ದೇಶಕ್ಕಾಗಿ ಶ್ರಮಿಸಿದವರ ಪರಿಚಯಿಸಿ

bjp
ಕೋಲಾರ ನಗರದಲ್ಲಿ ಬಿಜೆಪಿಯಿಂದ ಗಾಂಧಿ ಹಾಗೂ ಲಾಲ್​ ಬಹದೂರ್​ ಶಾಸ್ತ್ರಿ ಜಯಂತಿಯನ್ನು ಆಚರಿಸಲಾಯಿತು. ಓಂಶಕ್ತಿ ಚಲಪತಿ, ಬಿ.ವಿ.ಮಹೇಶ್​ ಇದ್ದರು.
Published on

ಕೋಲಾರ: ದೇಶಕ್ಕಾಗಿ ಶ್ರಮಿಸಿದ ಗಣ್ಯರ ಸಾಧನೆಯ ಬಗ್ಗೆ ಯುವ ಪೀಳಿಗೆಗೆ ಅರಿವು ಮೂಡಿಸುವ ಕೆಲಸ ಆಗಬೇಕು. ಆಗ ಮಾತ್ರ ಮುಂದಿನ ಪೀಳಿಗೆಯವರು ಸಮಾಜಕ್ಕೆ ಕೊಡುಗೆ ನೀಡುವ ದಾರಿಯಲ್ಲಿ ಸಾಗಲು ಸಾಧ್ಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಹೇಳಿದರು.

ಜಿಲ್ಲಾ ಬಿಜೆಪಿವತಿಯಿಂದ ಗಾಂಧೀಜಿ ಹಾಗೂ ಲಾಲ್​ಬಹಾದೂರ್​ ಶಾಸ್ತ್ರಿ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿ, ಗಾಂಧೀಜಿ ಸೇರಿ ಹಲವು ಮಂದಿ ಪ್ರಾಣ ತ್ಯಾಗದಿಂದ ದೇಶಕ್ಕೆ ಸ್ವಾತಂತ್ರ$್ಯ ಬಂದಿದೆ. ಅದೇ ಹಾದಿರಲ್ಲಿ ನರೇಂದ್ರ ಮೋದಿ ಅವರು ದೇಶಕ್ಕಾಗಿ ಜೀವವನ್ನು ಮುಡುಪಾಗಿಟ್ಟಿದ್ದಾರೆ ಎಂದು ಸ್ಮರಿಸಿದರು.

ಸೆ.17ರಿಂದ ಇಂದಿನವರೆಗೂ ಸೇವಾ ಪಾಕ್ಷಿಕ ಅಡಿ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ರಕ್ತದಾನ, ಸ್ವಚ್ಛತೆ, ಆರೋಗ್ಯ ತಪಾಸಣೆ, ಕಲ್ಯಾಣಿ, ಬಸ್​ ನಿಲ್ದಾಣ ಸ್ವಚ್ಛತೆ ಸೇರಿ 400ಕ್ಕೂ ಹೆಚ್ಚು ಕಾರ್ಯಕ್ರಮ ನಡೆಸಿದ್ದೆವೆ. ಈ ಸೇವಾ ಕಾರ್ಯಗಳಿಗೆ ಸಾರ್ವಜನಿಕ ವಲಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ತೃಪ್ತಿ ತಂದಿದೆ ಎಂದರು.

ಆತ್ಮ ನಿರ್ಭರ ಕಾರ್ಯಕ್ರಮವು ಗಾಂಧಿ ಅವರ ಕನಸ್ಸಿನ ಕಾರ್ಯಕ್ರಮ. ಅದನ್ನು ಕೇಂದ್ರ ಸರ್ಕಾರ ಜಾರಿಗೆ ತರುವ ಪ್ರಯತ್ನ ಮಾಡುತ್ತಿದೆ. ಆದರೂ ಸಹ ಮೋದಿ ಅವರಿಗೆ ಸಲ್ಲುತ್ತಿರುವ ಜನ ಮೆಚ್ಚುಗೆಯನ್ನು ಸಹಿಸಲಾರದವರು ಟೀಕೆ ಮಾಡುತ್ತಿದ್ದಾರೆ. ಇದಕ್ಕೆಲ್ಲ ಸಾಧನೆಯೇ ಉತ್ತರ ನೀಡುತ್ತದೆ ಎಂದು ತಿಳಿಸಿದರು.

ಒಲೈಕೆ ರಾಜಕಾರಣ ಯುಪಿಎ ನಾಯಕರು ಮಾಡುತ್ತಿದ್ದಾರೆ. ಮೋದಿ ಅವರನ್ನು ಟೀಕೆ ಮಾಡುವದೇ ಅವರ ಕೆಲಸ. ರಾಜತಾಂತ್ರಿಕ ಶಕ್ತಿ ಇರೊದು ಮೋದಿ ಅವರಿಗೆ ಮಾತ್ರ. 11 ವರ್ಷಗಳ ಹಿಂದೆ ಪಾಕ್​ ವಿರುದ್ಧ ಯುದ್ಧ ಸಾರುತ್ತಿತ್ತು. ಇದೀಗ ದೊಡ್ಡಪ್ಪ ಅಂತ ಪ್ರಖ್ಯಾತಿ ಪಡೆದುಕೊಂಡಿರುವ ಅಮೆರಿಕ ಸಹ ಭಾರತವನ್ನು ಎದುರಾಕಿಕೊಳ್ಳಲು ಮುಂದಾಗಿತ್ತು. ಆನಂತರ ಭಾರತವನ್ನು ಎದುರಾಕಿಕೊಂಡು ಕಷ್ಟವಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಂಡಿದೆ. ಇದು ಇಡೀ ವಿಶ್ವಕ್ಕೆ ಸಂದೇಶ ಹೋಗಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ನಂತರ ಬಿಜೆಪಿ ಮುಖಂಡರು ನಗರ ಎಂಜಿ ರಸ್ತೆಯ ಕೆಲ ಅಂಗಡಿಗಳಿಗೆ ತೆರಳಿ ಖಾದಿ ಸಮವಸ್ತ್ರಗಳ ಖರೀದಿ ಮಾಡಿದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಬಿ.ವಿ.ಮಹೇಶ್​, ಬಾಬು, ಕೆಯುಡಿಎ ಮಾಜಿ ಅಧ್ಯಕ್ಷ ವಿಜಯ್​ಕುಮಾರ್​, ಮುಖಂಡರಾದ ಮಮತಮ್ಮ, ರಾಜೇಶ್​ ಸಿಂಗ್​, ವೆಂಕಟೇಶ್​ ಮತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net