ನಿಮ್ಮ ಆಧಾರ್​ ಮತ್ತೊಬ್ಬರು ಬಳಸುತ್ತಿದ್ದಾರೆಯೇ?; ಕಂಡುಹಿಡಿಯುವುದೇಗೆ?: ಇಲ್ಲಿದೆ ಉಪಯುಕ್ತ ಮಾಹಿತಿ | Aadhaar

dk - 2025-05-26T171337.346
Published on

Aadhaar: ಇತೀಚಿನ ದಿನಗಳಲ್ಲಿ ಆನ್​​ಲೈನ್​ ಪ್ರಕರಣಗಳು ವೇಗವಾಗಿ ಹೆಚ್ಚುತ್ತೀವೆ. ಪ್ರತಿದಿನ ಯಾರದೋ ಮಾಹಿತಿ ಡೇಟಾ ಖದೀಯುವ ಕೇಸ್​ ದಾಖಲಾಗುತ್ತವೆ. ಅಲ್ಲದೆ, ಇನ್ನೊಬ್ಬರ ಆಧಾರ ಕಾರ್ಡ್​ ಬಳಸಿ ಸಾಲ ಪಡೆದು ವಂಚನೆ ಮಾಡುವುದು ಸಾಮಾನ್ಯಾವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಆಧಾರ್​ ಕಾರ್ಡ್​ ದುರುಪಯೋಗ ದೊಡ್ಡ ಉದ್ವಿಗ್ನತೆಯಾಗಿ ಪರಿಣಮಿಸಿದೆ.

ವಾಸ್ತವಾಗಿ, ಬ್ಯಾಂಕಿಂಗ್​ ಸಬ್ಸಿಡಿ ಹಾಗೂ ಸಿಮ್​ ಕಾರ್ಡ್​ ಸೇರಿದಂತೆ ಪ್ರತಿಯೊಂದು ಕೆಲಸಕ್ಕೂ ಆಧಾರ್​ ಕಾರ್ಡ್​ ಅನ್ನು ದಾಖಲೆಗಾಗಿ ಕೇಳುತ್ತಾರೆ. ನಿಮ್ಮ ಆಧಾರ್ ನಿಂದ ಯಾರಾದರೂ ಅನಗತ್ಯ ಲಾಭ ಪಡೆಯುತ್ತಿದ್ದಾರೆ ಎಂಬ ಭಯ ನಿಮಗಿದ್ದರೆ, ಭಯಪಡಬೇಡಿ. ಮನೆಯಲ್ಲಿ ಕುಳಿತುಕೊಂಡೇ ಕೆಲವೇ ಕ್ಲಿಕ್‌ಗಳಲ್ಲಿ ನಿಮ್ಮ ಆಧಾರ್ ಅನ್ನು ಎಲ್ಲಿ ಬಳಸಲಾಗಿದೆ ಎಂಬುದನ್ನು ನೀವು ಕಂಡುಹಿಡಿಯಬಹುದು.

ಆಧಾರ್ ಇತಿಹಾಸ ತಿಳಿಯೊದೇಗೆ..?

ಯುಐಡಿಎಐ ವೆಬ್​ಸೈಟ್​ಗೆ ಭೇಟಿ ನೀಡುವ ಮೂಲಕ 6 ತಿಂಗಳಲ್ಲಿ ನಿಮ್ಮ ಆಧಾರ್​ ಸಂಖ್ಯೆಯನ್ನು ಯಾವಾಗ? ಎಲ್ಲಿ ಬಳಸಲಾಗಿದೆ ಎಂಬುಂದು ನೋಡಬಹುದು.

ಈ ರೀತಿಯ ಹಂತಗಳನ್ನು ಅನುಸರಿಸಿ ಆಧಾರ್ ಬಳಕೆಯ ಬಗ್ಗೆ ತಿಳಿದುಕೊಳ್ಳಿ..

ಹಂತ 1: ಮೊದಲು UIDAI ನ ಆಧಿಕೃತ ವೆಬ್​ಸೈಟ್​ಗೆ ಹೋಗಿ

ಹಂತ 2: ಈಗ ಆಧಾರ್ ಸೇವೆಗಳ ಪಟ್ಟಿ "ಆಧಾರ್ ದೃಢೀಕರಣ ಇತಿಹಾಸ" ಕ್ಲಿಕ್ ಮಾಡಿ.

ಹಂತ 3: ಈಗ ನಿಮ್ಮ 12-ಅಂಕಿಯ ಆಧಾರ್ ಸಂಖ್ಯೆ ಮತ್ತು ವೆಬ್‌ಸೈಟ್‌ನಲ್ಲಿ ಪ್ರದರ್ಶಿಸಲಾದ ಭದ್ರತಾ ಕೋಡ್ ಅನ್ನು ನಮೂದಿಸಿ.

ಹಂತ 4: ನಂತರ "ಒಟಿಪಿ ಕಳುಹಿಸಿ" ಮೇಲೆ ಕ್ಲಿಕ್ ಮಾಡಿ. ನಿಮ್ಮ ನೊಂದಾಯಿತ ಮೊಬೈಲ್‌ಗೆ OTP ಬರುತ್ತದೆ.

ಹಂತ 5: ಒಟಿಪಿ ನಮೂದಿಸಿ ಮತ್ತು ಸಲ್ಲಿಸಿ.

ಹಂತ 6: ಈಗ ನೀವು ದೃಢೀಕರಣ ಪ್ರಕಾರ, ದಿನಾಂಕ ಶ್ರೇಣಿ ಮತ್ತು OTP ಯಂತಹ ಆಯ್ಕೆಗಳನ್ನು ಭರ್ತಿ ಮಾಡಬೇಕು.

ಹಂತ 7: ಅಂತಿಮವಾಗಿ ಪರಿಶೀಲಿಸಿ OTP ಮೇಲೆ ಕ್ಲಿಕ್ ಮಾಡಿ.

ಈಗ ನಿಮ್ಮ ಆಧಾರ್ ಅನ್ನು ಯಾವಾಗ, ಎಲ್ಲಿ ಮತ್ತು ಹೇಗೆ ಬಳಸಲಾಗಿದೆ ಎಂಬುದನ್ನು ತೋರಿಸುವ ಸಂಪೂರ್ಣ ಪಟ್ಟಿ ನಿಮ್ಮ ಮುಂದೆ ಕಾಣಿಸುತ್ತದೆ.

ದೂರು ನೀಡುವುದು ಹೇಗೆ?

ಪಟ್ಟಿಯನ್ನು ನೋಡಿದ ನಂತರ ನಿಮ್ಮ ಆಧಾರವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ನೀವು ಭಾವಿಸಿದರೆ, ಭಯಪಡಬೇಡಿ. ನೀವು ತಕ್ಷಣ ದೂರು ನೀಡಬಹುದು. ಟೋಲ್ ಫ್ರೀ ಸಂಖ್ಯೆ 1947 ಗೆ ಕರೆ ಮಾಡುವ ಮೂಲಕ ದೂರುಗಳನ್ನು ಸಲ್ಲಿಸಬಹುದು. ಇನ್ನಷ್ಟು ನೀವು help@uidai.gov.in ಗೆ ಇಮೇಲ್ ಮಾಡಬಹುದು. ನೀವು uidai.gov.in/file-complaint ಗೆ ಭೇಟಿ ನೀಡುವ ಮೂಲಕ ಆನ್‌ಲೈನ್ ದೂರು ಸಲ್ಲಿಸಬಹುದು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net