

Khan Younis: ಇಸ್ರೇಲಿ ಸೈನ್ಯವು ಗಾಜಾದ ಅತಿದೊಡ್ಡ ನಗರ ಕೇಂದ್ರವನ್ನು ವಶಪಡಿಸಿಕೊಳ್ಳವ ಮುಂಚಿತವಾಗಿ ದಕ್ಷಿಣದಲ್ಲಿರುವ ಮಾನವೀಯ ವಲಯಕ್ಕೆ ತೆರಳುವಂತೆ ಗಾಜಾದ ನಿವಾಸಿಗಳನ್ನು ಶನಿವಾರ (ಸೆಪ್ಟೆಂಬರ್ 6, 2025) ಒತ್ತಾಯಿಸಿದೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಸೇನಾ ವಕ್ತಾರ ಅವಿಚೇ ಅಡ್ರೇ, ಅಲ್-ಮವಾಸಿದಲ್ಲಿರುವ ಮಾನವೀಯ ವಲಯಕ್ಕೆ ಬೇಗನೆ ತೆರಳಲು ಮತ್ತು ಈಗಾಗಲೇ ಅಲ್ಲಿಗೆ ಹೋಗಿರುವ ಸಾವಿರಾರು ಜನರೊಂದಿಗೆ ಜತೆಗೂಡಲು ಈ ಅವಕಾಶವನ್ನು ಬಳಸಿಕೊಳ್ಳಿ ಎಂದು ನಗರದ ನಿವಾಸಿಗಳಿಗೆ ಸಂದೇಶದಲ್ಲಿ ತಿಳಿಸಿದ್ದಾರೆ.
ಆದರೆ, ಹೊಸ ಆಕ್ರಮಣ ಯಾವಾಗ ಪ್ರಾರಂಭವಾಗುತ್ತದೆ ಎಂದು ಅಡ್ರೇ ನಿರ್ದಿಷ್ಟವಾಗಿ ಸ್ಪಷ್ಟಪಡಿಸಿಲ್ಲ. ಅಲ್ಲದೆ, ಯಾವುದೇ ದಾಳಿಯ ಬಗ್ಗೆ ಮುಂಚಿತವಾಗಿ ಘೋಷಿಸಲಾಗುವುದಿಲ್ಲ ಎಂದು ಅಡ್ರೇ ಹೇಳಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಶ್ವಸಂಸ್ಥೆ, ಗಾಜಾ ನಗರ ಮತ್ತು ಸುತ್ತಮುತ್ತ ಸುಮಾರು ಹತ್ತು ಲಕ್ಷ ಜನರಿದ್ದಾರೆ. ಇಸ್ರೇಲಿ ಸೇನೆಯು ನಗರವನ್ನು ವಶಪಡಿಸಿಕೊಳ್ಳುವ ತನ್ನ ಯೋಜನೆಗಳೊಂದಿಗೆ ಮುಂದುವರಿದರೆ ವಿಪತ್ತು ಎದುರಾಗಲಿದೆ ಎಂದು ಎಚ್ಚರಿಸಿದೆ ನೀಡಿದೆ.
ಈ ದಾಳಿಯನ್ನು ನಿಲ್ಲಿಸುವಂತೆ ಇಸ್ರೇಲ್ ಮೇಲೆ ವಿದೇಶಗಳ ಒತ್ತಡ ಹೆಚ್ಚುತ್ತಿದೆ. ಅದರೆ ಶತ್ರು ಹಮಾಸ್ ಕಳೆದ ತಿಂಗಳು ತಾತ್ಕಾಲಿಕ ಕದನ ವಿರಾಮ ಮತ್ತು ಗಾಜಾದಲ್ಲಿ ಬಂಧಿಸಲ್ಪಟ್ಟ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವುದನ್ನು ಒಳಗೊಂಡ ಕದನ ವಿರಾಮ ಪ್ರಸ್ತಾಪಕ್ಕೆ ಒಪ್ಪಿಕೊಂಡಿತು. ಆದರೆ, ಇಸ್ರೇಲ್, ಪ್ಯಾಲೆಸ್ಟೀನಿಯನ್ ಹಮಾಸ್ನ್ನು ಎಲ್ಲಾ ಒತ್ತೆಯಾಳುಗಳನ್ನು ಏಕಕಾಲದಲ್ಲಿ ಬಿಡುಗಡೆ ಮಾಡಿ, ಶಸ್ತ್ರಾಸ್ತ್ರಗಳನ್ನು ತ್ಯಜಿಸಿ, ಗಾಜಾದ ನಿಯಂತ್ರಣವನ್ನು ಬಿಟ್ಟುಕೊಡುವಂತೆ ಒತ್ತಾಯಿಸಿದೆ.
ಈ ಬಗ್ಗೆ ಇಸ್ರೇಲ್ ತನ್ನ ಪ್ರತ್ಯೇಕ ಹೇಳಿಕೆಯಲ್ಲಿ, ದಕ್ಷಿಣದಲ್ಲಿರುವ ಮಾನವೀಯ ವಲಯವು ಆಹಾರ, ಟೆಂಟ್ಗಳು, ಔಷಧಿಗಳು ಮತ್ತು ವೈದ್ಯಕೀಯ ಉಪಕರಣಗಳ ನಿರಂತರ ಪೂರೈಕೆಯ ಜೊತೆಗೆ ಕ್ಷೇತ್ರ ಆಸ್ಪತ್ರೆಗಳು, ನೀರಿನ ಪೈಪ್ಲೈನ್ಗಳು ಅಗತ್ಯ ಮೂಲಸೌಕರ್ಯಗಳನ್ನು ಹೊಂದಿದೆ ಎಂದು ಸೇನೆ ಹೇಳಿದೆ.
2023ರ ಅಕ್ಟೋಬರ್ 7 ರಂದು ಹಮಾಸ್ ನಡೆಸಿದ ದಾಳಿಯಿಂದ ಯುದ್ಧ ಆರಂಭದಲ್ಲಿ ಇಸ್ರೇಲ್ ಮೊದಲು ಅಲ್-ಮವಾಸಿಯನ್ನು ಸುರಕ್ಷಿತ ವಲಯವೆಂದು ಘೋಷಿಸಿತು. (ಏಜೆನ್ಸೀಸ್)