

‘ವೇದಯತೀತಿ ವೇದಃ’ ಅಂದರೆ ಪರಮಾತ್ಮನ ವಿಚಾರವನ್ನು ತಿಳಿಸಿ ಹೇಳುವುದು ವೇದ. ವೇದಗಳ ಕಾಲವನ್ನು ವಿದ್ವಾಂಸರು 6000 ವರ್ಷಗಳಷ್ಟು ಪ್ರಾಚಿನವೆನ್ನುತ್ತಾರೆ. ವೇದ ಎಂದರೆ ಅರಿವು, ತಿಳಿವು, ಜ್ಞಾನ, ಪರಾತ್ಪರ ಶಕ್ತಿಯನ್ನು ಪ್ರತಿನಿಧಿಸುವ ದೇವತೆಗಳನ್ನು ಕುರಿತಾದ ಜ್ಞಾನ ಎಂದು ಅರ್ಥ. ಈ ಜ್ಞಾನವನ್ನು ತಿಳಿಸಿ ಕೊಡುವ ಉದ್ದೇಶದಿಂದಲೇ ಪರಮಾತ್ಮನ ಶ್ವಾಸ-ನಿಶ್ವಾಸದಿಂದ ವೇದಗಳು ಹುಟ್ಟಿಕೊಂಡವು. ಪುರುಷಪ್ರಕೃತವಲ್ಲದ ಈ ವೇದಗಳನ್ನು ಅಪೌರುಷೇಯ ಎಂದು ಕರೆಯಲಾಗಿದೆ. ವೇದವ್ಯಾಸರು ಋಗ್ವೇದ, ಯಜುರ್ವೆದ, ಸಾಮವೇದ, ಹಾಗೂ ಅಥರ್ವಣವೇದ ಎಂದು ವಿಭಾಗಿಸಿಕೊಟ್ಟರು.