

ಈ ಕಣ್ಣಲ್ಲಿ ಇನ್ನೂ ಏನೇನು ನೋಡ್ಬೇಕೋ! ಎಂಬ ಡೈಲಾಗ್ ಈ ವಿಡಿಯೋ ನೋಡಿದ್ರೆ ಖಂಡಿತಾ ನಿಮಗೆ ನೆನಪಾಗುತ್ತೆ. ಈ ಸಾಮಾಜಿಕ ಜಾಲತಾಣ ಯುಗದಲ್ಲಿ ಎಲ್ಲರೂ ಫೇಮಸ್ ಆಗಬೇಕು ಎಂಬ ಉದ್ದೇಶದಿಂದ ಹುಚ್ಚುಚ್ಚಾಗಿ ವಿಡಿಯೋ ಮಾಡಿ ಹರಿಬಿಡುತ್ತಿದ್ದಾರೆ. ಒಬ್ಬರು ತಮ್ಮ ಅಡುಗೆ ಕೋಣೆಯನ್ನು ತೋರಿಸಿದರೆ, ಕೆಲವರು ತಮ್ಮ ಬಾತ್ರೂಮ್ ತೋರಿಸುತ್ತಾರೆ. ಅದೇ ರೀತಿ ಫ್ರಿಡ್ಜ್, ವಾಷಿಂಗ್ ಮೆಶಿನ್ ಸಹ ತೋರಿಸುತ್ತಾರೆ.
ಕೆಲವರಂತೂ ಟ್ಯಾಲೆಂಟ್ ಹೆಸರಿನಲ್ಲಿ ಅಸಭ್ಯ ವಿಡಿಯೋ ಮಾಡಿ ಎಕ್ಸ್ಪೋಸ್ ಮಾಡುತ್ತಿದ್ದಾರೆ. ಬೆಡ್ರೂಮಿನಲ್ಲಿ ನಡೆಯುವ ಅತ್ಯಂತ ರಹಸ್ಯ ವಿಚಾರಗಳನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಲಾಗುತ್ತಿದೆ. ಇತ್ತೀಚೆಗೆ ನವದಂಪತಿ, ಸಿಂಗರಿಸಿದ ತಮ್ಮ ಹನಿಮೂನ್ ( Honeymoon ) ಕೋಣೆಯಲ್ಲಿ ಕುಳಿತು ಸಂಭ್ರಮಾಚರಣೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಆನೆ ಸೊಂಡಿಲು ಅಂತ ಕನ್ಫ್ಯೂಸ್ ಆಗ್ಬೇಡಿ ಇದೊಂದು ಹಾವು! ಇದರ ಬಗ್ಗೆ ತಿಳಿದ್ರೆ ನಿಮ್ಮ ಹುಬ್ಬೇರುತ್ತೆ | Elephant trunk snake ವಿಡಿಯೋದಲ್ಲಿ ಏನಿದೆ? ವೈರಲ್ ಆಗಿರುವ ವಿಡಿಯೋದಲ್ಲಿ ನವದಂಪತಿಯ ಹನಿಮೂನ್ ಕೋಣೆಯನ್ನು ಮೊದಲು ತೋರಿಸಲಾಗಿದೆ. ರೂಮಿನ ಒಳಗೆ ಸುಂದರವಾದ ಹೂವುಗಳಿಂದ ಅಲಂಕರಿಸಲ್ಪಟ್ಟ ಹಾಸಿಗೆ ಇದೆ. ಟೇಬಲ್ ಮೇಲೆ ಹಣ್ಣು, ಹಾಲು, ಕೇಕ್ ಮತ್ತು ದುಬಾರಿ ಶಾಂಪೇನ್ ಕೂಡ ಇದೆ. ವಧು ತನ್ನ ಎರಡೂ ಕೈಗಳಿಂದ ಮುಖವನ್ನು ಮುಚ್ಚಿ, ನಾಚಿಕೊಳ್ಳುತ್ತಾ ನಗುತ್ತಿರುವ ದೃಶ್ಯವೂ ಇದೆ. ಬಳಿಕ ದಂಪತಿ ಕೇಕ್ ಕತ್ತರಿಸಿ, ಒಬ್ಬರಿಗೊಬ್ಬರು ತಿನ್ನಿಸುವುದನ್ನು ನೋಡಬಹುದು. ನಂತರ ಶಾಂಪೇನ್ ಡ್ರಿಂಕ್ಸ್ ಸವಿಯುತ್ತಾರೆ. ಕೊನೆಯಲ್ಲಿ ತಮ್ಮ ಹಾಸಿಗೆ ಪಕ್ಕದಲ್ಲಿ ನಿಂತು ಇಬ್ಬರು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.
ಶಾನ್ಮಿತ್ರ ಎಂಬುವರು ತಮ್ಮ ಇನ್ಸ್ಟಾಗ್ರಾಂನಲ್ಲಿ 2023ರ ಡಿಸೆಂಬರ್ 31ರಂದು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಮನಾಲಿಯಲ್ಲಿ ಹನಿಮೂನ್ ಎಂದು ಬರೆದುಕೊಂಡಿದ್ದಾರೆ. ಇದೀಗ ಈ ವಿಡಿಯೋ ಮತ್ತೆ ವೈರಲ್ ಆಗಿದ್ದು, ಈವರೆಗೂ 1.4 ಮಿಲಿಯನ್ ಮಂದಿ ವೀಕ್ಷಣೆ ಮಾಡಿದ್ದಾರೆ. 23 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ.
ಈ ವಿಡಿಯೋ ನೋಡಿದ ನೆಟ್ಟಿಗರು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಈ ರೀತಿಯ ವೈಯಕ್ತಿಕ ವಿಚಾರವನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದು ಸರಿಯೇ ಎಂದು ಪ್ರಶ್ನೆ ಮಾಡುತ್ತಿದ್ದಾರೆ. (ಏಜೆನ್ಸೀಸ್)