

ಮುಂಬೈ: ತನ್ನ ಡ್ರೆಸ್ಸಿಂಗ್ ಸ್ಟೈಲ್ ಮೂಲಕವೇ ಸಾಮಾಕಜಿಕ ಜಾಲತಾಣದಲ್ಲಿ ಹೊಸ ಟ್ರೆಂಡ್ ಸೃಷ್ಟಿಸುವ ಇಂಟರ್ನೆಟ್ ಸೆನ್ಸೇಷನ್ ಉರ್ಫಿ ಜಾವೇದ್ (Urfi Javed) ಸದ್ದಿಲ್ಲದೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಸದ್ಯ ಎಂಗೇಜ್ಮೆಂಟ್ನ ಫೋಟೋಗಳು ವೈರಲ್ ಆಗಿದೆ.
ಉರ್ಫಿಯನ್ನು (Urfi Javed) ಮದುವೆಯಾಗಲಿರುವ ಹುಡುಗ ಯಾರು, ಏನು ಮಾಡುತ್ತಿದ್ದಾರೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಎಂಗೇಜ್ಮೆಂಟ್ ಫೋಟೋ ನೋಡಿ ಫ್ಯಾನ್ಸ್ ಫುಲ್ ಖುಷ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
ಎಂಗೇಜ್ಮೆಂಟ್ನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದರ ಬೆನ್ನಲ್ಲೇ ಉರ್ಫಿ ಮಾರ್ಮಿಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. #EngagedRokaYaDhoka ಎಂ ಹ್ಯಾಶ್ಟ್ಯಾಗ್ನಡಿ ಈ ಪೋಸ್ಟ್ ಶೇರ್ ಮಾಡಲಾಗಿದ್ದು, ಇದು ಯಾವುದಾದರು ರಿಯಾಲಿಟಿ ಶೋನ ಪ್ರಮೋಷನ್ ಇರಬಹುದಾ ಎಂದು ಕೆಲವರು ಪ್ರಶ್ನಿಸಿದ್ದಾರೆ.
ಲಖನೌ ಮೂಲದವರಾದ ಉರ್ಫಿ ಜಾವೇದ್ (Urfi Javed) ನಟಿ, ಮಾಡೆಲ್ ಆಗಿ ಗುರುತಿಸಿಕೊಂಡಿದ್ದು, ಸೋಶಿಯಲ್ ಮೀಡಿಯಾ ಸ್ಟಾರ್ ಕೂಡ ಆಗಿದ್ದಾರೆ. ತಮ್ಮ ಚಿತ್ರ-ವಿಚಿತ್ರ ಫ್ಯಾಷನ್ ಸೆನ್ಸ್ ಮೂಲಕವೇ ಹೆಚ್ಚು ಸೌಂಡ್ ಮಾಡಿರುವ ಉರ್ಫಿ ಜಾವೇದ್ ಬಿಗ್ಬಾಸ್ ಒಟಿಟಿ, ಬಡೇ ಭೈಯಾ ಕಿ ದುಲ್ಹನಿಯಾ, ಮೇರಿ ದುರ್ಗಾ, ಬೆಪನ್ನಾ ಮತ್ತು ಕಸೌತಿ ಜಿಂದಗಿ ಕೇ ನಂತಹ ಜನಪ್ರಿಯ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ.