

ಇಸ್ಲಾಮಾಬಾದ್: ಭಯೋತ್ಪಾದನೆ ತವರೂರಾದ ಪಾಕಿಸ್ತಾನದಲ್ಲಿ ಇಂದು(ನ. 11) ಬೆಳಗ್ಗೆ 12 ಜನರ ಸಾವಿಗೆ ಕಾರಣವಾದ ಇಸ್ಲಾಮಾಬಾದ್ ನ್ಯಾಯಾಲಯದ ಹೊರೆಗೆ ನಡೆದ ಆತ್ಮಾಹುತಿ ದಾಳಿಗೆ ಭಾರತವೇ ಕಾರಣ ಎಂದು ಯಾವುದೇ ಸಾಕ್ಷ್ಯ ಪೂರಾವೆ ಕೊಡದೇ ಪ್ರಧಾನಿ ಶೆಹಬಾಜ್ ಷರೀಫ್(Shehbaz Sharif) ಆರೋಪಿಸಿದ್ದಾರೆ ಎಂದು ವರದಿಯಾಗಿದೆ.
ಪಾಕಿಸ್ತಾನ ಸರ್ಕಾರದ ಸುದ್ದಿ ಸಂಸ್ಥೆ ಅಸೋಸಿಯೇಟೆಡ್ ಪ್ರೆಸ್ ಆಫ್ ಪಾಕಿಸ್ತಾನ್ ಈ ಕುರಿತು ವರದಿ ಪ್ರಕಾರ, ಭಾರತ ಬೆಂಬಲಿತ ಉಗ್ರಗಾಮಿಗಳು ಇಸ್ಲಾಮಾಬಾದ್‌ನಲ್ಲಿ ದಾಳಿ ನಡೆಸಿದ್ದು, ಅಫ್ಘಾನ್ ಪ್ರದೇಶದಿಂದ ಕಾರ್ಯನಿರ್ವಹಿಸುತ್ತಿರುವ ಅದೇ ಜಾಲವು ವಾನಾದಲ್ಲಿ ಮುಗ್ಧ ಮಕ್ಕಳ ಮೇಲೆ ದಾಳಿ ಮಾಡಿದೆ. ಈ ಘಟನೆಗಳು ಪಾಕಿಸ್ತಾನವನ್ನು ಅಸ್ಥಿರಗೊಳಿಸಲು ಭಾರತ ಪ್ರಾಯೋಜಿತ ಭಯೋತ್ಪಾದನೆ ಕೃತ್ಯ ಎಂದು ಆರೋಪಿಸಿದ್ದಾರೆ.
ಭಾರತದ ಪೋಷಕತ್ವದಲ್ಲಿ ಅಫ್ಘಾನ್ ನೆಲದಿಂದ ನಡೆಸಲಾಗುತ್ತಿರುವ ಈ ದಾಳಿಗಳಿಗೆ ಯಾವುದೇ ಖಂಡನೆ ಸಾಕಾಗುವುದಿಲ್ಲ ಎಂದಿದ್ದಾರೆ. ಆದರೆ ಈ ಎಲ್ಲಾ ಕೃತ್ಯಗಳನ್ನು ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ನಡೆಸಿದ್ದರೂ ಅದನ್ನು ಭಾರತದ ಕೈಗೊಂಬೆ ಎಂದು ಹಾಸ್ಯಾಸ್ಪದವಾಗಿ ಹೇಳಿದ್ದಾರೆ.
ದಕ್ಷಿಣ ಏಷ್ಯಾದಲ್ಲಿ ಉಗ್ರರ ತಯಾರಿಕೆಯ ಕೇಂದ್ರ ಬಿಂದುವಾಗಿರುವ ಪಾಕಿಸ್ತಾನವು ಬಹಳ ಹಿಂದಿನಿಂದಲೂ ಭಯೋತ್ಪಾದನೆಯನ್ನು ರಪ್ತುದಾರನಾಗಿದೆ. ಉಗ್ರರಿಗೆ ಆಶ್ರಯ ನೀಡುತ್ತದೆ. ಆದರೆ ಪಾಕ್ನಲ್ಲಿ ಸ್ಫೋಟವಾದ ಕೆಲವೇ ಗಂಟೆಗಳಲ್ಲಿ ಭಾರತದ ಮೇಲೆ ಪ್ರಧಾನಿ ಶೆಹಬಾಹ್ ಇಲ್ಲಸಲ್ಲದ ಆರೋಪವನ್ನು ಮಾಡಿದ್ದಾರೆ. (ಏಜೆನ್ಸೀಸ್)