ನವದೆಹಲಿ : ಡಿ. 24 ರಂದು ಇಸ್ರೋ (ISRO) ದ LVM3-M6 ರಾಕೆಟ್ ಅಮೆರಿಕ ಮೂಲದ ಸಂಸ್ಥೆ AST ಸ್ಪೇಸ್‌ಮೊಬೈಲ್‌ಗಾಗಿ ಸಂವಹನ ಉಪಗ್ರಹವನ್ನು ಉಡಾವಣೆ ಮಾಡಲಿದ್ದು, ಇದೊಂದು ಮಹತ್ವದ ವಾಣಿಜ್ಯ ಮೈಲಿಗಲ್ಲಾಗಿದೆ ಎಂದು ಹೇಳಲಾಗುತ್ತಿದೆ. LVM3-M6 ಉಡಾವಣೆಯನ್ನು ಡಿ. 24, 2025 ರಂದು 08:54 ಗಂಟೆಗೆ IST ಕ್ಕೆ ಶ್ರೀಹರಿಕೋಟಾದ SDSC SHAR ನಲ್ಲಿರುವ ಎರಡನೇ ಉಡಾವಣಾ ಪ್ಯಾಡ್‌ನಿಂದ ನಿಗದಿಪಡಿಸಲಾಗಿದೆ ಎಂದು ಇಸ್ರೋ ಘೋಷಿಸಿದೆ. ಈ ಮಿಷನ್ ಬ್ಲೂಬರ್ಡ್ ಬ್ಲಾಕ್-2 ಒಂದು ವಾಣಿಜ್ಯ ಉಡಾವಣೆಯಾಗಿದ್ದು, ಇದನ್ನು AST ಸ್ಪೇಸ್‌ಮೊಬೈಲ್ ಇಂಕ್ ಮತ್ತು ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (NSIL) ನಡುವಿನ ಒಪ್ಪಂದದ ಭಾಗವಾಗಿದೆ. AST ಸ್ಪೇಸ್‌ಮೊಬೈಲ್ ಪ್ರಕಾರ, ಈ ಮುಂದಿನ ಪೀಳಿಗೆಯ ಉಪಗ್ರಹಗಳನ್ನು ವಿಶ್ವಾದ್ಯಂತ ಪ್ರಮಾಣಿತ ಸ್ಮಾರ್ಟ್‌ಫೋನ್‌ಗಳಿಗೆ ನೇರವಾಗಿ 24/7 ಹೈ-ಸ್ಪೀಡ್ ಸೆಲ್ಯುಲಾರ್ ಬ್ರಾಡ್‌ಬ್ಯಾಂಡ್ ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಹಿಂದಿನ ಹಣಕಾಸು ವರ್ಷದಲ್ಲಿ ಅಂದಾಜು 200 ಮಿಲಿಯನ್ ಡಾಲರ್ಸಂಗ್ರಹಿಸಲಾಗಿತ್ತು. ಈ ಭಾರಿ ಕಳೆದ ವರ್ಷ ಸಂಗ್ರಹಿಸಿದ ಮೊತ್ತಕ್ಕಿಂತ ಎರಡು ಪಟ್ಟು ಹೆಚ್ಚಾಗಲಿದೆ ಎಂದು IN-SPACe ನ ಅಧ್ಯಕ್ಷ ಪವನ್ ಗೋಯೆಂಕಾ ನವದೆಹಲಿಯಲ್ಲಿ ನಡೆದ ಭಾರತ ಆರ್ಥಿಕ ವೇದಿಕೆಯಲ್ಲಿ ಮಾತನಾಡಿದರು.