ಈ ವೆಬ್‌ಸೈಟ್‌ಗಳ ವಿಶೇಷತೆಯೆಂದರೆ, ಇವುಗಳು ನೋಡಲು ಶೇ. 100ರಷ್ಟು ಅಸಲಿ ಆಪ್‌ಗಳಂತೆಯೇ ಕಾಣುತ್ತವೆ. ಇವುಗಳಲ್ಲಿ ನಕಲಿ ಡೆಲಿವರಿ ಸಮಯ ಮತ್ತು ಗ್ರಾಹಕರ ಸ್ಟಾರ್ ರೇಟಿಂಗ್ಸ್ ಕೂಡ ಇರುತ್ತವೆ. ಬಳಕೆದಾರರು ತಮಗೆ ಬೇಕಾದ ವಸ್ತುಗಳನ್ನು ಆರಿಸಿ, ಆರ್ಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ಅನುಭವವನ್ನು ಪಡೆಯಬಹುದು. ಆದರೆ, ಕೊನೆಯಲ್ಲಿ ಇವರು ಯಾವುದೇ ಹಣವನ್ನು ಪಾವತಿಸಬೇಕಾಗಿಲ್ಲ ಮತ್ತು ಯಾವುದೇ ವಸ್ತು ಇವರ ಮನೆಗೆ ಡೆಲಿವರಿ ಆಗುವುದಿಲ್ಲ.