ಇದು ಅವಮಾನದ ಪ್ರತಿಕಾರವೆಂದು ಗುರುದ್ವಾರ ಮೇಲಿನ ದಾಳಿಯ ಹೊಣೆ ಹೊತ್ತ ಐಸಿಸ್​!

ISIS
Published on

ಕಾಬೂಲ್: ಅಫ್ಘಾನಿಸ್ತಾನದ ಗುರುದ್ವಾರದ ಮೇಲಿನ ದಾಳಿಯ ಹೊಣೆಯನ್ನು ಐಸಿಸ್​ ಉಗ್ರ ಸಂಘಟನೆ ಹೊತ್ತುಕೊಂಡಿದ್ದು, ಪ್ರವಾದಿ ಮೊಹಮ್ಮದ್​​ ಅವರಿಗೆ ಮಾಡಿದ ಅವಮಾನಕ್ಕೆ ಪ್ರತಿಕಾರ ಎಂದು ಹೇಳಿಕೊಂಡಿದೆ.

ಶನಿವಾರ ಬೆಳಗ್ಗೆ ಗುರುದ್ವಾರದ ಮೇಲೆ ದಾಳಿ ನಡೆದಿತ್ತು, ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದರು. ಈ ಬಗ್ಗೆ ಭಾನುವಾರ ತನ್ನ ಅಮಾಕ್​ ಪ್ರಚಾರ ತಾಣದಲ್ಲಿ ಪೋಸ್ಟ್​​ ಮಾಡಿರುವ ಐಸಿಸ್​ ತಾನೇ ದಾಳಿ ನಡೆಸಿದ್ದಾಗಿ ಹೇಳಿದೆ.

ಸಿಖ್​ ಹಾಗೂ ಹಿಂದು ದೇವಾಲಯವನ್ನು ಗುರಿಯಾಗಿರಿಸಿಕೊಂಡಿದ್ದ ಐಸಿಸ್​, ಕಾಬೂಲಿನ ಗುರುದ್ವಾರದ ಮೇಲೆ ಬಾಂಬ್​ ದಾಳಿ ನಡೆಸಿದ್ದಲ್ಲದೇ, ಒಳ ಪ್ರವೇಶಿಸಿ ಗುಂಡಿನ ದಾಳಿಯನ್ನು ನಡೆಸಿತ್ತು. ಈ ನಡುವೆ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಿದ್ದಲ್ಲದೇ, ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ಎಚ್ಚರಿಕೆ ನೀಡಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net