ಹೆಚ್ಚಿನ ತೆರಿಗೆ ವಿಧಿಸುವ ಮೂಲಕ ಕೇಂದ್ರ ಸರ್ಕಾರವು ಸ್ಲೀಪಿಂಗ್​ ಪಾರ್ಟನರ್​ ಆಗಿದೆಯೇ?: ಈ ಪ್ರಶ್ನೆಗೆ ಹಣಕಾಸು ಸಚಿವರು ಉತ್ತರಿಸಿದ್ದೇನು?

nirmala-1
Published on

ಮುಂಬೈ: ಸ್ಟಾಕ್ ಮಾರ್ಕೆಟ್ ಬ್ರೋಕರ್‌ಗಳು ಮತ್ತು ರಿಯಲ್ ಎಸ್ಟೇಟ್ ವಹಿವಾಟುಗಳ ಮೇಲೆ ಹೇರಿರುವ ಹೆಚ್ಚಿನ ತೆರಿಗೆಗಳ ಭಾರದ ಬಗ್ಗೆ ಆತಂಕ ವ್ಯಕ್ತಪಡಿಸುವ ಮುಜುಗರದ ಪ್ರಶ್ನೆಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರ ನಡೆದ ಬಿಎಸ್‌ಇ (ಬಾಂಬೆ ಸ್ಟಾಕ್​ ಎಕ್ಸ್​ಚೇಂಜ್​) ಸಮಾರಂಭದಲ್ಲಿ ಎದುರಿಸಿದರು.

ಸಿಜಿಎಸ್‌ಟಿ, ಎಸ್‌ಟಿಟಿ, ದೀರ್ಘಾವಧಿಯ ಬಂಡವಾಳ ಲಾಭ ತೆರಿಗೆಯಂತಹ ವಿವಿಧ ತೆರಿಗೆಗಳಿಂದ ಕೇಂದ್ರ ಸರ್ಕಾರವು ಹೆಚ್ಚಿನ ಹಣವನ್ನು ಗಳಿಸುತ್ತಿದ್ದು, ಈ ಮೂಲಕ ಸರ್ಕಾರವು ನಮ್ಮ 'ಸ್ಲೀಪಿಂಗ್ ಪಾರ್ಟನರ್​' ಎಂದು ಬ್ರೋಕರ್ ಒಬ್ಬರು ಲೇವಡಿ ಮಾಡಿದರು.

"ನಾನು ಎಲ್ಲವನ್ನೂ ಹೂಡಿಕೆ ಮಾಡುತ್ತಿದ್ದೇನೆ. ನಾನು ಸಂಪೂರ್ಣ ಅಪಾಯ ತೆಗೆದುಕೊಳ್ಳುತ್ತಿದ್ದೇನೆ. ಭಾರತ ಸರ್ಕಾರವು ನನ್ನ ಸಂಪೂರ್ಣ ಲಾಭವನ್ನು ತೆಗೆದುಕೊಳ್ಳುತ್ತಿದೆ. ಭಾರತ ಸರ್ಕಾರವು ನನ್ನ ಸ್ಲೀಪಿಂಗ್​ ಪಾರ್ಟನರ್​ ಆಗಿರುವಾಗ ಮತ್ತು ನಾನು ತೆರಿಗೆಗಳ ಹೊರೆಯೊಂದಿಗೆ ಯಾವುದೇ ಲಾಭವಿಲ್ಲದೆ ವರ್ಕಿಂಗ್​ ಪಾರ್ಟನರ್​ ಆಗಿ ಹೇಗೆ ಕಾರ್ಯನಿರ್ವಹಿಸಲು ಸಾಧ್ಯ" ಎಂದು ಅವರು ಹಣಕಾಸು ಸಚಿವರನ್ನು ಪ್ರಶ್ನಿಸಿದರು.

ಮನೆ ಖರೀದಿಸುವಾಗ ಅಪಾರ ತೆರಿಗೆ ಹೊರೆ ಇರುವುದನ್ನು ಈ ದಲ್ಲಾಳಿಯು ಸಚಿವರ ಗಮನಕ್ಕೆ ತಂದರು.

"ಸರ್ಕಾರವು ಮನೆ ಖರೀದಿಯಿಂದ ನಗದು ಭಾಗವನ್ನು ತೆಗೆದುಹಾಕಿದೆ. ಪ್ರಸ್ತುತ ದಿನಗಳಲ್ಲಿ, ಮುಂಬೈ ರೀತಿಯ ಸ್ಥಳದಲ್ಲಿ ಮನೆ ಖರೀದಿಸುವುದು ದುಃಸ್ವಪ್ನವಾಗಿದೆ. ಏಕೆಂದರೆ ನಾನು ತೆರಿಗೆ ಪಾವತಿಸುತ್ತಿದ್ದೇನೆ ಮತ್ತು ನನ್ನ ಬಳಿ ಬಿಳಿ ಹಣವಿದೆ. ಈಗ ನಾವು ಎಲ್ಲವನ್ನೂ ಚೆಕ್‌ನಲ್ಲಿ ಪಾವತಿಸಬೇಕಾಗಿದೆ. ಈಗ ನಾನು ಮತ್ತೆ ಮನೆ ಖರೀದಿಸಲು ಹೋಗುವಾಗ ನಾನು ಸ್ಟಾಂಪ್ ಡ್ಯೂಟಿ, ಜಿಎಸ್‌ಟಿ ಪಾವತಿಸಬೇಕು. ಅದು ಶೇಕಡಾ 11 ರಷ್ಟಿದೆ" ಎಂದು ಅವರು ಗೋಳು ತೋಡಿಕೊಂಡರು. ಸೀಮಿತ ಸಂಪನ್ಮೂಲಗಳನ್ನು ಹೊಂದಿರುವ ವ್ಯಕ್ತಿಗೆ ಮನೆ ಖರೀದಿಸಲು ಹಣಕಾಸು ಸಚಿವರು ಹೇಗೆ ಸಹಾಯ ಮಾಡುತ್ತಾರೆ ಎಂದು ಅವರು ಕೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸೀತಾರಾಮನ್, "ಸ್ಲಿಪಿಂಗ್​ ಪಾರ್ಟನರ್​ ಇಲ್ಲಿ ಕುಳಿತು ಉತ್ತರಿಸಲು ಸಾಧ್ಯವಿಲ್ಲ" ಎಂದು ಹೇಳಿದರು.

ಷೇರು ಮಾರುಕಟ್ಟೆಯಲ್ಲಿ ಮಧ್ಯಮ ವರ್ಗದ ಹೂಡಿಕೆದಾರರ ಪರವಾಗಿ ಮಾತನಾಡಿದ ಸೀತಾರಾಮನ್ ಅವರು, ಚಿಲ್ಲರೆ ಫ್ಯೂಚರ್ಸ್ ಮತ್ತು ಆಯ್ಕೆ (ರಿಟೇಲ್​ ಫ್ಯೂಚರ್​ ಆ್ಯಂಡ್​ ಆಪ್ಷನ್​) ವ್ಯಾಪಾರದಲ್ಲಿ 'ಪರಿಶೀಲಿಸದ ಸ್ಫೋಟ'ವು ಮಾರುಕಟ್ಟೆಗಳು ಮತ್ತು ಮನೆಯ ಹಣಕಾಸುಗಳಿಗೆ ಸವಾಲುಗಳನ್ನು ಉಂಟು ಮಾಡಬಹುದು ಎಂದು ಹೇಳಿದರು.

"ಫ್ಯೂಚರ್​ ಆ್ಯಂಡ್​ ಆಪ್ಷನ್ಸ್​ ಚಿಲ್ಲರೆ ವ್ಯಾಪಾರದಲ್ಲಿ ಯಾವುದೇ ಅನಿಯಂತ್ರಿತ ಸ್ಫೋಟವು ಭವಿಷ್ಯದ ಸವಾಲುಗಳನ್ನು ಸೃಷ್ಟಿಸಬಹುದು. ಮಾರುಕಟ್ಟೆಗಳಿಗೆ ಮಾತ್ರವಲ್ಲ, ಹೂಡಿಕೆದಾರರ ಭಾವನೆಗಳಿಗೆ ಮತ್ತು ಮನೆಯ ಹಣಕಾಸುಗಳಿಗೆ ಸಹ" ಎಂದು ಸೀತಾರಾಮನ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net