ಸಿಬ್ಬಂದಿ ಇದನ್ನು ಸ್ವಚ್ಛಗೊಳಿಸಲು 3 ದಿನಗಳು ತೆಗೆದುಕೊಂಡರು, ಡಿಸ್‌ಇನ್ಫೆಕ್ಟ್ ಮಾಡಿದ ನಂತರವೂ ಕೊಠಡಿಗೆ ಹಾನಿಯಾಗಿದ್ದು, ರಿನೋವೇಷನ್ ಅಗತ್ಯವಾಯಿತು. ಆತ ಇನ್ನೂ 10 ದಿನಗಳ ರೂಮ್ ರೆಂಟ್ (ಸುಮಾರು 2700 ಯುವಾನ್) ಬಾಕಿ ಉಳಿಸಿಕೊಂಡು ಹೋಗಿದ್ದ ಎಂದು ಹೋಟೆಲ್ ಹೇಳಿದೆ. ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ, ಗೇಮಿಂಗ್ ಅಡಿಕ್ಷನ್, ಏಕಾಂತತೆ ಮತ್ತು ಹೋಟೆಲ್ ನಿಯಮಗಳ ಬಗ್ಗೆ ಚರ್ಚೆಗೆ ಕಾರಣವಾಗಿದೆ. ಈ-ಸ್ಪೋರ್ಟ್ಸ್ ಹೋಟೆಲ್‌ಗಳು ಗೇಮರ್‌ಗಳಿಗೆ ಪ್ರೈವಸಿ ನೀಡುವುದರಿಂದ ಕ್ಲೀನಿಂಗ್ ಆಪ್ಷನಲ್ ಆಗಿರುತ್ತದೆ, ಆದರೆ ಇಂಥಾ ತೀವ್ರತೆಯಲ್ಲಿ ಏನೂ ಮಾಡದೇ ಇರುವುದು ತಪ್ಪು ಎಂಬ ಟೀಕೆಗಳೂ ಬಂದಿವೆ,(ಏಜೆನ್ಸೀಸ್).