ಇಸ್ತಾನ್‌ಬುಲ್ ಶಾಂತಿ ಮಾತುಕತೆ: ಒಪ್ಪಂದ ವಿಫಲವಾದರೆ ಅಫ್ಘಾನ್​ನೊಂದಿಗೆ ಯುದ್ಧ ಮಾಡುತ್ತೇವೆ ಎಂದ ಪಾಕ್​ ರಕ್ಷಣಾ ಸಚಿವ Khawaja Asif

Khawaja Asif
Published on

ಇಸ್ಲಾಮಾಬಾದ್: ಇಸ್ತಾನ್‌ಬುಲ್‌ನಲ್ಲಿ ನಡೆಯುತ್ತಿರುವ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಶಾಂತಿ ಮಾತುಕತೆಯ ಮೂಲಕ ಒಪ್ಪಂದಕ್ಕೆ ಬರಲು ವಿಫಲವಾದರೆ ಇಸ್ಲಾಮಾಬಾದ್ ಮುಕ್ತ ಯುದ್ಧವನ್ನು ಪ್ರಾರಂಭಿಸುತ್ತದೆ ಎಂದು ಪಾಕ್​ ರಕ್ಷಣಾ ಸಚಿವ ಖವಾಜಾ ಆಸಿಫ್(Khawaja Asif) ಶನಿವಾರ ಅಫ್ಘಾನ್ ತಾಲಿಬಾನ್‌ಗೆ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿದ ಅಸಿಫ್, ನಮಗೆ ಒಂದು ಆಯ್ಕೆ ಇದೆ, ಯಾವುದೇ ಒಪ್ಪಂದ ನಡೆಯದಿದ್ದರೆ, ನಾವು ಅವರೊಂದಿಗೆ ಮುಕ್ತ ಯುದ್ಧವನ್ನು ಮಾಡುತ್ತೇವೆ. ಆದರೆ ಅಫ್ಘಾನ್​ ಶಾಂತಿಯನ್ನು ಬಯಸುತ್ತಾರೆ ಎಂದು ನಾನು ನೋಡಿದೆ ಎಂದು ಆಸಿಫ್ ಹೇಳಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.

ಉಭಯ ರಾಷ್ಟ್ರಗಳ ನಡುವೆ ಮಾರಕ ಗಡಿ ಘರ್ಷಣೆಗಳ ನಂತರ ಎರಡೂ ಕಡೆಯವರು ಕದನ ವಿರಾಮಕ್ಕೆ ಒಪ್ಪಿಕೊಂಡ ಕೆಲವು ದಿನಗಳ ನಂತರ, ಟರ್ಕಿಯ ಇಸ್ತಾನ್‌ಬುಲ್‌ನಲ್ಲಿ ನಡೆಯುತ್ತಿರುವ ಶಾಂತಿ ಮಾತುಕತೆಗಳ ಮಧ್ಯೆ ಈ ಹೇಳಿಕೆ ಬಂದಿದೆ.

ಇಸ್ತಾನ್‌ಬುಲ್‌ನಲ್ಲಿ ಶನಿವಾರ ಪ್ರಾರಂಭವಾದ ಮಾತುಕತೆಗಳು ಭಾನುವಾರದವರೆಗೆ ಮುಂದುವರಿಯುವ ನಿರೀಕ್ಷೆಯಿದೆ. ಅಲ್ಲದೆ, 2021 ರಲ್ಲಿ ತಾಲಿಬಾನ್ ಕಾಬೂಲ್ ಅನ್ನು ವಶಪಡಿಸಿಕೊಂಡ ನಂತರದ ಗಡಿ ಸಂಘರ್ಷ ಹಿಂಸಾಚಾರ ತಿರುಗಿದೆ.

ಮೊದಲ ಸುತ್ತಿನ ಚರ್ಚೆಗಳು ಅಕ್ಟೋಬರ್ 19 ರಂದು ದೋಹಾದಲ್ಲಿ ನಡೆದವು. ಅಲ್ಲದೆ, ಕತಾರ್ ಮತ್ತು ಟರ್ಕಿ ಈ ಸಂವಾದಕ್ಕೆ ಅನುಕೂಲ ಮಾಡಿಕೊಟ್ಟವು ಮತ್ತು ಪರಸ್ಪರ ಭದ್ರತಾ ಕಾಳಜಿಗಳನ್ನು ಪರಿಹರಿಸುವ ಗುರಿಯನ್ನು ಹೊಂದಿರುವ ಚರ್ಚೆಗಳನ್ನು ಮುಂದುವರಿಸಲು ಎರಡೂ ಕಡೆಯವರು ಅಕ್ಟೋಬರ್ 25 ರಂದು ಇಸ್ತಾನ್‌ಬುಲ್‌ನಲ್ಲಿ ಮತ್ತೆ ಭೇಟಿಯಾಗಲು ಒಪ್ಪಿಕೊಂಡಿದ್ದರು.

ಅಫ್ಘಾನಿಸ್ತಾನದ ಸುರಕ್ಷಿತ ತಾಣಗಳಿಂದ ದಾಳಿ ಮಾಡುವ ಉಗ್ರಗಾಮಿಗಳನ್ನು ನಿಗ್ರಹಿಸುವಂತೆ ಪಾಕಿಸ್ತಾನವು ಕಾಬೂಲ್‌ಗೆ ಒತ್ತಾಯಿಸಿದ ನಂತರ ಗಡಿಯಲ್ಲಿ ಘರ್ಷಣೆಗಳು ಭುಗಿಲೆದ್ದವು. ಆದರೆ ತಾಲಿಬಾನ್ ಈ ಹೇಳಿಕೆಯನ್ನು ನಿರಾಕರಿಸಿದೆ. ಅಲ್ಲದೆ, ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಮತ್ತು ಪೂರ್ವ ಅಫ್ಘಾನಿಸ್ತಾನದ ಮಾರುಕಟ್ಟೆಯಲ್ಲಿ ಪಾಕಿಸ್ತಾನವು ವೈಮಾನಿಕ ದಾಳಿ ನಡೆಸುತ್ತಿದೆ ಎಂದು ತಾಲಿಬಾನ್ ಸರ್ಕಾರ ಆರೋಪಿಸಿತು. ಪಾಕ್​ ಈ ಹಿಂದೆ ಅಫ್ಘಾನಿಸ್ತಾನದೊಳಗೆ ದಾಳಿ ನಡೆಸಿತ್ತು.

ದೋಹಾದಲ್ಲಿ ನಡೆದ ಶಾಂತಿ ಮಾತುಕತೆಯ ನಂತರ, ಪಾಕಿಸ್ತಾನ ಕಳೆದ ವಾರ ಅಫ್ಘಾನಿಸ್ತಾನದೊಳಗೆ ಹೊಸ ವೈಮಾನಿಕ ದಾಳಿ ನಡೆಸಿ 10 ಜನರನ್ನು ಕೊಂದಿತು. ಏಕೆಂದರೆ ಇಸ್ಲಾಮಾಬಾದ್ 48 ಗಂಟೆಗಳ ಕದನ ವಿರಾಮವನ್ನು ಮುರಿದಿದೆ ಎಂದು ತಾಲಿಬಾನ್ ಆರೋಪಿಸಿತು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net