7 ಹಮಾಸ್​​ ಉಗ್ರರನ್ನು ಹತ್ಯೆ ಮಾಡಿದ ಇಸ್ರೇಲ್! | Hamas Terrorists

dk - 2025-07-15T125447.632
Published on

Hamas terrorists: ಇಸ್ರೇಲ್​ ಅಂತರಿಕ ಭದ್ರತಾ ಸಂಸ್ಥೆಯಾದ ಶೇನ್​ ಬೇಟ್​(IDF) ಹಾಗೂ ಇಸ್ರೇಲ್​ ಭದ್ರತಾ ಪಡೆಗಳು(Israeli security forces) ಗಾಜಾದಲ್ಲಿ ನಡೆಸಿದ ಏರ್​ಸ್ಟ್ರೇಕ್​​ನಲ್ಲಿ ಹಮಾಸ್​ನ 7 ಉಗ್ರರನ್ನು ಹೊಡೆದು ಹಾಕಿದ್ದೇವೆ ಎಂದು ಮಂಗಳವಾರ(ಜು.15) ತಿಳಿಸಿವೆ.

ಇಸ್ರೇಲ್​ ನಡೆಸಿದ ಅಪರೇಷನ್​​ನಲ್ಲಿ ಹಮಾಸ್​ ಹಿರಿಯ ಭಯೋತ್ಪಾದರನ್ನು ಹತ್ಯೆ ಮಾಡಿವೆ. ಹಮಾಸ್​ನ ಪ್ರಮುಖ ಕಚೇರಿಗಳಾದ ಜೂಡಿಯಾ ಮತ್ತು ಸಮಾರಿಯಾಗಳ ಮೇಲೆ IDF ದಾಳಿ ಮಾಡಿದೆ. ಹತ್ಯೆಗೀಡಾದ ಉಗ್ರರಲ್ಲಿ 1998ರ ಜೆರುಸಲೇಮ್​ ದಾಳಿಯ ಪ್ರಮುಖ ಉಗ್ರರಾದ ರಿಯಾದ್​ ಅಸಿಲ್ಲಾ(Riyadh Asilla) ಮತ್ತು ಬಸ್ಸೆಮ್ ಅಬು ಸನಿನಾ(Bassem Abu Sanina) ಸೇರಿದ್ದಾರೆ ಎಂದು ವರದಿಯಾಗಿದೆ.

IDF ಪ್ರಕಾರ ಜೈಲಿನಿಂದ ಹೊರಬಂದ ನಂತರ ಹಮಾಸ್​ನ ಅಸಿಲ್ಲಾ ಜೆರುಸಲೆಮ್​ ತಂಡದಲ್ಲಿ ಕೆಲಸ ಮಾಡಲು ಶುರು ಮಾಡಿದ ಹಾಗೂ ಭಯೋತ್ಪಾದರನ್ನು ಇಸ್ರೇಲ್​ ಮೇಲೆ ದಾಳಿ ನಡೆಸಲು ಪ್ರಚೋದನೆ ನೀಡುತ್ತಿದ್ದ ಎಂದು ಹೇಳಿದೆ. ಮತ್ತೋಬ್ಬ ಉಗ್ರ ಸನಿನಾ ಕೂಡ IDFನ ಸೈನಿಕನ ಕೊಲೆಯಲ್ಲಿ ಪ್ರಮುಖ ಆರೋಪಿಯಾಗಿದ್ದ, ಸನಿಯಾ ಗಾಜಾದಲ್ಲಿ ಅಗುತ್ತಿದ್ದ ಉಗ್ರ ಕೃತ್ಯಗಳಲ್ಲಿ ಭಾಗಿಯಾಗಿದ್ದ ಎಂದು IDF ತಿಳಿಸಿದೆ.

ಈ ಇಬ್ಬರು ಪ್ರಮುಖ ಉಗ್ರರು ಇಸ್ರೇಲ್​ ಮೇಲೆ ನಡೆಸಿದ ಹಲವಾರು ದಾಳಿಗಳ ಮಾಸ್ಟರ್​ ಮೈಂಡ್​ಗಳು ಎಂದು ಹೇಳಲಾಗಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net