ನಿಮ್ಮ ಪ್ರೆಶರ್ ಕುಕ್ಕರ್ ಹೆಚ್ಚು ಲೀಕ್ ಆಗುತ್ತಿದೆಯೇ? ಚಿಂತಿಸಬೇಡಿ ಇಲ್ಲಿದೆ ಸುಲಭ ಪರಿಹಾರ... Pressure cooker

Pressure cooker
Published on

Pressure Cooker: ಈ ಆಧುನಿಕ ಯುಗದಲ್ಲಿ ಬಹುತೇಕ ಮನೆಯಲ್ಲಿ ನಾವು ಗ್ಯಾಸ್ ಸ್ಟೌ ವ್ಯವಸ್ಥೆಯನ್ನು ನೋಡುತ್ತಿದ್ದೇವೆ. ಹೊಗೆಭರಿತ ಒಲೆಗಳಿರುವ ಮನೆಗಳು ತುಂಬಾ ವಿರಳ ಎನ್ನಬಹುದು. ಒಲೆಗಿಂತ ಬೇಗ ಗ್ಯಾಸ್​ ಸ್ಟೌ ಮೇಲೆ ಅಡುಗೆ ಮಾಡಬಹುದು. ಸುಲಭವೂ ಕೂಡ ಹೌದು. ಹೀಗಾಗಿ ಇಂದು ಪ್ರತಿ ಮನೆಯಲ್ಲೂ ಗ್ಯಾಸ್ ಒಲೆ ಇರುವುದು ಸಾಮಾನ್ಯವಾಗಿದೆ. ಆದರೆ, ಗ್ಯಾಸ್ ಒಲೆ ಇದ್ದರು ಇನ್ನೂ ಬೇಗನೆ ಅಡುಗೆ ಮಾಡಲು ಹಾಗೂ ಹೆಣ್ಣು ಮಕ್ಕಳ ಮೇಲಿನ ಕೆಲಸದ ಒತ್ತಡ ಕಡಿಮೆ ಮಾಡಲು ಪ್ರತಿ ಮನೆಯಲ್ಲಿ ಕಂಡು ಬರುವ ವಸ್ತು ಎಂದರೆ ಅದು ಪ್ರೆಶರ್ ಕುಕ್ಕರ್. ಮೂರು ವಿಜಿಲ್ ಹೊಡೆದರೆ ಸಾಕು ಅಡುಗೆ ರೆಡಿ.

ಹೌದು, ತ್ವರಿತವಾಗಿ ಮತ್ತು ಸುಲಭವಾಗಿ ಅಡುಗೆ ಮಾಡಲು ಸಹಾಯ ಮಾಡುವುದರಿಂದ ಇಂದು ಪ್ರತಿ ಅಡುಗೆ ಮನೆಯಲ್ಲಿ ಪ್ರೆಶರ್​ ಕುಕ್ಕರ್​ ಅನಿವಾರ್ಯ ವಸ್ತುವಾಗಿದೆ. ಇಂದಿನ ಅವಸರದ ಬದುಕಿನಲ್ಲಿ ಸಮಯ ಮತ್ತು ಅನಿಲವನ್ನು ಉಳಿಸಲು ಪ್ರೆಶರ್ ಕುಕ್ಕರ್ ಬಹಳ ಸಹಕಾರಿಯಾಗಿದೆ. ಆದರೆ, ಇದರ ಸರಿಯಾದ ಬಳಕೆ ಇಲ್ಲದಿದ್ದರೆ ಅಪಾಯದ ಸಂಭವವೂ ಇದೆ. ಪ್ರೆಶರ್ ಕುಕ್ಕರ್ ಸ್ಪೋಟಗೊಂಡು ಅಪಘಾತಗಳು ಸಂಭವಿಸಿರುವ ಘಟನೆಗಳಿಗೆ ಹಲವಾರು ಉದಾಹರಣೆಗಳಿವೆ. ಆದ್ದರಿಂದ ಇದನ್ನು ಬಳಸುವಾಗ ಎಚ್ಚರಿಕೆಯಿಂದ ಇರಬೇಕು.

ಅನೇಕ ಮನೆಗಳಲ್ಲಿ ಕುಕ್ಕರ್ ಸೀಟಿ ಹೊಡೆಯುವಾಗ ಅದರ ಮೇಲೆ ಮುಚ್ಚಳ ಮತ್ತು ಪಕ್ಕದಿಂದ ನೀರು ಹೊರಬರುತ್ತದೆ. ಇದೊಂದು ಸಾಮಾನ್ಯ ಸಮಸ್ಯೆಯಾಗಿದೆ. ಇದರಿಂದ ನೀರು ಗ್ಯಾಸ್ ಸ್ಟೌವ್​ಗೆ ಬೀಳುತ್ತದೆ. ಅಲ್ಲದೆ, ಸುತ್ತಮುತ್ತಲೂ ಕಲೆಗಳಾಗುತ್ತದೆ ಮತ್ತು ಸರಿಯಾಗಿ ಅಡುಗೆ ಆಗುವುದಿಲ್ಲ. ಇಂತಹ ಸಮಸ್ಯೆಗಳಿಗೆ ಉತ್ತಮ ಪರಿಹಾರ ಇಲ್ಲಿದೆ.

ಕುಕ್ಕರ್ ಮೇಲೆ ಇರುವ ರಬ್ಬರ್ ಸೀಲಿಂಗ್ ರಿಂಗ್ ಅನ್ನು ಪರಿಶೀಲಿಸಬೇಕು

ಕುಕ್ಕರ್ ಲಿಡ್​ನ ಒಳಭಾಗದಲ್ಲಿ ಇರುವ ಸೀಲಿಂಗ್​ ರಿಂಗ್​ನಲ್ಲಿ ಚೂರು ಬಿರುಕು ಅಥವಾ ಹಾಳಾಗಿದ್ದ ಸ್ಥಿತಿ ಇದ್ದರೆ ಅದು ನೀರನ್ನು ಲೀಕ್ ಮಾಡುತ್ತದೆ. ಇದರಿಂದ ಅಪಾಯ ಸಂಭವಿಸಬಹುದು. ಹಾಗಿದ್ದಲ್ಲಿ ಅದನ್ನು ತಕ್ಷಣ ಬದಲಾಯಿಸುವುದು ಉತ್ತಮ.

ಕುಕ್ಕರ್​ನ ವೆಂಟ್​ಟ್ಯೂಬ್ ಅನ್ನು ಚೆಕ್ ಮಾಡಿ

ಕೆಲವೊಮ್ಮೆ ಆಹಾರ ಕಣಗಳು ಅಥವಾ ಧೂಳು ವೆಂಟ್ ಟ್ಯೂಬ್ ಒಳಗೆ ಹೋಗಿರುವ ಸಾಧ್ಯತೆಗಳಿರುತ್ತದೆ. ಇದನ್ನು ಸ್ವಚ್ಛಗೊಳಿಸಿ ಅಥವಾ ಹಳೆಯದಾದರೆ ಹೊಸದನ್ನು ಬದಲಾಯಿಸುವುದು ಉತ್ತಮ.

ಕುಕ್ಕರ್ ಮುಚ್ಚುವ ವಿಧಾನ ಸರಿಯಾಗಿದಯೆ ಎಂದು ನೋಡಿ

ಕುಕ್ಕರ್​ನ ಲೀಡ್ ಸರಿಯಾಗಿ ಮುಚ್ಚದಿದ್ದರೆ ಅದು ಲೀಕ್ ಆಗುವುದು ಖಚಿತ. ಇದರಿಂದ ಅಪಘಾತ ಸಂಭವಿಸುತ್ತದೆ. ಲಿಡ್ ಫಿಟ್ ಆಗಿರೋದು ಬಹಳ ಮುಖ್ಯವಾಗಿರುತ್ತದೆ.

ಅತಿಯಾದ ಆಹಾರ ಹಾಕಬೇಡಿ

ಕುಕ್ಕರ್ ಅನ್ನು ಪೂರ್ಣವಾಗಿ ತುಂಬಬಾರದು. ಅದರಲ್ಲಿ ಗರಿಷ್ಠವಾಗಿ ಮೂರು-ನಾಲ್ಕು ಭಾಗದಷ್ಟು ಮಾತ್ರ ಆಹಾರ ಹಾಕಬೇಕು.

ನೀರನ್ನು ಸರಿಯಾಗಿ ಹಾಕಿ

ನೀರು ಆಹಾರದ ಮಟ್ಟದವರೆಗೆ ಮಾತ್ರ ಇರಬೇಕು. ಅಧಿಕ ನೀರ ಹಾಕಿದರು ಸಹ ಲೀಕ್ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಈ ಬಗ್ಗೆ ಗಮನ ಹರಿಸಬೇಕು.

ಪ್ರೆಶರ್ ಕುಕ್ಕರ್ ಅನ್ನು ಪ್ರತಿನಿತ್ಯ ಬಳಸುವ ಮೊದಲು ಅದರ ಎಲ್ಲಾ ಭಾಗಗಳನ್ನು ಗಮನಿಸಬೇಕು. ಇದು ನಿಮ್ಮ ಸುರಕ್ಷತೆ ಮತ್ತು ಆಹಾರದ ಗುಣಮಟ್ಟಕ್ಕೆ ಸಹಾಯ ಮಾಡುತ್ತದೆ. ಸರಿಯಾದ ಜಾಗರೂಕತೆ ವಹಿಸಿದರೆ ಸುರಕ್ಷಿತವಾಗಿ ಅಡುಗೆ ಮಾಡಬಹುದು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net