

ಕೇರಳ: 'ಕಣ್ಸನ್ನೆ ಹುಡುಗಿ' ಎಂದು ಹೆಸರಾಗಿರುವ ಇಂಟರ್ನೆಟ್ ಸೆನ್ಸೆಷನ್, ಪ್ರತಿಭಾವಂತ ಮಾಲಿವುಡ್ ನಟಿ ಪ್ರಿಯಾ ಪಿ ವಾರಿಯರ್ ಇತ್ತೀಚೆಗೆ ತಮ್ಮ ಫೋಟೋಗಳೊಂದಿಗೆ ಪಡ್ಡೆ ಹೈಕಳ ನಿದ್ದೆ ಕದಿಯುತ್ತಿದ್ದಾರೆ. ಬಿಂಕ, ಬಿನ್ನಾಣದಿಂದ ಯುವಕರ ಹಾಟ್ ಫೇವರಿಟ್ ಆಗಿರುವ ವಾರಿಯರ್, ಗ್ಲಾಮರ್ ದಿರಿಸುಗಳಲ್ಲಿ ಆಕರ್ಷಕವಾದ ಮೈಮಾಟ ಪ್ರದರ್ಶಿಸಿ, ಅನುಯಾಯಿಗಳನ್ನು ಆಕರ್ಷಿಸುತ್ತಿದ್ದಾರೆ. ಸದ್ಯ ಈ ಫೋಟೋಗಳಲ್ಲಿ ಅವರು ಸೀರೆ ಧರಿಸಿ ನೀರಿನಲ್ಲಿ ಆಕರ್ಷಕವಾಗಿ ಪೋಸ್ ಕೊಟ್ಟಿರುವುದನ್ನು ನೋಡಬಹುದು.
ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಚಿತ್ರರಂಗದಲ್ಲಿ ನೆಲೆಯೂರುವ ಮುನ್ನವೇ ರಾತ್ರೋರಾತ್ರಿ ಊಹೆಗೂ ಮೀರಿದ ಖ್ಯಾತಿಯನ್ನು ಗಳಿಸಿದರು. ಇಂಟರ್ನೆಟ್ ಸೆನ್ಸೇಷನ್ ಆದರು. ಒರು ಅಡಾರ್ ಲವ್ನ ಮಾಣಿಕ್ಯ ಮಲರಾಯ ಪೂವಿ ಹಾಡಿನಲ್ಲಿ ಅವರ ಅಭಿವ್ಯಕ್ತಿ ನಟ್ಟಿಗರ ಮನಗೆದ್ದಿತು. ಇದು ಸಾಮಾಜಿಕ ಮಾಧ್ಯಮದಲ್ಲಿ ಅವರ ಖ್ಯಾತಿಗೆ ಕಾರಣವಾಯಿತು.
ಪ್ರಿಯಾ ಪ್ರಕಾಶ್ ವಾರಿಯರ್ ಕೊನೆಯ ಚಿತ್ರ 'ಲೈವ್' ಹಿರಿಯ ನಿರ್ದೇಶಕ ವಿಕೆ ಪ್ರಕಾಶ್ ಅವರ ಥ್ರಿಲ್ಲರ್ ಡ್ರಾಮಾ ಆಗಿತ್ತು. ಚಲನಚಿತ್ರವು ಹಲವಾರು ಸಾಮಾಜಿಕ ಸಮಸ್ಯೆಗಳನ್ನು ತಿಳಿಸಿದ್ದರೂ ಸಹ ಹೆಚ್ಚಾಗಿ ನಕಾರಾತ್ಮಕ ವಿಮರ್ಶೆಗಳನ್ನು ಗಳಿಸಿತು. ಗಲ್ಲಾಪೆಟ್ಟಿಗೆಯಲ್ಲಿ ಹೆಚ್ಚು ಗಳಿಕೆ ಕಾಣಲಿಲ್ಲ. ಈ ಚಿತ್ರದಲ್ಲಿ ಮಮತಾ ಮೋಹನ್ ದಾಸ್, ಶೈನ್ ಟಾಮ್ ಚಾಕೊ, ಸಬಿನ್ ಶಾಹಿದ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ, ಪ್ರಿಯಾ ವಾರಿಯರ್ ಅವರ ಇತ್ತೀಚಿನ ಚಿತ್ರ 'ಕೊಳ್ಳಾ' ಕೂಡ ಪ್ರೇಕ್ಷಕರನ್ನು ಮೆಚ್ಚಿಸಲು ವಿಫಲವಾಗಿದೆ.
ಒಮರ್ ಲುಲು ಅವರ 'ಒರು ಅಡಾರ್ ಲವ್' ಮೂಲಕ ಮಾಲಿವುಡ್ ಚಲನಚಿತ್ರೋದ್ಯಮಕ್ಕೆ ಪಾದಾರ್ಪಣೆ ಮಾಡಿದ ಪ್ರಿಯಾ ವಾರಿಯರ್, ಗಲ್ಲಾಪೆಟ್ಟಿಗೆಯಲ್ಲಿ ಇನ್ನೂ ಸರಿಯಾದ ಹಿಟ್ ಚಿತ್ರ ನೀಡಿಲ್ಲ. ಪ್ರಿಯಾ ಕೈಯ್ಯಲ್ಲಿ 'ಯಾರಿಯನ್ 2', 'ಲವ್' ಹ್ಯಾಕರ್ಸ್', '3 ಮಂಕೀಸ್', 'ಜುಲಿಯಾನಾ' ಮತ್ತು ''ಶ್ರೀದೇವಿ ಬಂಗಲೆ' ಸೇರಿದಂತೆ ಅನೇಕ ಚಿತ್ರಗಳಿವೆ. ಪ್ರಿಯಾ ಮಲಯಾಳಂ ಮಾತ್ರವಲ್ಲದೆ, ತೆಲುಗು, ಮಲಯಾಳಂ, ಹಿಂದಿ, ಕನ್ನಡ ಚಿತ್ರಗಳಲ್ಲಿಯೂ ನಟಿಸಿದ್ದಾರೆ.