ರೈಸಿ ಸಾವಿನ ಬೆನ್ನಲ್ಲೇ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ! 6 ಅಭ್ಯರ್ಥಿಗಳನ್ನು ಅನುಮೋದಿಸಿದ ಇರಾನ್

Untitled design (74)
Published on

ತೆಹ್ರಾನ್: ಕಳೆದ ತಿಂಗಳು ಮೇ.19ರಂದು ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಪ್ರಯಾಣಿಸುತ್ತಿದ್ದ ಬೆಂಗಾವಲು ಪಡೆ ಹೆಲಿಕಾಪ್ಟರ್‌ಗಳ ಪೈಕಿ ಒಂದು ಪತನಗೊಂಡಿದ್ದರಿಂದ ಅಪಘಾತದಲ್ಲಿ ರೈಸಿ ಮೃತಪಟ್ಟರು. ಇದೀಗ ರೈಸಿ ಸಾವಿನ ನಂತರ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು 6 ಅಭ್ಯರ್ಥಿಗಳನ್ನು ಇರಾನ್ ಅನುಮೋದಿಸಿದೆ.

ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ ಅಧ್ಯಕ್ಷ ಇಬ್ರಾಹಿಂ ರೈಸಿ ಅವರ ಸ್ಥಾನಕ್ಕೆ ಜೂನ್ 28ರಂದು ನಡೆಯಲಿರುವ ಚುನಾವಣೆಗೆ ಅನುಮೋದಿಸಿದ ಆರು ಅಭ್ಯರ್ಥಿಗಳನ್ನು ಇದೀಗ ಇರಾನ್ ಅಧಿಕೃತವಾಗಿ ಘೋಷಿಸಿದೆ. ಈ ಪೈಕಿ ಇರಾನ್​ನ ಮಾಜಿ ಆಂತರಿಕ ಸಚಿವ ಮೊಸ್ತಫಾ ಪುರ್ಮೊಹಮ್ಮದಿ ಕೂಡ ಸ್ಪರ್ಧಿಸಲು ಅಧಿಕಾರ ಪಡೆದಿದ್ದಾರೆ.

ಅನುಮೋದಿಸಲ್ಪಟ್ಟ ಅಭ್ಯರ್ಥಿಗಳಲ್ಲಿ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಗರ್ ಗಲಿಬಾಫ್ ಮತ್ತು ಅಲ್ಟ್ರಾಕನ್ಸರ್ವೇಟಿವ್ ಮಾಜಿ ಸಮಾಲೋಚಕ ಸಯೀದ್ ಜಲಿಲಿ ಕೂಡ ಸೇರಿದ್ದಾರೆ. ಈ ಹಿಂದೆ 2017 ಮತ್ತು 2021ರಲ್ಲಿ ಅಧ್ಯಕ್ಷ ರೇಸ್‌ಗೆ ಪ್ರವೇಶಿಸಲು ಅನರ್ಹರಾಗಿದ್ದ ಮಾಜಿ ಅಧ್ಯಕ್ಷ ಮಹಮೂದ್ ಅಹ್ಮದಿನೆಜಾದ್ ಅವರನ್ನು ಮತ್ತೊಮ್ಮೆ ಪಟ್ಟಿಯಿಂದ ಹೊರಗಿಡಲಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net