಾನಪದ ಗಾಯಕ ಪಿ.ಮಹದೇವಸ್ವಾಮಿ, ತಹಸೀಲ್ದಾರ್ ಟಿ.ಜಿ.ಸುರೇಶಾಚಾರ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎಸ್.ಅನಂತರಾಜು, ಇಂಜಿನಿಯರ್ ಸತೀಶ್ ಚಂದ್ರನ್, ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಇಂಜಿನಿಯರ್ ಕೆ.ಶಿವರಾಜ್, ತಾಂತ್ರಿಕ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪಿ.ಎನ್.ಚರಿತಾ, ಸೆಸ್ಕ್ ಎಇಇ ಕೆ.ವಿ.ವೀರೇಶ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.