

ಬೆಂಗಳೂರು: ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ಇನ್ಮುಂದೆ 30 ಲಕ್ಷ ರೂ.ಗೂ ಅಧಿಕ ಮೌಲ್ಯದ ಸ್ಥಿರಾಸ್ತಿ ಮಾರಾಟ ಅಥವಾ ಖರೀದಿ ವಹಿವಾಟು ನಡೆಸುವ ಪಕ್ಷಗಾರರೇ ಆದಾಯ ತೆರಿಗೆ ಇಲಾಖೆಗೆ ‘ಹಣಕಾಸು ವಹಿವಾಟಿನ ಹೇಳಿಕೆ’ (ಎಸ್‌ಎ್ಟಿ) ಸಲ್ಲಿಸಬೇಕು. ಆ ಮೂಲಕ ತೆರಿಗೆ ವಂಚಕರ ಮೇಲೆ ಆದಾಯ ತೆರಿಗೆ ಇಲಾಖೆ ನಿಗಾ ಇಡಲಿದೆ.
ಸಾಮಾನ್ಯವಾಗಿ ಉಪ ನೋಂದಣಿ ಕಚೇರಿಯಲ್ಲಿ 30 ಲಕ್ಷ ರೂ. ಗೂ ಅಧಿಕ ಮೌಲ್ಯದ ಸ್ಥಿರಾಸ್ತಿಯ ಮಾರಾಟ ಅಥವಾ ಖರೀದಿಯ ವಹಿವಾಟು ನಡೆಸುವ ಪಕ್ಷಗಾರರ ಮಾಹಿತಿಯನ್ನು ಆಯಾ ಸಬ್ ರಿಜಿಸ್ಟ್ರಾರ್‌ಗಳು ಪ್ರತಿವರ್ಷ ಆದಾಯ ತೆರಿಗೆ ಇಲಾಖೆಗೆ ಸಲ್ಲಿಸುತ್ತಿದ್ದರು. ನಮಗೆ ಬೇಕಾದ ಮಾಹಿತಿಯನ್ನು ಸಬ್‌ರಿಜಿಸ್ಟ್ರಾರ್‌ಗಳು ಸಲ್ಲಿಸುತ್ತಿಲ್ಲ ಎಂಬುದು ಐಟಿ ಅಧಿಕಾರಿಗಳ ಆರೋಪವಾಗಿತ್ತು. ಮತ್ತೊಂದೆಡೆ ದಸ್ತಾವೇಜು ರಿಜಿಸ್ಟ್ರೇಷನ್‌ಗೆ ಪಾನ್ ಕಾರ್ಡ್ ಕಡ್ಡಾಯ ಮತ್ತು ಪ್ರಧಾನ ಕಚೇರಿಯಲ್ಲಿ ಲಾಗಿನ್ ಐಡಿ ಪಡೆದು ಪರಿಶೀಲನೆ ನಡೆಸುವಂತೆ ಸಬ್‌ರಿಜಿಸ್ಟ್ರಾರ್‌ಗಳ ವಾದವಿತ್ತು.
ಈ ಗೊಂದಲ ಬಗೆಹರಿಸುವ ಉದ್ದೇಶದಿಂದ ದಸ್ತಾವೇಜು ನೋಂದಣಿ ಸಮಯದಲ್ಲಿ ಸಬ್ ರಿಜಿಸ್ಟ್ರಾರ್‌ಗಳು ಆದಾಯ ತೆರಿಗೆ ಕಾಯ್ದೆ 1961ರ ಕಲಂ-285 ಬಿಎ(1) ಅನುಸರಿಸಬೇಕು. 30 ಲಕ್ಷ ರೂ. ಹೆಚ್ಚು ಮೌಲ್ಯದ ಆಸ್ತಿ ನೋಂದಣಿಯಾದಲ್ಲಿ ಅರ್ಜಿದಾರರಿಂದ ಅವರ ಸಹಿಯೊಂದಿಗೆ ಸ್ವಯಂ ದೃಢೀಕರಿಸಿರುವ ಪ್ರಮಾಣಪತ್ರ ಪಡೆಯಬೇಕು.
ಇದನ್ನು ದಸ್ತಾವೇಜು ಸ್ಕಾೃನಿಂಗ್ ವೇಳೆ ಸ್ವಯಂ ದೃಢೀಕರಿಸಿರುವ ಪ್ರಮಾಣಪತ್ರವನ್ನು ಸ್ಕಾೃನ್ ಮಾಡಿದ ಮೇಲೆ ಪಕ್ಷಗಾರರಿಗೆ ರಿಜಿಸ್ಟ್ರೇಷನ್ ಪತ್ರವನ್ನು ಹಸ್ತಾಂತರಿಸಬೇಕು. ಇಲ್ಲವಾದರೆ ದಸ್ತಾವೇಜು ಕೊಡಬಾರದು. ಹೆಚ್ಚುವರಿ ಸ್ಕಾೃನಿಂಗ್ ಶುಲ್ಕ ಪಡೆಯುವ ಅವಶ್ಯಕತೆ ಇರುವುದಿಲ್ಲ. ಈ ಕ್ರಮದಲ್ಲಿ ಯಾವುದೇ ಲೋಪದೋಷಗಳು ಉಂಟಾದಲ್ಲಿ ಸಂಬಂಧಪಟ್ಟ ಅಧಿಕಾರಿಯೇ ಜವಾಬ್ದಾರಿ ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತ ಕೆ.ಎ. ದಯಾನಂದ್ ಸುತ್ತೋಲೆ ಹೊರಡಿಸಿದ್ದಾರೆ.
ಏನೆಲ್ಲ ಮಾಹಿತಿ ಕಡ್ಡಾಯ?
ಸ್ಥಿರಾಸ್ತಿ ಮಾರಾಟಗಾರ ಮತ್ತು ಖರೀದಿದಾರರ ವಿಳಾಸ ಸೇರಿದಂತೆ ವಿವಿಧ ಮಾಹಿತಿ ಕೋರಲಾಗಿದೆ. ರಿಜಿಸ್ಟ್ರೇಷನ್ ದಿನಾಂಕ, ವಹಿವಾಟಿನ ಹಣದ ಮೌಲ್ಯ, ಆಸ್ತಿ ವಿವರ, ವಿಳಾಸ, ಹಣಕಾಸು ವರ್ಗಾವಣೆ ಸ್ವರೂಪ, ಪಾನ್, ಆಧಾರ್ ಕಾರ್ಡ್ ವಿವರ, ಾರಂ 60 ರಸೀದಿ, ಹುಟ್ಟಿದ ದಿನಾಂಕ, ಮೊಬೈಲ್ ನಂಬರ್, ಇಮೇಲ್ ಸೇರಿದಂತೆ ಹಲವು ಮಾಹಿತಿ ನೀಡುವುದರ ಜತೆಗೆ ಮಾರಾಟಗಾರ ಮತ್ತು ಖರೀದಿದಾರರು ಸಹಿ ಹಾಕಿ ದೃಢೀಕರಿಸಬೇಕಿದೆ.
ಕಾವೇರಿ 2.0ರಲ್ಲೇ ಅಳವಡಿಸಿ
ತಂತ್ರಜ್ಞಾನ ಮುಂದುವರಿದಿರುವ ಜಗತ್ತಿನಲ್ಲಿ ಕಾಗದದ ಮೇಲೆ ಮಾಹಿತಿ ಪಡೆಯುತ್ತಿರುವ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಈ ಕ್ರಮದಿಂದ ಅಧಿಕಾರಿ-ಸಿಬ್ಬಂದಿಗೆ ಹೆಚ್ಚಿನ ಹೊರೆಯಾಗಲಿದೆ ಹೊರತು ಸುಲಭವಾಗುವುದಿಲ್ಲ. ಕಾವೇರಿ 2.0 ತಂತ್ರಾಂಶದಲ್ಲಿ ದಸ್ತಾವೇಜು ರಿಜಿಸ್ಟ್ರೇಷನ್‌ಗೆ ದಾಖಲೆ ಅಪ್‌ಲೋಡ್ ಮಾಡುವಾಗ 30 ಲಕ್ಷ ರೂ.ಗೂ ಅಧಿಕ ವಹಿವಾಟು ನಡೆದರೆ ಸ್ವಯಂಚಾಲಿತವಾಗಿ ಆದಾಯ ತೆರಿಗೆ ಇಲಾಖೆಗೆ ಬೇಕಾದ ಮಾಹಿತಿ ಸಲ್ಲಿಸುವುದು ಕಡ್ಡಾಯ ಮಾಡಬಹುದಾಗಿತ್ತು. ಮಾರಾಟಗಾರ ಮತ್ತು ಖರೀದಿದಾರರ ಆಧಾರ್, ಪಾನ್ ಕಾರ್ಡ್ ವಿವರ, ವಿಳಾಸ, ಾರಂ 60 ರಸೀದಿ, ಟಿಡಿಎಸ್ ಸೇರಿದಂತೆ ಆದಾಯ ತೆರಿಗೆ ಇಲಾಖೆಗೆ ಬೇಕಾದ ಎಲ್ಲ ಮಾಹಿತಿ ಅಪ್‌ಲೋಡ್ ಮಾಡಿದ ಮೇಲೆಯೇ ಮುಂದಿನ ಹಂತಕ್ಕೆ ಅವಕಾಶ ನೀಡಬೇಕಿತ್ತು. ಇದೀಗ ಪಕ್ಷಗಾರರಿಂದ ಕಾಗದದ ಮೇಲೆ ಮಾಹಿತಿ ಸಂಗ್ರಹಿಸಿ ದಸ್ತಾವೇಜು ಸ್ಕಾೃನಿಂಗ್ ಜತೆಗೆ ಸ್ಕಾೃನ್ ಮಾಡಿದರೆ ಐಟಿ ಇಲಾಖೆಗೆ ಮಾಹಿತಿ ಕೊಡಲು ಮತ್ತೆ ಓಬಿರಾಯನ ಕಾಲದಂತೆ ನಿರ್ವಹಿಸಬೇಕಿದೆ. ಮತ್ತೆ ಲೋಪದೋಷಗಳು ಹೆಚ್ಚಾಗಲಿವೆ ಎಂಬ ಅಭಿಪ್ರಾಯ ಕಂದಾಯ ಇಲಾಖೆಯಲ್ಲಿ ಕೇಳಿಬಂದಿದೆ.