

ಟೆಹರಾನ್/ಟೆಲ್ಅವೀವ್: ಶುಕ್ರವಾರ ಆರಂಭವಾದ ಇಸ್ರೇಲ್-ಇರಾನ್ ಸಂಘರ್ಷ ಇನ್ನಷ್ಟು ತೀವ್ರಗೊಂಡಿದ್ದು, ಶನಿವಾರ ಇಸ್ರೇಲ್ ರಾಜಧಾನಿ ಟೆಲ್ ಅವೀವ್ ಮೇಲೆ ಇರಾನ್ ಭಾರಿ ವೈಮಾನಿಕ ದಾಳಿ ನಡೆಸಿದೆ. ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಕೇಂದ್ರ ಕಚೇರಿ ಕೂಡ ದಾಳಿಗೆ ಒಳಗಾಗಿದೆ. ಇರಾನ್ ಮಿಲಿಟರಿಯ ಇನ್ನೂ ಇಬ್ಬರು ಉನ್ನತ ಅಧಿಕಾರಿಗಳು ಹತರಾಗಿದ್ದು ಇಸ್ರೇಲಿ ದಾಳಿಗೆ ಬಲಿಯಾದ ಅಧಿಕಾರಿಗಳ ಸಂಖ್ಯೆ ಐದಕ್ಕೆ ಏರಿದೆ. ಸಶಸ್ತŠ ಪಡೆಗಳ ಗುಪ್ತದಳದ ಉಪ ಮುಖ್ಯಸ್ಥ ಘೋಲಾಮ್ರೆಜ್ ಮೆಹ್ರಾಬಿ ಮತ್ತು ಕಾರ್ಯåಚರಣೆಗಳ ಉಪ ಮುಖ್ಯಸ್ಥ ಮೆಹ್ದಿ ರಬ್ಬಾನಿ ಮೖತಪಟ್ಟಿದ್ದಾರೆಂದು ಇರಾನ್ನ ಸರ್ಕಾರಿ ಟೆಲಿವಿಜನ್ ವರದಿ ಮಾಡಿದೆ. ಇಪ್ಪತ್ತನಾಲ್ಕು ಗಂಟೆ ಅವಧಿಯಲ್ಲಿ ಇಸ್ರೇಲ್ ನಡೆಸಿದ ಎರಡು ದಾಳಿಗಳಿಗೆ ಪ್ರತೀಕಾರವಾಗಿ ಇರಾನ್ ಆಕ್ರಮಣದ ಅಲೆಯನ್ನೇ ಎಬ್ಬಿಸಿತು.
ಇರಾನ್ ಅಣ್ವಸ್ತ್ರ ಅಭಿವೖದ್ಧಿಪಡಿಸುವುದನ್ನು ತಡೆಯುವ ಉದ್ದೇಶದಿಂದ ಇಸ್ರೇಲ್ ಶುಕ್ರವಾರ ದಾಳಿ ನಡೆಸಿದ ನಂತರ ಉಭಯ ದೇಶಗಳು ಪರಸ್ಪರ ಆಕ್ರಮಣದಲ್ಲಿ ತೊಡಗಿದ್ದು, ಮಧ್ಯಪ್ರಾಚ್ಯದಲ್ಲಿ ಪೂರ್ಣ ಪ್ರಮಾಣದ ಸಮರ ಸ್ಪೋಟಗೊಳ್ಳುವ ಆತಂಕ ಸೖಷ್ಟಿಯಾಗಿದೆ. ಇಸ್ರೇಲಿ ಸೇನೆ ಇರಾನ್ ಮೇಲೆ ಶನಿವಾರ ಮೂರನೇ ಸುತ್ತಿನ ದಾಳಿ ನಡೆಸಿದ್ದು ರಾಜಧಾನಿ ಟೆಹರಾನ್ನ ಹಲವು ಭಾಗಗಳಲ್ಲಿ ಸ್ಫೋಟ ಸಂಭವಿಸಿವೆ.
ಟೆಲ್ ಅವೀವ್ ಮೇಲೆ ಇರಾನಿ ಕ್ಷಿಪಣಿ ಮತ್ತು ರಾಕೆಟ್ಗಳ ಸುರಿಮಳೆಯಾಗಿದ್ದು ಜೆರುಸಲೇಂ ಮತ್ತು ಇಸ್ರೇಲ್ನ ಇತರ ಭಾಗಗಳಲ್ಲಿ ಕೂಡ ಸ್ಪೋಟದ ಸದ್ದು ಕೇಳಿಬಂದಿದೆ.
78 ಸಾವು: ಇಸ್ರೆಲ್ ದಾಳಿಗಳಿಂದ ಒಟ್ಟು 78 ಜನರು ಮೃತರಾಗಿ 320ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆಂದು ವಿಶ್ವಸಂಸ್ಥೆಯ ಇರಾನ್ ರಾಯಭಾರಿ ತಿಳಿಸಿದ್ದಾರೆ.
ಇಸ್ರೇಲ್ ವೈಫಲ್ಯ
ಇರಾನಿ ಕ್ಷಿಪಣಿಯೊಂದು ಇಸ್ರೇಲ್ನ ಆಗಸ ರಕ್ಷಣಾ ಕವಚವಾದ ಐರನ್ ಡೋಮ್ನ್ನು ಉಲ್ಲಂಘಿಸಿ ಐಡಿಎಫ್ ಕೇಂದ್ರ ಕಾರ್ಯåಲಯದ ಮೇಲೆ ದಾಳಿ ನಡೆಸಿದ್ದು 19 ಸೆಕೆಂಡ್ನ ವಿಡಿಯೋ ಕ್ಲಿಪ್ನಲ್ಲಿ ಕಾಣಿಸಿದೆ. ಇದು ಐರನ್ ಡೋಮ್ ವ್ಯವಸ್ಥೆಯ ವೈಫಲ್ಯವನ್ನು ತೋರಿಸುತ್ತದೆ. ಕ್ಷಿಪಣಿಗಳ ಸುರಿಮಳೆಯಿಂದ ಇಸ್ರೇಲ್ ಅನ್ನು ರಕ್ಷಿಸುವ ವ್ಯವಸ್ಥೆ ಐರನ್ ಡೋಮ್
ಉಪ್ಪಿನಂಗಡಿ (ದ.ಕ.): ಇರಾನ್ ಪ್ರತಿದಾಳಿ ಪರಿಣಾಮ, ಇಸ್ರೇಲ್ನಾದ್ಯಂತ ಹೈಅಲರ್ಟ್ ಸ್ಥಿತಿ ಇದೆ. ವೈರಿ ರಾಷ್ಟ್ರದ ಆಕ್ರಮಣಗಳು ನಡೆಯುತ್ತಿದ್ದಂತೆಯೇ ಸೈರನ್ಗಳು ಮೊಳಗಿದಾಗ ಬಂಕರ್ ಒಳಗೆ ಆಶ್ರಯ ಪಡೆಯುತ್ತಿದ್ದೇವೆ ಎಂದು ಪ್ರಸಕ್ತ ಇಸ್ರೇಲ್ನಲ್ಲಿರುವ ಉಪ್ಪಿನಂಗಡಿ ಮೂಲದ ನಿವಾಸಿ ಅರುಣ್ ಗಾಡ್ವಿನ್ ಮಿನೆಜಸ್ ತಿಳಿಸಿದ್ದಾರೆ.
ಇಸ್ರೇಲ್ ಅಭೇದ್ಯವಾದ ವಾಯು ರಕ್ಷಣಾ ವ್ಯವಸ್ಥೆ ಹೊಂದಿದೆ. ಆದರೂ, ಭಾರಿ ಪ್ರಮಾಣದಲ್ಲಿ ದಾಳಿ ನಡೆಸಿದಾಗ ಕೆಲವೊಂದು ಮಿಸೈಲ್ಗಳು ಅಪ್ಪಳಿಸುತ್ತಿವೆ. ಕಳೆದ ರಾತ್ರಿ ಟೆಲ್ ಅವೀವ್ನ ನಮ್ಮ ಮನೆಯ ಸಮೀಪದಲ್ಲೇ ಕ್ಷಿಪಣಿ ಅಪ್ಪಳಿಸಿತ್ತು. ದೊಡ್ಡದಾದ ಶಬ್ದ ಕೇಳಿಸಿ ಭಯದಿಂದ ಶೆಲ್ಟರ್ನಿಂದ ಹೊರಗೆ ಬಂದಿದ್ದೆವು. ಕಳೆದ ರಾತ್ರಿ ಮೂರು ಬಾರಿ ಸೈರನ್ ಮೊಳಗಿದ್ದು, ಮನೆ ಸಮೀಪದ ಬಂಕರ್ನಲ್ಲಿ ರಕ್ಷಣೆ ಪಡೆದಿದ್ದೇವೆ. ಅಂಗಡಿಗಳು ಮುಚ್ಚಿದೆ. ಬಸ್ ಸಂಚಾರ ಸ್ಥಗಿತಗೊಂಡಿದೆ. ಹೊರಗಡೆ ಸುತ್ತಾಡುವಂತಿಲ್ಲ. ಸದ್ಯಕ್ಕೆ ಇಸ್ರೇಲ್ನ ಸಶಕ್ತ ಸೈನ್ಯದಿಂದಾಗಿ ಸುರಕ್ಷಿತವಾಗಿ ದ್ದೇವೆ ಎಂದು ಅವರು ವಿವರಿಸಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಇಸ್ರೇಲ್-ಹಮಾಸ್ ಕಾಳಗ ನಡೆಯುತ್ತಿರುವಾಗಲೇ ಇರಾನ್ ಮತ್ತು ಇಸ್ರೇಲ್ ನಡುವೆ ಉದ್ಭವಿಸಿರುವ ಸಂಘರ್ಷದ ಪರಿಣಾಮ ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಪೂರ್ಣ ಪ್ರಮಾಣದ ಯುದ್ಧ ಸ್ಪೋಟಗೊಂಡು ಅದು ಜಾಗತಿಕ ಮಿಲಿಟರಿ ಸಂಘರ್ಷಕ್ಕೆ ಎಡೆ ಕೊಡುವ ಅಪಾಯ ಪ್ರಮುಖ ಸಂಭಾವ್ಯ ಪರಿಣಾಮಗಳಲ್ಲಿ ಸೇರಿವೆ.
ಇಸ್ರೇಲ್ ಮೇಲಿನ ಕ್ಷಿಪಣಿ ದಾಳಿಗಳನ್ನು ನಿಲ್ಲಿಸದಿದ್ದರೆ ಇರಾನ್ ರಾಜಧಾನಿ ‘ಟೆಹರಾನ್ ಹೊತ್ತಿ ಉರಿದೀತು’ ಎಂದು ಇಸ್ರೇಲಿ ರಕ್ಷಣಾ ಸಚಿವ ಕಟ್ಜ್ ಎಚ್ಚರಿಕೆ ನೀಡಿದ್ದಾರೆ.
ಇರಾನ್ ಮಿಲಿಟರಿಯ ಹಲವು ಪ್ರಮುಖರು ಇಸ್ರೇಲ್ ದಾಳಿಗಳಲ್ಲಿ ಹತರಾಗಿರುವುದರಿಂದ ಮೇಜರ್ ಜನರಲ್ ಅಮೀರ್ ಹತಾಮಿಯನ್ನು ಸೇನೆಯ ನೂತನ ಮುಖ್ಯ ಕಮಾಂಡರ್ ಆಗಿ ಸವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಶನಿವಾರ ನೇಮಿಸಿದ್ದಾರೆ.