

ಮುಂಬೈ: ಬಾಲಿವುಡ್ ನಟಿ ಇಶಾ ಕೊಪ್ಪಿಕರ್ ಅವರು ತಮ್ಮ ವೈಯಕ್ತಿಕ ಕಾರಣಗಳಿಗಾಗಿ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. ವರದಿಗಳ ಪ್ರಕಾರ, ಇಶಾ 14 ವರ್ಷಗಳ ನಂತರ ಪತಿ ಟಿಮ್ಮಿ ನಾರಂಗ್‌ನಿಂದ ಬೇರಾಗಿದ್ದಾರೆ. ಸದ್ಯ ಇಶಾ ತನ್ನ ಮಗಳೊಂದಿಗೆ ತಮ್ಮ ತಂದೆ-ತಾಯಿಯ ಮನೆಯಲ್ಲಿ ವಾಸಿಸುತ್ತಿದ್ದಾರೆ. ಆಪ್ತ ಮೂಲಗಳ ಪ್ರಕಾರ, ಹೊಂದಾಣಿಕೆ ಸಮಸ್ಯೆಯಾಗಿ ದಂಪತಿಗಳು ಬೇರ್ಪಟ್ಟಿದ್ದಾರೆ. ಇದೀಗ ಇಶಾ ಮತ್ತು ಟಿಮ್ಮಿ ಅವರ ವಿಚ್ಛೇದನದ ಸುದ್ದಿ ಕೇಳಿ ಅಭಿಮಾನಿಗಳು ಸಖತ್ ಶಾಕ್ ಆಗಿದ್ದಾರೆ. ಇಶಾ ಮತ್ತು ಟಿಮ್ಮಿಯ ಪ್ರೇಮಕಥೆ ಹೇಗಿದೆಯೆಂದರೆ ಅವರ ದೂರಾಗುತ್ತಿರುವ ಸುದ್ದಿ ಕೇಳಿ ಎಲ್ಲರೂ ಬೇಸರ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ ಇಶಾ ಮತ್ತು ಟಿಮ್ಮಿ ಜಿಮ್‌ನಲ್ಲಿ ಮೊದಲು ಭೇಟಿಯಾದರು. ಟಿಮ್ಮಿ ಮೊದಲ ಲುಕ್ನಲ್ಲೇ ಇಶಾಳನ್ನು ಪ್ರೀತಿಸುತ್ತಿದ್ದರು. ಇಬ್ಬರೂ ಹೆಚ್ಚು ಭೇಟಿಯಾಗದಿದ್ದರೂ ನಂಬರ್ ವಿನಿಮಯ ಮಾಡಿಕೊಂಡು ಫೋನ್‌ನಲ್ಲಿ ಮಾತನಾಡಲು ಆರಂಭಿಸಿದ್ದರು. ಫೋನ್‌ನಲ್ಲಿ ಮಾತನಾಡುವಾಗ ಅವರು ಉತ್ತಮ ಸ್ನೇಹಿತರಾದರು.
ಗೆಳೆಯರ ಜೊತೆ ಮೊದಲ ಡೇಟ್ !
ಮೊದಲ ಡೇಟ್ನಲ್ಲಿ, ಇಶಾ ಟಿಮ್ಮಿ ಬರುತ್ತಿಲ್ಲ ಎಂದು ಭಾವಿಸಿ ತನ್ನ ಹುಡುಗಿಯರ ಗ್ಯಾಂಗ್ ಅನ್ನು ಅಲ್ಲಿಗೆ ಕರೆದಿದ್ದರಂತೆ. ಆದರೆ ನಂತರ ಟಿಮ್ಮಿ ಇಶಾಗೆ ಕರೆ ಮಾಡಿದ್ದರು. ಹೀಗೆ ಇಶಾ ಮೊದಲ ಡೇಟಿಂಗ್ನಲ್ಲಿ ತನ್ನೊಂದಿಗೆ 20 ಸ್ನೇಹಿತರನ್ನು ಕರೆದುಕೊಂಡು ಹೋಗಿದ್ದರು. ಟಿಮ್ಮಿಯ ಕರೆ ಬರದಿದ್ದಾಗ ಸ್ನೇಹಿತರ ಜೊತೆ ಸೇರಿ ಪ್ಲಾನ್ ಮಾಡಿದ್ದೆ ಎಂದು ಇಶಾ ಸಂದರ್ಶನವೊಂದರಲ್ಲಿ ಹೇಳಿದ್ದರು. ನಂತರ, ನಾನು ನನ್ನ ಸ್ನೇಹಿತರೊಂದಿಗೆ ಹೋದಾಗ, ಟಿಮ್ಮಿ ನನ್ನ ಸ್ನೇಹಿತರ ಜೊತೆ ಬೆರೆಯುತ್ತಿದ್ದ ಎಂದು ಹೇಳಿದ್ದರು.
ಕೆಲವು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ, ಇಶಾ ಮತ್ತು ಟಿಮ್ಮಿ 2009 ರಲ್ಲಿ ವಿವಾಹವಾದರು. ಮದುವೆಯ ನಂತರ ಚಿತ್ರರಂಗದಿಂದ ದೂರ ಸರಿದಿದ್ದ ಇಶಾ ಈಗ ಚಿತ್ರರಂಗಕ್ಕೆ ಮರಳಿದ್ದಾರೆ.