ಕಾಂಗ್ರೆಸ್ ಆಡಳಿತದಲ್ಲಿ ಪ್ರಜಾಪ್ರಭುತ್ವ ಇದೆಯೆ ?: ಎನ್.ರವಿಕುಮಾರ್ ಪ್ರಶ್ನೆ

MLC ravikumar
Published on

ಬೆಂಗಳೂರು: ಜಾತ್ಯತೀತ, ಪ್ರಜಾಪ್ರಭುತ್ವವಾದಿ, ಸಂವಿಧಾನ ಯಥಾವತ್ ಜಾರಿಗೊಳಿಸುವ ಸರ್ಕಾರವೆಂದು ಕಾಂಗ್ರೆಸ್ಸಿಗರು ಹೇಳಿಕೊಳ್ಳುತ್ತಾರೆ. ನಾಗಮಂಗಲ ಘಟನೆಯಲ್ಲಿ ಹಿಂದುಗಳಿಗೆ ಒಂದು ರೀತಿ, ಮುಸ್ಲಿಮರಿಗೆ ಇನ್ನೊಂದು ನೀತಿ ಅನ್ವಯಿಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಟೀಕಿಸಿದರು.

ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರಿಗೆ ಭಾನುವಾರ ಪ್ರತಿಕ್ರಿಯಿಸಿದ ಅವರು, ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾದ ದಾವೆಯಲ್ಲಿ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಬಂಧಿಸಿದ್ದು, ಇದಕ್ಕೂ ಮುನ್ನ ದಾಖಲಾದ ಇಂತಹುದೇ ಮೊಕದ್ದಮೆಯಲ್ಲಿ ಕಾಂಗ್ರೆಸ್ ಶಾಸಕ ಚನ್ನಾರಡ್ಡಿ ಅವರನ್ನು ಬಂಧಿಸಿಲ್ಲ.

ಪೊಲೀಸರು ಹುಡುಕಾಡುತ್ತಿದ್ದಾರೆ ಎಂದು ಹೇಳಲಾದ ಈ ಶಾಸಕರು ಸಿಎಂ ಮನೆಗೆ ಬಂದು ಕಾಫಿ ಕುಡಿದಿದ್ದಾರೆ. ಕಾರ್ಯಕ್ರಮಗಳಲ್ಲಿ ರಾಜಾರೋಷವಾಗಿ ಭಾಗವಹಿಸುತ್ತಿದ್ದು, ಕಾಂಗ್ರೆಸ್ ಆಡಳಿತದಲ್ಲಿ ಪ್ರಜಾಪ್ರಭುತ್ವ ಇದೆಯೆ ? ಇದ್ದರೂ ಇದೆಂತಹ ಪ್ರಜಾಪ್ರಭುತ್ವ ? ಎಂದು ಕೇಳಿದರು.

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ರಾಜ್ಯ ಸರ್ಕಾರ ಆಯೋಜಿಸಿದೆ. ಬೀದರ್‌ನಲ್ಲಿ ಮಾತ್ರ ಕಾರ್ಯಕ್ರಮಕ್ಕೆ ಪ್ರತಿಪಕ್ಷಗಳ ಶಾಸಕರನ್ನು ಆಹ್ವಾನಿಸಿದ ಮಾಹಿತಿಯಿದ್ದು, ಉಳಿದೆಡೆ ಪ್ರತಿಪಕ್ಷಗಳನ್ನು ಕಡೆಗಣಿಸಲಾಗಿದೆ.

ವಿಧಾನಸೌಧ ಮಹಾದ್ವಾರ ಮೆಟ್ಟಿಲು ಬಳಿ ಸಿಎಂ, ಸಚಿವರು, ಮತ್ತಿತರ ಗಣ್ಯರಿದ್ದ ವೇದಿಕೆ ಹಾಗೂ ಸುತ್ತುಮತ್ತ ಬಿಗಿಭದ್ರತೆ ಒದಗಿಸಲಾಗಿದೆ. ಆದರೂ ವೇದಿಕೆಗೆ ಅಪರಿಚಿತ ವ್ಯಕ್ತಿಯೊಬ್ಬ ನುಗ್ಗಿರುವುದು ಭದ್ರತೆ, ಗುಪ್ತಚರ ವೈಲ್ಯವೆಂದು ಎನ್.ರವಿಕುಮಾರ್ ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net