ಭಾರತೀಯ ವಲಸಿಗರ ವಿರುದ್ಧ ಹೆಚ್ಚುತ್ತಿರುವ ದಾಳಿಯನ್ನು ಖಂಡಿಸಿದ ಐರಿಶ್ ಅಧ್ಯಕ್ಷ | Indian immigrants

Irish President
Published on: 

Indian immigrants: ಇತ್ತೀಚಿನ ದಾಳಿಗೊಳಗಾದ ಆರು ವರ್ಷದ ಭಾರತೀಯ ಬಾಲಕಿಯ ಮೇಲೆ ಮಕ್ಕಳ ಗುಂಪೊಂದು ಹಲ್ಲೆ ನಡೆಸಿ, ಆಕೆಯ ಖಾಸಗಿ ಭಾಗಗಳಿಗೆ ಹೊಡೆದಿದ್ದ ಘಟನೆಯನ್ನು ಐರಿಶ್ ಅಧ್ಯಕ್ಷ ಮೈಕೆಲ್ ಡಿ ಹಿಗ್ಗಿನ್ಸ್ ಖಂಡಿಸಿದ್ದಾರೆ.

ಭಾರತೀಯರನ್ನು ಗುರಿಯಾಗಿಸಿಕೊಂಡು ನಡೆದ ಸರಣಿ ದಾಳಿಗಳು ಸುದ್ದಿಯಾದ ನಂತರ ಪ್ರತಿಕ್ರಿಯಿಸಿರುವ ಹಿಗ್ಗಿನ್ಸ್, ವೈದ್ಯಕೀಯ, ನರ್ಸಿಂಗ್, ಸಾಂಸ್ಕೃತಿಕ ಜೀವನ, ವ್ಯವಹಾರ ಮತ್ತು ಉದ್ಯಮದಲ್ಲಿ ಐರಿಶ್ ಜೀವನದ ಹಲವು ಅಂಶಗಳಿಗೆ ಭಾರತೀಯ ಸಮುದಾಯ ನೀಡಿರುವ ಮತ್ತು ನೀಡುತ್ತಿರುವ ಅಪಾರ ಕೊಡುಗೆಯನ್ನು ನಾವೆಲ್ಲರೂ ನೆನಪಿಸಿಕೊಳ್ಳುತ್ತೇವೆ. ಭಾರತೀಯರ ಉಪಸ್ಥಿತಿ, ಕೆಲಸ, ಸಂಸ್ಕೃತಿ, ನಮ್ಮ ಹಂಚಿಕೆಯ ಜೀವನದ ಪುಷ್ಟೀಕರಣ ಮತ್ತು ಔದಾರ್ಯದ ಮೂಲವಾಗಿದೆ ಎಂದು ತಿಳಿಸಿದ್ದಾರೆ.

ಅಲ್ಲದೆ, ಭಾರತೀಯ ಸಮುದಾಯದ ಸದಸ್ಯರ ಮೇಲೆ ಇತ್ತೀಚೆಗೆ ನಡೆದಿರುವ ಹೇಯ ದಾಳಿಗಳು ನಾವು ಗೌರವಿಸುವ ಮೌಲ್ಯಗಳಿಗೆ ಸಂಪೂರ್ಣ ವಿರುದ್ಧವಾಗಿದೆ. ಐರ್ಲೆಂಡ್‌ನಲ್ಲಿರುವ ಯಾವುದೇ ವ್ಯಕ್ತಿ, ವಿಶೇಷವಾಗಿ ಯಾವುದೇ ಯುವಕ ಪ್ರಚೋದನೆಯ ಮೂಲಕ ಇಂತಹ ನಡವಳಿಕೆಗೆ ಎಳೆಯಲ್ಪಡುವುದನ್ನು ನಿಸ್ಸಂದಿಗ್ಧವಾಗಿ ಖಂಡಿಸಬೇಕು ಎಂದು ಮೈಕೆಲ್ ಡಿ ಹಿಗ್ಗಿನ್ಸ್ ಸ್ಪಷ್ಟಪಡಿಸಿದ್ದಾರೆ.

ಮುಂದುವರೆದು ಮಾತನಾಡಿದ ಐರೀಶ್​ ಅಧ್ಯಕ್ಷ, ಅಂತಹ ಪ್ರಚೋದನೆಯು ಅಜ್ಞಾನದಿಂದ ಉಂಟಾಗಿದೆ. ಇದು ಉಂಟು ಮಾಡುತ್ತಿರುವ ಹಾನಿಯನ್ನು ಒಪ್ಪಿಕೊಳ್ಳುವುದು ಅತ್ಯಗತ್ಯ. ಇಂತಹ ಕೃತ್ಯಗಳನ್ನು ಕಡಿಮೆ ಮಾಡುತ್ತವೆ ಮತ್ತು ಭಾರತದ ಜನರು ಈ ದೇಶಕ್ಕೆ ತಂದಿರುವ ಅಪಾರ ಪ್ರಯೋಜನಗಳನ್ನು ಮರೆಮಾಡುತ್ತದೆ ಎಂದು ತಿಳಿಸಿದ್ದಾರೆ.

ಐರ್ಲೆಂಡ್‌ನಲ್ಲಿ ಭಾರತೀಯರ ಮೇಲಿನ ದಾಳಿ ಹೆಚ್ಚಳ

ಕಳೆದ ಒಂದು ತಿಂಗಳಿನಿಂದ ಐರ್ಲೆಂಡ್‌ನಲ್ಲಿ ಭಾರತೀಯರ ವಿರುದ್ಧ ಜನಾಂಗೀಯ ದಾಳಿಗಳು ಹೆಚ್ಚಾಗಿವೆ. ಭಾರತೀಯ ಪ್ರಜೆಗಳ ಮೇಲಿನ ದಾಳಿಗಳಾಗಿದ್ದು, ಡಬ್ಲಿನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ತನ್ನ ನಾಗರಿಕರಿಗೆ ಸಲಹಾ ಮತ್ತು ತುರ್ತು ಸಹಾಯವಾಣಿ ಸಂಖ್ಯೆಗಳನ್ನು ನೀಡಲು ಮುಂದಾಗಿದೆ.(ಏಜೆನ್ಸೀಸ್​)