ರೋಬಾಟ್ ಬಳಸಿ ವಿಧ್ವಂಸಕ ಕೃತ್ಯ ಎಸಗಲು‌ ಐಸಿಸ್ ಸಂಚು; ಬಂಧಿತರು ಇಂಜಿನಿಯರಿಂಗ್ ವಿದ್ಯಾರ್ಥಿಗಳು!

robo terrorism
ಸಾಂದರ್ಭಿಕ ಚಿತ್ರ
Published on

ಮಂಗಳೂರು: ರಾಜ್ಯದಲ್ಲಿ ರೋಬಾಟ್​ಗಳ ಮೂಲಕ ವಿಧ್ವಂಸಕ ಕೃತ್ಯ ಎಸಗಲು‌ ಐಸಿಸ್ ಸಂಚುರೂಪಿಸಿದ್ದ ವಿಚಾರ ಇದೀಗ ಬಯಲಾಗಿದೆ. NIA ಚಾರ್ಜ್​ಶೀಟ್​ನಲ್ಲಿದ್ದ ಸ್ಪೋಟಕ ಮಾಹಿತಿ ಇದೀಗ ಬೆಳಕಿಗೆ ಬಂದಿದೆ.

ಶಂಕಿತ ಉಗ್ರರರನ್ನು ವಿಚಾರಣೆ ಮಾಡುವ ಸಂದರ್ಭದಲ್ಲಿ ಅವರು ಬಾಯ್ಬಿಟ್ಟಿದ್ದಾರೆ. ಶಿವಮೊಗ್ಗ ಟ್ರಾಯಲ್ ಬ್ಲಾಸ್ಟ್ ಮತ್ತು ಮಂಗಳೂರು ಕುಕ್ಕರ್ ಬ್ಲಾಸ್ಟ್ ಐಸಿಸ್ ಸಂಚು ಪ್ರಕರಣದ ವಿಚಾರವಾಗಿ ನ್ಯಾಯಾಲಯಕ್ಕೆ NIA ಅಧಿಕಾರಿಗಳು ಚಾರ್ಜ್​ಶೀಟ್ ಸಲ್ಲಿಸಿದ್ದರು.

ಬಂಧಿತರು ಇಂಜಿನಿಯರಿಂಗ್ ವಿದ್ಯಾರ್ಥಿಗಳು!

ಬಂಧಿತ ಶಂಕಿತ ಉಗ್ರರು ಎಲ್ಲರೂ, ಮೆಕಾನಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಾಗಿದ್ದು ಬಂಧಿತರನ್ನು NIA ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದರು.

NIA ಅಧಿಕಾರಿಗಳು, ಮೊಹಮ್ಮದ್ ಶಾರಿಕ್ (25), ಮಾಜ್ ಮುನೀರ್ ಅಹ್ಮದ್ (23), ಸೈಯದ್ ಯಾಸಿನ್ (22), ರೀಶಾನ್ ತಾಜುದ್ದೀನ್ ಶೇಖ್ (22), ಹುಜೈರ್ ಫರ್ಹಾನ್ ಬೇಗ್ (22), ಮಜಿನ್ ಅಬ್ದುಲ್ ರಹಮಾನ್ (22), ನದೀಮ್ ಅಹ್ಮದ್ ಎಂದು ಗುರುತಿಸಲಾಗಿದೆ. ಕೆ ಎ (22), ಜಬೀವುಲ್ಲಾ (32) ಮತ್ತು ನದೀಮ್ ಫೈಝಲ್ ಎನ್ (27) ಎಂಬುವವರ ವಿರುದ್ದ ಚಾರ್ಜ್ ಶಿಟ್ ಸಲ್ಲಿಸಿದ್ದಾರೆ.

ಭವಿಷ್ಯದ ಚಟುವಟಿಕೆಗಳಿಗೆ ಭಯೋತ್ಪಾದಕರ ಪ್ಲಾನ್!

ಶಂಕಿತರು ವಿದೇಶದಲ್ಲಿರುವ ಐಸಿಸ್ ಭಯೋತ್ಪಾದಕರೊಂದಿಗೆ‌ ನೇರ ಸಂಪರ್ಕದಲ್ಲಿದ್ದರು. ಇವರಿಗೆಲ್ಲರಿಗೂ ರೋಬಾಟಿಕ್ ಕೋರ್ಸ್ ಓದುವಂತೆ ಐಸಿಸ್ ಹ್ಯಾಂಡ್ಲರ್ ನಿರ್ದೆಶನ ನೀಡಿದ್ದ ಎನ್ನಲಾಗಿದೆ. ಭವಿಷ್ಯದ ಭಯೋತ್ಪಾದಕ ಚಟುವಟಿಕೆಗಳಿಗೆ ತಯಾರಾಗುವಂತೆ ಹ್ಯಾಂಡ್ಲರ್ ಅವರಿಗೆ ನಿರ್ದೇಶನ ನೀಡಿದ್ದ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net